ನಾಗರೀಕರಿಗೆ ಸಮಗ್ರ ಸೇವೆಗಳನ್ನು ನೀಡಲು ಕರ್ನಾಟಕ ಸರ್ಕಾರವು ಐಸಿಟಿ (ಮಾಹಿತಿ ಸಂವಹನ ತಂತ್ರಜ್ಞಾನ) ಉಪಕರಣಗಳನ್ನು ಅಳವಡಿಸಿ ವೇಗವನ್ನು ಮತ್ತು ಅನುಕೂಲವನ್ನು ಹೆಚ್ಚಿಸಲು, ಖಚಿತವಾಗಿ ಮತ್ತು ಹೊಣೆಗಾರಿಕೆಯಿಂದ, ‘ಏಕೈಕ-ನೆಲೆ-ವಹಿವಾಟು’ ಅನುಕೂಲ ಕಲ್ಪಿಸಿ ಇಂತಹ ಸೇವೆಗಳನ್ನು ಒದಗಿಸಲು ಬೆಂಗಳೂರು ಒನ್ ಕೇಂದ್ರಗಳನ್ನು ಬೆಂಗಳೂರು ಮಹಾನಗರದಾದ್ಯಂತ ಸ್ಥಾಪಿಸಿತು. ಈ ಯೋಜನೆಯು 2ನೇ ಏಪ್ರಿಲ್ 2005 ರಲ್ಲಿ ಪ್ರಾರಂಭವಾಗಿದ್ದು, ಖಾಸಗೀ-ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ನಡೆಯುತ್ತಿದೆ.
ಅನೇಕ ಸರ್ಕಾರಿ ಇಲಾಖೆಗಳು ಹಾಗೂ ಉದ್ಯಮ ಸಂಸ್ಥೆಗಳ ಬಹುಮುಖೀ G2C & B2C ಸೇವೆಗಳನ್ನು ಬೆಂಗಳೂರು ಒನ್ ನಾಗರೀಕರ ಅನುಕೂಲಕ್ಕಾಗಿ ವಿತರಿಸುತ್ತದೆ. B2C ಸೇವೆಗಳ ಲಭ್ಯತೆಯಿಂದಾಗಿ, ಅನೇಕ ಔದ್ಯಮಿಕ ಸಂಸ್ಥೆಗಳು ಸರಕಾರದ ಇ-ಆಡಳಿತ ನೀತಿಯಿಂದ ಲಾಭ ಪಡೆದುಕೊಳ್ಳುತ್ತಿವೆ.
ಬೆಂಗಳೂರು ಒನ್ ಪೋರ್ಟಲ್ ಮೂಲಕವೂ ನಾಗರೀಕರು ಕೆಲವು G2C ಮತ್ತು B2C ಸೇವೆಗಳನ್ನು ಪಡೆದುಕೊಳ್ಳಬಹುದು.