ಆಗಾಗ್ಗೆ ಕೇಳಿ ಬರುವ ಪ್ರಶ್ನೆಗಳು :
-
ಯಾರು ದೂರನ್ನು ನೀಡಬಹುದು / ಮಾಹಿತಿಯನ್ನು ರವಾನಿಸಬಹುದು / ಎಸಿಬಿ ಗೆ ಭೇಟಿ ನೀಡಬಹುದು. ..…?
ಯಾರೇ ಆದರೂ ದೂರನ್ನು ನೀಡಬಹುದು ಅಥವಾ ಎಸಿಬಿ ಗೆ ಮಾಹಿತಿಯನ್ನು ರವಾನಿಸಬಹುದು.
-
ಎಸಿಬಿ ಅಧಿಕಾರಿಗಳನ್ನು ಭೇಟಿ ಮಾಡುವ ಬಗೆ ಹೇಗೆ?
ನೀವು ನಿಮ್ಮ ಹತ್ತಿರದ ಎಸಿಬಿ ಅಧಿಕಾರಿಯನ್ನು ವ್ಯಕ್ತಿಗತವಾಗಿ ಸಂಪರ್ಕಿಸಬಹುದು ಅಥವಾ ದೂರವಾಣಿಯ/ ಇ-ಮೇಲ್ ನ ಮೂಲಕ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ/ ಇ-ಮೇಲ್ ವಿಳಾಸವನ್ನು ‘ಸಂಪರ್ಕಿಸಿ’ ಪುಟದಲ್ಲಿ ಕಾಣಬಹುದು.
-
ಲಿಖಿತ ದೂರೇನಾದರೂ ಅವಶ್ಯಕವೇ. . . .?
ಹೌದು. ದೂರುಗಳನ್ನು ಲಿಖಿತ ರೂಪದಲ್ಲಿ ನೀಡಬೇಕಿದೆ. ಆದರೆ, ಮಾಹಿತಿಯನ್ನು ಇನ್ನಿತರ ರೂಪಗಳಲ್ಲಿಯೂ ರವಾನಿಸಬಹುದು ಉದಾ:- ದೂರವಾಣಿಯ ಮೂಲಕ, ಇ-ಮೇಲ್ ಮೂಲಕ, ಅಥವಾ ವ್ಯಕ್ತಿಗತವಾಗಿ ಎಸಿಬಿ ಅಧಿಕಾರಿಗಳಿಗೆ ಅಂತೆಯೇ ಅಂಚೆಯ ಮೂಲಕವೂ ರವಾನಿಸಬಹುದಾಗಿದೆ.
-
ದೂರು/ಮಾಹಿತಿ ನೀಡಲು ಎಸಿಬಿ ಯಾವುದಾದರೂ ನಮೂನೆಯನ್ನು ಹೊಂದಿದೆಯೇ?
ಇಲ್ಲ.
-
ದೂರುದಾರರು ದೂರನ್ನು ಎಲ್ಲಿ ನೋಂದಾಯಿಸಬಹುದು?
ದೂರುದಾರರ ನಿವಾಸದ ಸ್ಥಳದಲ್ಲಿ ಅಥವಾ ಸಾರ್ವಜನಿಕ ಸೇವಕನ ಕೆಲಸದ ಸ್ಥಳದಲ್ಲಿ.
-
ಯಾವ ರೀತಿಯ ಅಪರಾಧಗಳನ್ನು ಎಸಿಬಿಯು ತನಿಖೆ ಮಾಡುತ್ತದೆ?
ಟ್ರ್ಯಾಪ್, ಅಳತೆಗೆ ನಿಲುಕದ ಸ್ವತ್ತುಗಳು (ಸಾರ್ವಜನಿಕ ಸೇವಕನಿಂದ ಸಾಧ್ಯತೆ ಮೀರಿದ ಸಂಪತ್ತು ಕ್ರೋಢೀಕರಣ) ಹಾಗೂ ಸಾರ್ವಜನಿಕ ಸೇವಕರ ಅಪರಾಧಕಾರಿ ದುರ್ವರ್ತನೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ, 1988ರ ಅಡಿಯಲ್ಲಿ ಅವಕಾಶ ಕಲ್ಪಿಸಿರುವ ಎಲ್ಲಾ ಪ್ರಕರಣಗಳನ್ನೂ ದಳವು ನಿರ್ವಹಿಸುತ್ತದೆ.
-
ಟ್ರ್ಯಾಪ್ ಎಂದರೇನು? ದೂರುದಾರರು ಯಾವಾಗ ಟ್ರ್ಯಾಪ್ ದೂರನ್ನು ನೀಡಬಹುದು?
