ಸಾರ್ವಜನಿಕ ಉದ್ದಿಮೆಗಳ​ ಇಲಾಖೆ​

ಕರ್ನಾಟಕ ಸರ್ಕಾರ

cmk2k
GOK > DPE > Kannada > ಪರಿಚಯ
Last modified at 23/08/2017 17:04 by System Account

ಪರಿಚಯ


ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಸಾರ್ವಜನಿಕ ಉದ್ದಿಮೆಗಳ ಬ್ಯುರೋವನ್ನು (ಕೆಎಸ್ಬಿಪಿಇ) ಜುಲೈ 1980ರಲ್ಲಿ ಸ್ಥಾಪಿಸಿತು. ಕೆಎಸ್ಬಿಪಿಇ ಮುಖ್ಯ ಕಾರ್ಯಗಳು ಕೆಳಕಂಡತಿದ್ದವು:

1) ಸದನಕ್ಕೆ ಸಲ್ಲಿಸುವ ಉದ್ದೇಶಕ್ಕಾಗಿ ರಾಜ್ಯ ಸಾರ್ವಜನಿಕ ಉದ್ದಿಮೆಗಳ ವಾರ್ಷಿಕ ವರದಿಯನ್ನು ತಯಾರಿಸುವುದು.

2) ಮ್ಯಾನೇಜ್ಮೆಂಟ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕರಿಸುವುದು

3) ಎಂಐಎಸ್ ಸಿಸ್ಟಮ್ಗಳನ್ನು ಅಭಿವೃದ್ಧಿಗೊಳಿಸುವುದು

ಕರ್ನಾಟಕ ಸರ್ಕಾರವು ರಾಜ್ಯದ ಸಾರ್ವಜನಿಕ ಉದ್ದಿಮೆಗಳ ಕಾರ್ಯನಿರ್ವಹಣೆಯನ್ನು ವರ್ಧಿಸುವ ಬಗ್ಗೆ ಅಧ್ಯಯನ ನಡೆಸಲು ಶ್ರೀ ಪಿ. ಪದ್ಮನಾಭನ್, ಭಾ..ಸೇ, ಇವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಪದ್ಮನಾಭನ್ ಸಮಿತಿಯು ಉದ್ದೇಶಕ್ಕಾಗಿ ಸಚಿವಾಲಯ ಇಲಾಖೆಯ ಸ್ತರದಲ್ಲಿ ಒಂದು ಪ್ರತ್ಯೇಕ ನೋಡಲ್ ಇಲಾಖೆಯನ್ನು ರಚಿಸುವಂತೆ ಶಿಫಾರಸ್ಸು ಮಾಡಿತ್ತು.

2002ರಲ್ಲಿ ಕೆಎಸ್ಬಿಪಿಇ ಯನ್ನು ಬ್ಯುರೋದಿಂದ ಒಂದು ಇಲಾಖೆಯಾಗಿ ಪರಿವರ್ತಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಡಿ ಇರಿಸಿ ಡಿಸ್ಇನ್ವೆಸ್ಟ್ಮೆಂಟ್ & ಪಬ್ಲಿಕ್ ಎಂಟರ್ಪ್ರೈಸ್ ರಿಫಾಮ್ರ್ಸ್ ಇಲಾಖೆ (ಡಿಡಿಪಿಇಆರ್) ಎಂದು ಮರುನಾಮಕರಣ ಮಾಡಲಾಯಿತು.

ಡಿಡಿಪಿಆರ್ ಮುಖ್ಯ ಚಟುವಟಿಕೆಗಳು ಕೆಳಕಂಡಂತಿದ್ದವು:

1) ಬಂಡವಾಳ ಹಿಂತೆಗೆತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆಗೊಳಿಸುವುದು ಹಾಗೂ ಬಗೆಹರಿಸುವುದು.

2) ವಿಲೀನಕ್ಕೆ ಸಂಬಂಧಿಸಿದ ವಿಷಯಗಳು

3) ಉದ್ದಿಮೆಗಳ ಪುನರ್-ಸಂಘಟನೆ

4) ಆರ್ಥಿಕ ವ್ಯವಹಾರ

5) ಉದ್ದಿಮೆಗಳ ಮುಚ್ಚುವಿಕೆ ಹಾಗೂ ಖಾಸಗೀಕರಣ

6) ಒಡಂಬಡಿಕೆಗಳ ನಿರ್ವಹಣೆ

2005ರಲ್ಲಿ ಡಿಡಿಪಿಆರ್ ನ್ನು ಒಂದು ಪೂರ್ಣಪ್ರಮಾಣದ ಸ್ವತಂತ್ರ ಹಾಗೂ ಸಚಿವಾಲಯದ ಪ್ರತ್ಯೇಕ ಇಲಾಖೆಯಾಗಿ ಪರಿವರ್ತಿಸಿ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಎಂದು ನಾಮಕರಣ ಮಾಡಲಾಯಿತು. ಇಲಾಖೆಯು ಒಂದು ನಿರ್ದಿಷ್ಟ ಐಎಎಸ್ ವೃಂದದ ಪದವಿಯನ್ನು ಹೊಂದಿರುತ್ತದೆ. ಸಾರ್ವಜನಿಕ ಉದ್ದಿಮೆಗಳ ಇಲಾಖೆಯು ಓರ್ವ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ನೇತೃತ್ವ ಹೊಂದಿದ್ದು, ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಜಂಟಿ ಕಾರ್ಯದರ್ಶಿ, ಸರ್ಕಾರದ ಉಪ ಕಾರ್ಯದರ್ಶಿ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿ ಹಾಗೂ ಇತರೆ ಸಿಬ್ಬಂದಿಯ ಸಹಕಾರವಿರುತ್ತದೆ. ಕರ್ನಾಟಕ ರಾಜ್ಯ ಸರ್ಕಾರವು ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ನಿರ್ದಿಷ್ಟ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 538 ಸಅಸೇ 2007, ದಿನಾಂಕ:13-03-2008ರಲ್ಲಿ ನಿಯೋಜಿಸಿದೆ.

ಸಾರ್ವಜನಿಕ ಉದ್ದಿಮೆಗಳ ಇಲಾಖೆಯು ಆಡಳಿತ ಇಲಾಖೆಗಳು ಹಾಗೂ ಸದನ ಸಮಿತಿಗಳ ನಡುವೆ ಒಂದು ಮಾಧ್ಯಮದಂತೆ ಕಾರ್ಯನಿರ್ವಹಿಸುತ್ತಿದೆ. ಅಲ್ಲದೇ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಾಗೂ ಮಹಾಲೇಖಪಾಲರ ಕಛೇರಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಸಹಿಸುತ್ತಿದೆ. ಒಟ್ಟಾರೆ ಸಾರ್ವಜನಿಕ ಉದ್ದಿಮೆಗಳ ಇಲಾಖೆಯು ರಾಜ್ಯದ ಸಾರ್ವಜನಿಕ ಉದ್ದಿಮೆಗಳನ್ನು ಉತ್ತೇಜಿಸುವ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತಿದೆ.

 


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಸಾರ್ವಜನಿಕ ಉದ್ದಿಮೆಗಳ​ ಇಲಾಖೆ​, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top