ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ( ಇಡಿಸಿಎಸ್)

ಕರ್ನಾಟಕ ಸರ್ಕಾರ

GOK > EDCS > Kannada > Common-Service-Center
New Icon ಸಿವಿಲ್ ಇಂಜಿನಿಯರ್ ಗಳ ಸೇವೆಯನ್ನು ಪಡೆಯಲು ಅಧಿಸೂಚನೆ
Last modified at 16/02/2021 11:19 by System Account

ಸಾಮಾನ್ಯ ಸೇವಾ ಕೇಂದ್ರ

ಸಾಮಾನ್ಯ ಸೇವಾ ಕೇಂದ್ರ ಯೋಜನೆಯಿಂದ ಕರ್ನಾಟಕ ಸರ್ಕಾರದ ಆಶಯವೆಂದರೆ ಮಾಹಿತಿ ತಂತ್ರಜ್ಞಾನ ಆಧಾರಿತ ಸರ್ಕಾರಿ ಸೇವೆಗಳು ಸಾಮಾನ್ಯ ಜನತೆಗೆ ತಮ್ಮ ಗ್ರಾಮದಲ್ಲಿಯೇ ದಕ್ಷ, ಪಾರದರ್ಶಕ, ವಿಶ್ವಾಸಾರ್ಹ ಹಾಗೂ ಕೈಗೆಟುಕುವ ರೀತಿಯಲ್ಲಿ ದೊರಕಬೇಕೆಂಬುದು. ಆಶಯವನ್ನು ರಾಜ್ಯ ಸರ್ಕಾರವು ಸಾಕಾರಗೊಳಿಸಲು ಒಂದು ಅಥವಾ ಹೆಚ್ಚಿನ ಖಾಸಗಿ ಸಂಸ್ಥೆಗಳೊಡನೆಯ ಸಹಭಾಗಿತ್ವದೊಂದಿಗೆ ಸಿಎಸ್ ಸಿಗಳನ್ನು ಸ್ಥಾಪಿಸುವ ಮೂಲಕ ಸಿಎಸ್ ಸಿ ಜಾಲವನ್ನು ಸಂಘಟಿಸಿ ಜಾಲದ ಮೂಲಕ ವೈವಿಧ್ಯಮಯ ಜಿ2ಸಿ ಹಾಗೂ ಬಿ2ಸಿ ಸೇವೆಗಳನ್ನು ಒದಗಿಸುವುದು.

 

ಧ್ಯೇಯ ವಾಕ್ಯ :- ಸಿಎಸ್ ಸಿ ಯೋಜನೆಯ ಧ್ಯೇಯವೆಂದರೆ ದಕ್ಷ ಸರ್ಕಾರಿ ಸೇವೆಗಳನ್ನು ನಾಗರೀಕರ ಮನೆಬಾಗಿಲಿಗೆ ಕೊಂಡೊಯ್ಯುವುದು. ಯೋಜನೆಯು ಇನ್ನೂ ಆರಂಭಿಕ ಹಂತದಲ್ಲಿದೆ.

 

