×
Click On
Integrated e-Payment System
Government of Karnataka
Sign In
Screen Reader
English
ಗಣಿ ಮತ್ತು ಭೂವಿಜ್ಞಾನ ಇಲಾಖೆ
ಕರ್ನಾಟಕ ಸರ್ಕಾರ
Toggle navigation
DMG
ಮುಖಪುಟ
ನಮ್ಮ ಬಗ್ಗೆ
ಪರಿಚಯ
ಆಡಳಿತಾತ್ಮಕ ವ್ಯವಸ್ಥೆ
ಖನಿಜಗಳು
ಮಾಹಿತಿ ಹಕ್ಕು
ಟೆಂಡರ್ ಮತ್ತು ಅಧಿಸೂಚನೆಗಳು
ಇ-ಟೆಂಡರ್
ಅಧಿಸೂಚನೆಗಳು
ಕಾಯ್ದೆ ಮತ್ತು ನಿಯಮ
ದಾಖಲೆಗಳು
ಸಂಪರ್ಕಿಸಿ
ನಮ್ಮ ಬಗ್ಗೆ
.
.
ಪರಿಚಯ
ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಬಹು ಮುಖ್ಯವಾದ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಯಾಗಿರುತ್ತದೆ. ಖನಿಜಾನ್ವೇಷಣೆ, ಖನಿಜಾಡಳಿತ ಮತ್ತು ಅವುಗಳ ನಿರ್ವಹಣೆಯು ಮುಖ್ಯ ಕ್ಷೇತ್ರ ಕಾರ್ಯಗಳಾಗಿದ್ದು, ಈ ಕೆಳಕಂಡಂತಹ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬಂದಿದೆ..
1. ರಾಜ್ಯದಾದ್ಯಂತ ಕಲ್ಲುಗಣಿಗಳು ಮತ್ತು ಮುಖ್ಯ ಖನಿಜಗಳ ಗಣಿ ಚಟುವಟಿಕೆಗಳನ್ನು ನಿಯಂತ್ರಿಸುವುದು, ಖನಿಜ ಸಂರಕ್ಷಣೆ ಮತ್ತು ವೈಜ್ಞಾನಿಕ ಗಣಿಗಾರಿಕೆ ಇಲಾಖೆಯ ಮುಖ್ಯ ಉದ್ದೇಶಗಳಾಗಿದ್ದು, ಇಲಾಖೆಯ ಅಧಿಕಾರಿಗಳು ನಿಗಧಿತ ಅವಧಿಯಲ್ಲಿ ಜರುಗಿಸುವ ಸ್ಥಳ ಪರಿಶೀಲನೆಯಿಂದ ಗಣಿಗುತ್ತಿಗೆ ಪ್ರದೇಶಗಳಲ್ಲಿ ಒತ್ತುವರಿ ಮತ್ತು ಅಕ್ರಮ ಗಣಿಗಾರಿಕೆ ತಡೆಯುವುದು, ಖನಿಜಗಳ ಸಾಗಾಣಿಕೆ ನಿಯಂತ್ರಿಸುವುದು ಮತ್ತು ನಿಯಮಾನುಸಾರ ಕಲ್ಲು ಗಣಿ ಗುತ್ತಿಗೆ ಮತ್ತು ಗಣಿ ಗುತ್ತಿಗೆಗಳನ್ನು ಮಂಜೂರು ಮಾಡುವುದು ಇಲಾಖೆಯ ಕರ್ತವ್ಯಗಳಾಗಿರುತ್ತವೆ.
2. ರಾಜ್ಯದಾದ್ಯಂತ ಮುಖ್ಯ ಖನಿಜ ಮತ್ತು ಉಪ ಖನಿಜಗಳ ಉತ್ಪಾದನೆ ಮತ್ತು ಸಾಗಾಣಿಕೆಯನ್ನಾಧರಿಸಿ ರಾಜಧನ ಸಂಗ್ರಹಣೆ ಮಾಡುವುದು.
3. ರಾಜ್ಯದಾದ್ಯಂತ ಖನಿಜ ಸಂಪತ್ತಿನ ಅನ್ವೇಷಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
4.ಅನಧಿಕೃತ ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ಚಟುವಟಿಕೆಗಳನ್ನು ನಿಯಂತ್ರಿಸಿ ರಾಜ್ಯದ ಬೊಕ್ಕಸಕ್ಕೆ ಹೆಚ್ಚಿನ ರಾಜಧನವನ್ನು ಸಂಗ್ರಹಿಸುವುದು.
