ಕಾರ್ಯನೀತಿ
ರೇಷ್ಮೆ ಇಲಾಖೆಯು ರಾಜ್ಯದಲ್ಲಿ ರೇಷ್ಮೆ ಚಟುವಟಿಕೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಲಾಖೆಯು ಕೆಳಕಂಡ ಮುಖ್ಯ ಸೇವೆಗಳನ್ನು ಸಲ್ಲಿಸುತ್ತಿದೆ.
1. ರೇಷ್ಮೆ ಕೃಷಿ ಚಟುವಟಿಕೆಗಳಾದ ಹಿಪ್ಪುನೇರಳೆ ವ್ಯವಸಾಯ, ರೇಷ್ಮೆ ಹುಳು ಸಾಕಾಣಿಕೆ, ನೂಲು ಬಿಚ್ಚಾಣಿಕೆ ಇತ್ಯಾದಿಗಳ ಬಗ್ಗೆ ತಾಂತ್ರಿಕ ಮಾರ್ಗದರ್ಶನ ನೀಡುವುದು ಮತ್ತು ತರಬೇತಿ ಒದಗಿಸುವುದು.
2. ಅಧಿಕ ಇಳುವರಿ ನೀಡುವ ಹಿಪ್ಪುನೇರಳೆ ಮತ್ತು ರೇಷ್ಮೆ ಹುಳುವಿನ ತಳಿಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಒದಗಿಸುವುದು.
3. ಹಿಪ್ಪುನೇರಳೆ ಹಾಗೂ ರೇಷ್ಮೆ ಹುಳುವಿನ ಮೂಲ ಬಿತ್ತನೆ ನಿರ್ವಹಿಸುವುದು ಮತ್ತು ರೋಗರಹಿತ ರೇಷ್ಮೆ ಮೊಟ್ಟೆಗಳನ್ನು ರೈತರಿಗೆ ಒದಗಿಸಲು ವ್ಯವಸ್ಥೆಗಳನ್ನು ರೂಪಿಸುವುದು.
4. ರೇಷ್ಮೆ ಬೆಳೆಗಾರರಿಗೆ ವಿಸ್ತರಣೆ, ಚಾಕಿ ಸಾಕಾಣೆ ಮತ್ತು ರೋಗ ನಿಯಂತ್ರಣ ಸೌಲಭ್ಯ ಒದಗಿಸುವುದು.
5. ರೇಷ್ಮೆ ಚಟುವಟಿಕೆಗಳಿಗಾಗಿ ಬ್ಯಾಂಕುಗಳಿಂದ ಸಾಲ/ಸೌಲಭ್ಯ ಪಡೆಯಲು ರೈತರಿಗೆ/ನೂಲು ಬಿಚ್ಚಾಣಿಕೆದಾರರಿಗೆ ಸಹಾಯ ಮಾಡುವುದು.
6. ರೇಷ್ಮೆ ಗೂಡು ಮತ್ತು ಕಚ್ಚಾ ರೇಷ್ಮೆ ಮಾರಾಟಕ್ಕೆ ಸೌಲಭ್ಯಗಳನ್ನು ಒದಗಿಸುವುದು.
7. ರೇಷ್ಮೆ ಗೂಡು ಮತ್ತು ರೇಷ್ಮೆ ನೂಲಿಗೆ ಸೂಕ್ತದರ ದೊರೆಯಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು.
8. ರೇಷ್ಮೆ ಬೆಳೆಗಾರರು ಮತ್ತು ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಹೊಸ ತಾಂತ್ರಿಕತೆಗಳನ್ನು ಅಳವಡಿಸಿ ಉತ್ಪಾದನೆ, ಉತ್ಪಾದಕತೆ ಮತ್ತು ಗುಣಮಟ್ಟ ಹೆಚ್ಚಿಸಿ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಪ್ರೇರೇಪಿಸುವುದು.
9. ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿಯನ್ನು ಬಲಪಡಿಸುವುದು.