ಆಪಾದಿತನೊಬ್ಬನು (ಸಾರ್ವಜನಿಕ ಸೇವಕ) ಲಂಚದ ಹಣ ನೀಡುವಂತೆ ಒತ್ತಾಯ ಮಾಡುತ್ತಿರುವಾಗ ಅಥವಾ ಸ್ವೀಕರಿಸುತ್ತಿರುವಾಗ ಸಾಕ್ಷೀಸಮೇತವಾಗಿ ಹಿಡಿದ ಸಂದರ್ಭದಲ್ಲಿ. ಅಂತೆಯೇ, ಕಾನೂನುಬದ್ಧ ಕೆಲಸವನ್ನು ಮಾಡುವಾಗ ಅಥವಾ ಮಾಡದಿರುವಾಗ ಲಂಚಕ್ಕಾಗಿ ಒತ್ತಾಯಿಸುತ್ತಿದ್ದರೆ ದೂರುದಾರನು ಟ್ರ್ಯಾಪ್ ದೂರನ್ನು ನೀಡಬಹುದು.
-
ಟ್ರ್ಯಾಪ್ ಗಾಗಿ ಬಳಸಿದ ಹಣವನ್ನು ಯಾರು ಒದಗಿಸುತ್ತಾರೆ? ಟ್ರ್ಯಾಪ್ ಹಣವನ್ನು ದೂರುದಾರನಿಗೇನಾದರೂ ಹಿಂತಿರುಗಿಸಲಾಗುವುದೇ?
ಟ್ರ್ಯಾಪ್ ಮಾಡಲು ಬಳಸುವ ಹಣವನ್ನು ನೊಂದ ದೂರುದಾರನೇ ಒದಗಿಸಬೇಕಾಗುತ್ತದೆ. ಆನಂತರ, ಟ್ರ್ಯಾಪ್ ಹಣವನ್ನು ದೂರುದಾರನಿಗೆ ಕೆಲವು ದಿನಗಳ ನಂತರ ಹಿಂತಿರುಗಿಸಲಾಗುವುದು.
-
ದೂರುದಾರನ ಗುರುತನ್ನು ಎಸಿಬಿಯು ಗುಪ್ತವಾಗಿರಿಸುವುದೇ? ವ್ಯಕ್ತಿಯೊಬ್ಬನು/ಳು ಎಸಿಬಿಗೆ ದೂರು ಕೊಟ್ಟರೆ ಅಥವಾ ಮಾಹಿತಿಯನ್ನು ರವಾನಿಸಿದರೆ ಆ ವ್ಯಕ್ತಿಗೆ ಏನು ರಕ್ಷಣೆ ಇದೆ?
ಹೌದು. ಟ್ರ್ಯಾಪ್ ದೂರುಗಳೇನಾದರೂ ಇದ್ದರೆ, ಅದರ ಹೊರತಾಗಿ ದೂರುದಾರನ ಗುರುತನ್ನು ಗುಪ್ತವಾಗಿಡಲಾಗುತ್ತದೆ. ಯಾವುದೇ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಎಸಿಬಿಯು ಸಾರ್ವಜನಿಕ ಸೇವಕನೊಬ್ಬನನ್ನು ಟ್ರ್ಯಾಪ್ ಮಾಡಿದಲ್ಲಿ, ಅಂತಹ ವ್ಯಕ್ತಿಯ ಆಸಕ್ತಿಯನ್ನು ಕಾಪಾಡಲಾಗುತ್ತದೆ/ ರಕ್ಷಿಸಲಾಗುತ್ತದೆ.
-
ವ್ಯಕ್ತಿಯೊಬ್ಬನು/ಳು ದೂರು ನೀಡಿದರೆ/ ಮಾಹಿತಿ ನೀಡಿದರೆ ಅವನು/ಅವಳಿಗೆ ಬಹುಮಾನ ನೀಡಲಾಗುತ್ತದೆಯೇ . . .?
ಪ್ರಕರಣದ ಯೋಗ್ಯತಾನುಸಾರವಾಗಿ ದೂರುದಾರರಿಗೆ ಸೂಕ್ತವಾಗಿ ಬಹುಮಾನ ನೀಡಲಾಗುತ್ತದೆ.
ಷರಾ:-
ನಿಮಗೆ ಇನ್ನಿತರ ಏನಾದರೂ ಪ್ರಶ್ನೆಗಳು/ ಸಂದೇಹಗಳು ಇದ್ದಲ್ಲಿ, ಸ್ಪಷ್ಟೀಕರಣಕ್ಕಾಗಿ ದಯಮಾಡಿ ಹತ್ತಿರದ ಎಸಿಬಿ ಕಛೇರಿಯನ್ನು ಸಂಪರ್ಕಿಸಿ.