ಮೇಲಿನ ಸಂದರ್ಭಕ್ಕೆ, ರಾಜ್ಯ ಸರ್ಕಾರವು 2000 ಕ್ಕೂ ಹೆಚ್ಚಿನ ಸಿಎಸ್ ಸಿಗಳನ್ನು ಕರ್ನಾಟಕದಾದ್ಯಂತ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮದ ಕೇಂದ್ರ ಸ್ಥಾನದಲ್ಲಿ ಸ್ಥಾಪಿಸಿ (ಪ್ರತಿಯೊಂದು ಸಿಎಸ್ ಸಿಯು ಸುಮಾರು 6 ಹಳ್ಳಿಗಳನ್ನೊಳಗೊಂಡಿರುತ್ತದೆ) ಗ್ರಾಮೀಣ ಜನತೆಗೆ ಜಿ2ಸಿ ಮತ್ತು ಬಿ2ಸಿ ಸೇವೆಗಳನ್ನು ಸುಸೂತ್ರವಾಗಿ ಕಲ್ಪಿಸುವುದಾಗಿದೆ. ಸಿ ಎಸ್ ಸಿಗಳು ಭಾರತದ ಗ್ರಾಮೀಣ ಜನತೆಗೆ ಸರ್ಕಾರದ, ಖಾಸಗಿಯವರ ಹಾಗೂ ಸಾಮಾಜಿಕ ವಲಯದ ಸೇವೆಗಳನ್ನು ಒದಗಿಸುವ ಮುಂಚೂಣಿಯ ವಿತರಕ ಕೇಂದ್ರವಾಗಿರುತ್ತಾರೆ. ಇದರ ಪರಿಕಲ್ಪನೆಯೆಂದರೆ ಸರ್ಕಾರಕ್ಕೆ, ಖಾಸಗಿಯವರಿಗೆ ಹಾಗೂ ಸಾಮಾಜಿಕ ವಲಯದ ಸಂಸ್ಥೆಗಳಿಗೆ ತಮ್ಮ ಸಾಮಾಜಿಕ ಮತ್ತು ವಾಣಿಜ್ಯ ಉದ್ದೇಶಗಳನ್ನು ಮಾಹಿತಿ ತಂತ್ರಜ್ಞಾನ ಅಂತೆಯೇ ಐಟಿಯೇತರ ಸೇವೆಗಳ ಮೂಲಕ ರಾಷ್ಟ್ರದ ಮೂಲೆಮೂಲೆಗಳಲ್ಲೂ ಇರಬಹುದಾದ ಗ್ರಾಮೀಣ ಜನತೆಯ ಪ್ರಯೋಜನಕ್ಕಾಗಿ ವೇದಿಕೆಯೊಂದನ್ನು ಕಲ್ಪಿಸುವುದಾಗಿದೆ.

 

ಐಟಿ ಹೆಗ್ಗುರುತನ್ನು ಜತನಮಾಡಿಕೊಳ್ಳುವ ಉದ್ದೇಶದಿಂದ ಹಾಗೂ ವಿತರಣೆಗಾಗಿ ಒಂದು ಸಾಮಾನ್ಯ ವೇದಿಕೆಯನ್ನು ನಿರ್ಮಿಸಲು ರಾಜ್ಯ ಸರ್ಕಾರವು ಕ್ಲೌಡ್ ಆಧಾರಿತ ಪರಿಹಾರ ಚೌಕಟ್ಟನ್ನು (ಕ್ಲೌಡ್ ಬೇಸ್ಡ್ ಸೊಲ್ಯೂಷನ್ ಫ್ರೇಮ್ ವರ್ಕ್) ಅವಲಂಬಿಸಿದೆ. ಸಾಮಾನ್ಯ ಸುಸ್ಥಿರತೆ ಕಾಪಾಡಿಕೊಳ್ಳಲು ಹಾಗೂ ಮಾನವಶಕ್ತಿ ಅವಲಂಬಿತ ಹಾಗೂ ವಿತರಣೆಯಲ್ಲಿ ತೊಡಗಿರುವ ಯಾವುದೇ ವಿವಿಧ ಎಸ್.ಸಿ.ಎಗಳ ಕುರಿತು ವರದಿ ಮಾಡಲು ಸರ್ಕಾರವು ಪೋರ್ಟಲ್ ಪರಿಹಾರವನ್ನು ಒದಗಿಸುತ್ತದೆ. ಕ್ಲೌಡ್ ಆಧಾರಿತ ಮಾದರಿ ಸಿಎಸ್.ಸಿ ಯೋಜನೆಗೆ ಸರಿಹೊಂದುತ್ತದೆ, ಹಾಗೂ ಬೃಹತ್ ಮಟ್ಟದ ಸಫಲತೆಯನ್ನು ಸಾಧಿಸಲು ಮತ್ತು ಸಫಲತೆಯನ್ನು ಮರುಕಳಿಸಲು ಇರುವ ಏಕೈಕ ಮಾರ್ಗ ಇದೊಂದೇ ಆಗಿದೆ.


