ಸಾರ್ವಜನಿಕ ಉದ್ದಿಮೆಗಳ ಇಲಾಖೆ
ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಸಾರ್ವಜನಿಕ ಉದ್ದಿಮೆಗಳ ಬ್ಯುರೋವನ್ನು (ಕೆಎಸ್ಬಿಪಿಇ) ಜುಲೈ 1980ರಲ್ಲಿ ಸ್ಥಾಪಿಸಿತು. ಕೆಎಸ್ಬಿಪಿಇ ನ ಮುಖ್ಯ ಕಾರ್ಯಗಳು ಈ ಕೆಳಕಂಡತಿದ್ದವು:
1) ಸದನಕ್ಕೆ ಸಲ್ಲಿಸುವ ಉದ್ದೇಶಕ್ಕಾಗಿ ರಾಜ್ಯ ಸಾರ್ವಜನಿಕ ಉದ್ದಿಮೆಗಳ ವಾರ್ಷಿಕ ವರದಿಯನ್ನು ತಯಾರಿಸುವುದು.
2) ಮ್ಯಾನೇಜ್ಮೆಂಟ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕರಿಸುವುದು
3) ಎಂಐಎಸ್ ಸಿಸ್ಟಮ್ಗಳನ್ನು ಅಭಿವೃದ್ಧಿಗೊಳಿಸುವುದು
ಕರ್ನಾಟಕ ಸರ್ಕಾರವು ರಾಜ್ಯದ ಸಾರ್ವಜನಿಕ ಉದ್ದಿಮೆಗಳ ಕಾರ್ಯನಿರ್ವಹಣೆಯನ್ನು ವರ್ಧಿಸುವ ಬಗ್ಗೆ ಅಧ್ಯಯನ ನಡೆಸಲು ಶ್ರೀ ಪಿ. ಪದ್ಮನಾಭನ್, ಭಾ.ಆ.ಸೇ,
ಇವರ ನೇತೃತ್ವದಲ್ಲಿಸಮಿತಿಯೊಂದನ್ನು ರಚಿಸಿತ್ತು. ಪದ್ಮನಾಭನ್ ಸಮಿತಿಯು ಈ ಉದ್ದೇಶಕ್ಕಾಗಿ ಸಚಿವಾಲಯ ಇಲಾಖೆಯ ಸ್ತರದಲ್ಲಿ ಒಂದು ಪ್ರತ್ಯೇಕ ನೋಡಲ್ ಇಲಾಖೆಯನ್ನು ರಚಿಸುವಂತೆ ಶಿಫಾರಸ್ಸು ಮಾಡಿತ್ತು.
2002ರಲ್ಲಿ ಕೆಎಸ್ಬಿಪಿಇ ಯನ್ನು ಬ್ಯುರೋದಿಂದ ಒಂದು ಇಲಾಖೆಯಾಗಿ ಪರಿವರ್ತಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಡಿ ಇರಿಸಿ ಡಿಸ್ಇನ್ವೆಸ್ಟ್ಮೆಂಟ್ &
ಪಬ್ಲಿಕ್ ಎಂಟರ್ಪ್ರೈಸ್ರಿಫಾಮ್ರ್ಸ್ ಇಲಾಖೆ (ಡಿಡಿಪಿಇಆರ್) ಎಂದು ಮರುನಾಮಕರಣ ಮಾಡಲಾಯಿತು.
ಡಿಡಿಪಿಆರ್ ನ ಮುಖ್ಯ ಚಟುವಟಿಕೆಗಳು ಈ ಕೆಳಕಂಡಂತಿದ್ದವು:-
1) ಬಂಡವಾಳ ಹಿಂತೆಗೆತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆಗೊಳಿಸುವುದು ಹಾಗೂ ಬಗೆಹರಿಸುವುದು.
2) ವಿಲೀನಕ್ಕೆ ಸಂಬಂಧಿಸಿದ ವಿಷಯಗಳು
3) ಉದ್ದಿಮೆಗಳ ಪುನರ್-ಸಂಘಟನೆ
4) ಆರ್ಥಿಕ ವ್ಯವಹಾರ
5) ಉದ್ದಿಮೆಗಳ ಮುಚ್ಚುವಿಕೆ ಹಾಗೂ ಖಾಸಗೀಕರಣ
6) ಒಡಂಬಡಿಕೆಗಳ ನಿರ್ವಹಣೆ
ಮತ್ತಷ್ಟು ಓದು...