ಕರ್ನಾಟಕದ ಪರಿಸರ ಸ್ಥಿತಿ ವರದಿ 2015
‘ಕರ್ನಾಟಕದ ಪರಿಸರ ಸ್ಥಿತಿ ವರದಿ 2015’ ಎಂಪ್ರಿಯು ಕೇಂದ್ರದ
ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ (MoEF&CC), ಭಾರತ ಸರ್ಕಾರ ಹಣಕಾಸಿನ ನೆರವಿನೊಂದಿಗೆ ‘ಕರ್ನಾಟಕದ ಪರಿಸರ ಸ್ಥಿತಿಯ ವರದಿ 2015’ (State of Environment Report Karnataka 2015)ರ ಆವೃತ್ತಿಯನ್ನು ಸಿದ್ಧಗೊಳಿಸಿದೆ. |
KARENVIS
ಕರ್ನಾಟಕ NIC CMS ಪೋರ್ಟಲ್ ಮೇಲೆ
www.karenvis.nic.in ENVIS ಕೇಂದ್ರವು ತನ್ನದೇ ಆದ ಒಂದು ಅಂತರ್ಜಾಲ ತಾಣವನ್ನು ಹೊಂದಿದೆ. MoEF & CC ಯು ನೀಡಿರುವ ಮಾರ್ಗದರ್ಶಿಯಂತೆ ಅಂತರ್ಜಾಲ ತಾಣದ ವಿಷಯಗಳು ಕರ್ನಾಟಕ ENVIS ಕೇಂದ್ರದಿಂದ ಪ್ರಕಟಿಸಲ್ಪಡುತ್ತವೆ ಮತ್ತು ನಿರ್ವಹಿಸಲ್ಪಡುತ್ತವೆ. ಪ್ರಸ್ತುತ ವಿಷಯದ ಬಗ್ಗೆ ಮಾಹಿತಿಯನ್ನು ಸುಲಭವಾಗಿ ಕೈಗೆಟಕುವಂತೆ ಮಾಡುವುದು, ಹೊಸದಾದ ಪ್ರಸ್ತುತಿ ಮತ್ತು ಹೆಚ್ಚಿನ ಆಕರ್ಷಣೀಯವಾಗಿಸುವುದು ಮರುವಿನ್ಯಾಸ ಮತ್ತು ಪುನರ್ವಿನ್ಯಾಸದ ಉದ್ದೇಶವಾಗಿದೆ. |
ಭಾರತೀಯ ರಾಜ್ಯ ಮಟ್ಟದ ಮೂಲಭೂತ ಪರಿಸರ ಮಾಹಿತಿ ಡೇಟಾಬೇಸ್
ಭಾರತೀಯ ರಾಜ್ಯ ಮಟ್ಟದ ಮೂಲಭೂತ ಪರಿಸರ ಮಾಹಿತಿ ಡೇಟಾಬೇಸ್ (The Indian State-Level Basic Environmental Information Database) ವು ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ, ನೀತಿ ನಿರೂಪಕರಿಗೆ ಮತ್ತು ದೊಡ್ಡ ಮಟ್ಟದಲ್ಲಿ ಸಾರ್ವಜನಿಕರಿಗೆ ಪರಿಸರ ಸ್ಥಿತಿ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಭಾರತ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಒಂದು ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಮಾಹಿತಿಯ ಸಂಗ್ರಹಣೆ, ಸಂಕಲನ, ಮತ್ತು ಆಯಾ ಘಟಕಗಳಲ್ಲಿ (Modules) ಮಾಹಿತಿ ನಮೂದಿಸುವುದು 2016-17ನೇ ಸಾಲಿನ ಪ್ರಮುಖ ಕಾರ್ಯವಾಗಿದೆ. 2016-17 ನೇ ಸಾಲಿನಲ್ಲಿ ನಮೂದಿಸಿದ ಒಟ್ಟು ಡೇಟಾ = 19,192
|
ಸುದ್ದಿಪತ್ರಗಳು
ಮಾಹಿತಿ ಸಂಗ್ರಹಣೆ, ಸಂಸ್ಕರಣೆ ಮತ್ತು ಪ್ರಸಾರವು ENVIS ಕೇಂದ್ರದ ಕೆಲವು ಉದ್ದೇಶಗಳಾಗಿವೆ. ಈ ಉದ್ದೇಶಗಳನ್ನು ಪೂರ್ಣಗೊಳಿಸಲು ಕೇಂದ್ರವು ಪರಿಸರದ ವಿಷಯಗಳನ್ನೊಳಗೊಂಡ ಮತ್ತು ಪರಿಸರಕ್ಕೆ ಸಂಬಂಧಿಸಿದ “ಪರಿಸರ” ಹೆಸರಿನ ತ್ರೈಮಾಸಿಕ ಸುದ್ದಿಪತ್ರ ಪ್ರಕಟಿಸುತ್ತಿದೆ. ಈ ಸುದ್ದಿ ಪತ್ರಿಕೆ ಕರ್ನಾಟಕ ರಾಜ್ಯದ ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸಿದೆ.
|