ನಮ್ಮ ಬಗ್ಗೆ

ಖನಿಜ ಸಂಪನ್ಮೂಲಗಳು


ಕರ್ನಾಟಕ, ಇತರ ರಾಜ್ಯಗಳಿಗೆ ಹೋಲಿಸಿದಾಗ ಆಕಾರದಲ್ಲಿ ಕಿರಿದೆಂದು ಕಂಡರೂ ಸಂಪದ್ಬರಿತವಾದ ರಾಜ್ಯ.ಅನೇಕ ಉಪಯುಕ್ತ ಖನಿಜಗಳಿಗೆ ಅದು ತವರುಮನೆ.ಚಿನ್ನ ಉತ್ಪತ್ತಿಯಾಗುತ್ತಿರುವುದು ಈ ರಾಜ್ಯವೊಂದರಲ್ಲಿ ಮಾತ್ರ. ಬೆಲೆ ಬಾಳುವ ಕಬ್ಬಿಣ,ಮ್ಯಾಂಗನೀಸ್,ಕ್ರೋಮಿಯಂ ಅದಿರುಗಳೂ ಇಲ್ಲಿ ದೊರೆಯುತ್ತವೆ.ಕಬ್ಬಿಣ ಸಂಬಂಧವಲ್ಲದ ಅಲ್ಯುಮಿನಿಯಂ, ತಾಮ್ರ, ತವರ, ಸೀಸ ಮುಂತಾದ ಲೋಹದ ಅದಿರುಗಳು, ಅಷ್ಟೇನೂ ಹೆಚ್ಚಿನ ಪ್ರಮಾಣದಲ್ಲಿ ಅಲ್ಲದಿದ್ದರೂ ರಾಜ್ಯಕ್ಕೆ ಸಾಕಾಗುವಷ್ಟು ಪ್ರಮಾಣದಲ್ಲಿ ದೊರೆಯುತ್ತವೆ. ಇವೇ ಅಲ್ಲದೆ ಕೈಗಾರಿಕೆಗಳಿಗೆ ಬೇಕಾಗುವ, ಕಲ್ನಾರು,ಬಾಕ್ಸೈಟ್ (ಅಲ್ಯುಮಿನಿಯಂ ಅದಿರು), ಕುರಂದ,ಸಣ್ಣಕಲ್ಲು, ಸುದ್ದೆ,ಕಯನೈಟ್, ಮ್ಯಾಗ್ನಸೈಟ್, ಬೆಣಚು, ಬಳಪ ಕಲ್ಲು, ಕಡಲತೀರಗಳಲ್ಲಿ ಶೇಖರವಾಗಿರುವ ಮರಳು ಇವು ಹೇರಳವಾಗಿ ದೊರೆಯುತ್ತವೆ.

ಇವೇ ಅಲ್ಲದೆ ಕರ್ನಾಟಕ ರಾಜ್ಯದಲ್ಲಿ ಬಹು ಬಗೆಯ ಅಂದ ಚಂದದ ಅಲಂಕಾರಿಕ ಶಿಲೆಗಳು (Ornamental stone) ದೊರೆಯುತ್ತವೆ.ಈ ಕಲ್ಲುಗಳನ್ನು ಉಪಯೋಗಿಸಿ ಕಟ್ಟಿರುವ ಭವ್ಯವಾದ ಕಟ್ಟಡಗಳನ್ನು,ದೇವಾಲಯಗಳನ್ನು, ಮಂದಿರಗಳನ್ನು ರಾಜ್ಯದ ಎಲ್ಲ ಕಡೆ ಕಾಣಬಹುದು.ಸಾವಿರ ವರ್ಷಗಳು ಕಳೆದರೂ, ಹೊಚ್ಚ ಹೊಸದಾಗಿ ಕಾಣುವ ದೇವಮಂದಿರಗಳು, ವಿಗ್ರಹಗಳು,ರಾಜ್ಯದ ಶಿಲಾ ಸಂಪತ್ತು ಎಷ್ಟು ಮಹತ್ವದ್ದು ಎನ್ನುವುದನ್ನು ತೋರಿಸುತ್ತವೆ.

Last modified at 12/08/2021 14:22 by dmguser

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಗಣಿ ಮತ್ತು ಭೂವಿಜ್ಞಾನ ಇಲಾಖೆ , ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

Top