ಬಿ
2ಸಿ ಸೇವೆಗಳನ್ನು ಎಸ್.ಸಿ. ಗಳು (ಸರ್ಕಾರಿ ಪೋರ್ಟಲ್ ಗಳಲ್ಲಿ ಲಭ್ಯವಿಲ್ಲದ) ತಮ್ಮದೇ ಆದ, ತಾವೇ ನಿರ್ವಹಿಸುವ ಪೋರ್ಟಲ್ ನಿಂದ ಗ್ರಾಮೀಣ ನಿವಾಸಿಗಳಿಗೆ ಸೇವೆಗಳನ್ನು ಒದಗಿಸುವವು.

ರಾಜ್ಯಾದ್ಯಂತ ಸಿಎಸ್ ಸಿ ಸೇವೆಗಳ ವಿತರಣೆಗಾಗಿ ಸರ್ಕಾರವು ಕ್ಲೌಡ್ ಮಾದರಿಯನ್ನು ಇಚ್ಛಿಸುತ್ತದೆ. ಕ್ಲೌಡ್ ವೇದಿಕೆಯ ಬ್ಯಾಕ್ ಎಂಡ್ ಅನ್ನು -ಜಿಲ್ಲಾ ಯೋಜನೆಯು ಸಕ್ರಿಯಗೊಳಿಸುತ್ತದೆ. -ಜಿಲ್ಲಾ ಯೋಜನೆಯು ಸಿಎಸ್ ಸಿಗಳ ಮೂಲಕ ವಿತರಣೆಗಾಗಿ ಅಗಾಧ ಪ್ರಮಾಣದಲ್ಲಿ ಜಿ2ಸಿ ಸೇವೆಗಳನ್ನು ಒದಗಿಸುತ್ತದೆ.

ಆದರೆ, ವಿತರಣಾ ವಾಹಿನಿಯಂತೆ ಕಾರ್ಯನಿರ್ವಹಿಸುವುದಕ್ಕೂ ಮಿಗಿಲಾಗಿ, ಸಿಎಸ್.ಸಿಗಳು ಒಂದು ಪ್ರಭಾವಕಾರಿಬದಲಾವಣೆಯ ರೂವಾರಿಯಾಗಿ ಪಾತ್ರವಹಿಸಬಹುದಾಗಿದ್ದು, ಸಾಮೂಹಿಕ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸಮಾಜಕ್ಕೆ ಸೇರ್ಪಡೆಗೊಂಡ ಸಮುದಾಯವು ಭಾಗವಹಿಸಲು ವ್ಯವಸ್ಥಿತ ವೇದಿಕೆಯೊಂದನ್ನು ಒದಗಿಸುತ್ತದೆ ಬದಲಾವಣೆಗೆ, ಮೂರು ಪ್ರಮುಖ ಅಂಶಗಳ ಮೂಲಕ ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ.


  1. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಚೌಕಟ್ಟು
  2. ಗ್ರಾಮೀಣ ಉದ್ಯಮಶೀಲತೆ ಹಾಗೂ ಮಾರುಕಟ್ಟೆ ತಂತ್ರಜ್ಞಾನ
  3. ಸರ್ಕಾರದ ನೀತಿ ಮತ್ತು ಬೆಂಬಲ

