ಪರಿಚಯ
ಕೃಷಿ ಸಚಿವಾಲಯ
ದೃಷ್ಟಿಕೋನ:-
2020ನೇ ವರ್ಷದ ಅವಧಿಯೊಳಗೆ ಆಹಾರ ಭದ್ರತೆ ಒದಗಿಸುವುದರೊಂದಿಗೆ ಜೀವನಾಧಾರ ಕೃಷಿಯನ್ನು ಒಂದು ಸುಸ್ಥಿರ ಮತ್ತು ಸಕ್ರಿಯ ಉದ್ದಿಮೆಯನ್ನಾಗಿ ಮಾಡುವುದೇ ಆಗಿರುತ್ತದೆ.
ಗುರಿ:-
1. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಯಶಸ್ವಿ ಅನುಷ್ಟಾನಗೊಳಿಸುವುದರೊಂದಿಗೆ ರೈತರ ಆದಾಯ ಮಟ್ಟವನ್ನು ಉತ್ತಮಪಡಿಸಿ ಆಹಾರೋತ್ಪಾದನೆಯನ್ನು ಹೆಚ್ಚಿಸುವ ಮೂಲಕ ಕೃಷಿ ಕ್ಷೇತ್ರದ ಬೆಳವಣಿಗೆಯನ್ನು 4.5 ರಷ್ಟು ಗುರಿಯನ್ನು ಸಾಧಿಸುವುದಾಗಿದೆ.
2.
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳಲ್ಲಿ ಕಂಡು ಬಂದಿರುವ ಸವಾಲುಗಳನ್ನು ನೀಗಿಸಲು ಅವಶ್ಯಕ ಸಂಶೋಧನಾ ಫಲಿತಾಂಶಗಳನ್ನು ನೀಡುವುದು ಮತ್ತು ಪ್ರಮುಖ ಶಿಕ್ಷಣ ಅವಕಾಶಗಳನ್ನು ಒದಗಿಸುವುದು.
3. ಸುಸ್ಥಿರ ಕೃಷಿ ಅಭಿವೃದ್ದಿಗಾಗಿ ಜಾಗತಿಕ ಪೈಪೋಟಿಗಾಗಿ ಮಾನವ ಸಂಪನ್ಮೂಲ ಅವಕಾಶಗಳನ್ನು ಕಲ್ಪಿಸುವುದು.
4. ಸ್ವಾಭಾವಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಅವುಗಳ ನಿರಂತರ ಉಪಯೋಗವಾಗುವಂತೆ ಮಾಡುವುದು.
ಉದ್ದೇಶಗಳು:-
1. ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದು.
2. ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಆಹಾರ ಭದ್ರತೆ ಒದಗಿಸುವುದು.
3. ತಂತ್ರಜ್ಞಾನ ಪ್ರಸರಣೆ ಮತ್ತು ಅಭಿವೃದ್ದಿ.
4. ಕೃಷಿಯಲ್ಲಿ ಬಂಡವಾಳವನ್ನು ಉತ್ತೇಜಿಸುವುದು.