5. ನವೀನ ತಂತ್ರಜ್ಞಾನದ ಸಹಾಯದಿಂದ ಖನಿಜಾನ್ವೇಷಣೆ ಮತ್ತು ಅಭಿವೃದ್ಧಿಯ ಕಾರ್ಯವನ್ನು ನಡೆಸುವಲ್ಲಿ ಖನಿಜದ ದರ್ಜೆ ಮತ್ತು ಕೈಗಾರಿಕೆಯಲ್ಲಿ ಅದರ ಉಪಯುಕ್ತತೆ, ಖನಿಜಗಳ ರಫ್ತು ಮತ್ತು ಖನಿಜವನ್ನು ಅವಲಂಭಿಸಿದ ಕೈಗಾರಿಕೆಗಳಿಗೆ ಅನುಕೂಲವಾಗುವ ಅಧ್ಯಯನವನ್ನು ಕೈಗೊಳ್ಳುವುದು.
6. ಭೂಮಿಯ ಮೇಲೆ ಖನಿಜಗಳನ್ನು ಗುರುತಿಸಿದಾಗ, ಭೂಮಿಯ ಆಳದಲ್ಲಿ ಅವುಗಳ ಲಭ್ಯತೆ ಹಾಗೂ ಖನಿಜ ಪ್ರಮಾಣಗಳನ್ನು ನಿರ್ಧರಿಸಲು ನಿಕ್ಷೇಪ ಅಂದಾಜು ಮಾಡಲು ಕ್ರಮಗಳನ್ನು ಕೈಗೊಳ್ಳುವುದು.
7. ರಸಾಯನ ಪ್ರಯೋಗಶಾಲೆಗಳಲ್ಲಿ ನೀರಿನ ಮಾದರಿಗಳ ಗುಣಮಟ್ಟ ವಿಶ್ಲೇಷಣೆ ಮತ್ತು ಖನಿಜ ಮಾದರಿಗಳಲ್ಲಿ ಶೇಕಡಾವಾರು ಖನಿಜಾಂಶದ ವಿಶ್ಲೇಷಣೆ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ.
8. ಅನಧಿಕೃತ ಗಣಿಗಾರಿಕೆ ಮತ್ತು ಖನಿಜ ಸಾಗಾಣಿಕೆಯನ್ನು ನಿಯಂತ್ರಿಸಲು ರಾಜ್ಯದ ಆಯಕಟ್ಟಿನ ಸ್ಥಳಗಳಲ್ಲಿ ಹಾಗೂ ಅಂತರರಾಜ್ಯ ಖನಿಜ ಸಾಗಾಣಿಕೆಯನ್ನು ತಡೆಗಟ್ಟಲು ಅಂತರರಾಜ್ಯ ಗಡಿ ತನಿಖಾ ಠಾಣೆಗಳ ಅಭಿವೃದ್ಧಿಳನ್ನು ನಿರ್ಮಿಸಲಾಗಿದ್ದು, ಕಾರ್ಯ ನಿರ್ವಹಿಸಲಾಗುತ್ತಿದೆ.
9. ಗಣಿಗಾರಿಕೆ ಮೌಲ್ಯವರ್ಧನೆಯ ಸಂಪೂರ್ಣ ಸರಣಿಯಲ್ಲಿರುವ ಎಲ್ಲಾ ಲೋಪದೋಷಗಳನ್ನು ನಿವಾರಿಸುವ ಸಲುವಾಗಿ “ವಿದ್ಯುನ್ಮಾನ ಆಡಳಿತದ ಮೂಲಕ ಖನಿಜಾಡಳಿತ ರೂಪಾಂತರ ಯೋಜನೆ” (‘Transformation of Mineral Administration through e-Governance’) ಯನ್ನು ಅಳವಡಿಸಲಾಗಿದೆ.
10. ಖನಿಜ ಆಡಳಿತದ ಗಣಕೀಕರಣದ ಮೂಲಕ ಉತ್ತಮ ಆಡಳಿತ
11. ಸುಸ್ಥಿರ ಗಣಿಗಾರಿಕೆ ಮತ್ತು ಅಭಿವೃದ್ಧಿ
ನಮ್ಮ ಬಗ್ಗೆ
ಕರ್ನಾಟಕದ ಭೂವಿಜ್ಞಾನ
ಖನಿಜಗಳು
ಪ್ರಶಸ್ತಿಗಳು
Last modified at 24/09/2021 15:13 by dmguser
Top