ಧ್ಯೇಯೋದ್ದೇಶ

  1. ಗ್ರಾಮೀಣ ಕರ್ನಾಟಕದಲ್ಲಿ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ 2000ಕ್ಕೂ ಅಧಿಕ ಸಿಎಸ್.ಸಿಗಳನ್ನು ಸ್ಥಾಪಿಸಿ ಜಿ2ಸಿ ಸೇವೆಗಳನ್ನು ಸುಗಮವಾಗಿ ಹಾಗೂ ದಕ್ಷ ರೀತಿಯಲ್ಲಿ ಕಲ್ಪಿಸುವುದು.
  2. ಇಲಾಖೆಗಳು ಸಜ್ಜಾದಂತೆಲ್ಲಾ ರಾಜ್ಯಾದ್ಯಂತ ಎಲ್ಲಾ ರೀತಿಯ ಜಿ2ಸಿ ಸೇವೆಗಳನ್ನು ಕಲ್ಪಿಸುವುದು
  3. ನಾಗರೀಕರ ಅವಶ್ಯಕತೆಗಳಿಗೆ ಸರ್ಕಾರದ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಪ್ರತಿಕ್ರಿಯೆಯನ್ನು ಹೆಚ್ಚಿಸುವುದು.
  4. ಇಲಾಖೆಗಳಿಗೆ ಹಾಗೂ ಸಂಸ್ಥೆಗಳಿಗೆ ಸೇವಾ ವಿತರಣೆಗಳ ದಕ್ಷ ಹಾಗೂ ವೆಚ್ಚನಿಯಂತ್ರಿತ ಪದ್ಧತಿ ಒದಗಿಸುವುದು
  5. ಸ್ಪರ್ಧಾತ್ಮಕ ಬಿಡ್ ಪ್ರಕ್ರಿಯೆಯೊಂದರ ಮೂಲಕ ಆಯ್ಕೆಗೊಂಡ ಕಂಪನಿಯೊಂದರ ಜೊತೆ ಪಾಲುದಾರಿಕೆಯ ಮೂಲಕ ಸೇವೆಗಳ ವಿತರಣೆಗೆ ಅವಕಾಶ ಕಲ್ಪಿಸುವುದು
  6. ತ್ವರಿತವಾಗಿ, ಸಮಯೋಚಿತವಾಗಿ ಅಂತೆಯೇ ನಿಖರತೆಯಿಂದ ಸೇವೆಗಳನ್ನು ನಾಗರೀಕರಿಗೆ ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು.
  7. ಸರ್ಕಾರಿ ಇಲಾಖೆಗಳು ಪ್ರಮಾಣಪತ್ರಗಳನ್ನು, ಭೂದಾಖಲೆಗಳನ್ನು ವಿತರಿಸುವ ಮತ್ತು ನಾಗರೀಕರ ಬಳಕೆಯ ಬಿಲ್ಲುಗಳ ಸ್ವೀಕೃತಿ ಕೆಲಸಗಳೇ ಮುಂತಾದ ತಮ್ಮ ದೈನಂದಿನ ಯಾಂತ್ರಿಕ ಕಾರ್ಯಗಳಿಂದ ಮುಕ್ತಗೊಂಡು ತಮ್ಮ ಮೂಲ ಕಾರ್ಯಗಳು ಮತ್ತು ಜವಾಬ್ದಾರಿಗಳ ಮೇಲೆ ಗಮನವಿಡಲು ಸಹಾಯಕವಾಗಿ, ಆಡಳಿತ ಯಂತ್ರವು ಒಟ್ಟಾರೆ ಉತ್ಪಾದಕತೆಯಲ್ಲಿ ಹೆಚ್ಚಳವನ್ನು ಸಾಧಿಸುವುದು.
 
 

ಇಡಿಸಿಎಸ್ ನಿರ್ದೇಶನಾಲಯ,

ನಂ.13, ಸಿ ಆರ್ ಎನ್ ಚೇಂಬರ್ಸ್,
2ನೇ ಮಹಡಿ, ಕಸ್ತೂರ್ಬಾ ರಸ್ತೆ,
ಧನಲಕ್ಷ್ಮೀ ಬ್ಯಾಂಕ್ ಮೇಲೆ,

ಬೆಂಗಳೂರು-560001

ದೂ.ಸಂ.: +91 80 2223 0281​

-ಮೇಲ್dir[hyphen]edcs[at]karnataka[dot]gov[dot]in 
Url : 
http://www.karnataka.gov.in/edcs 

 
 


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ( ಇಡಿಸಿಎಸ್), ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

Top