ಸೇವಾ ಸಿಂಧು (ಇ-ಜಿಲ್ಲೆ)
ಸೇವಾ
ಸಿಂಧು (ಇ-ಜಿಲ್ಲೆ) ಯೋಜನೆಯು ರಾಷ್ಟ್ರೀಯ ಇ-ಆಡಳಿತ ಯೋಜನೆಯ (NeGP) 31 ಮಿಷನ್ ಮೋಡ್
ಯೋಜನೆಗಳ ಒಂದು ಭಾಗವಾಗಿದೆ. ಭಾರತ ಸರ್ಕಾರದ ವಿದ್ಯುನ್ಮಾನ, ಮಾಹಿತಿ ಮತ್ತು
ತಂತ್ರಜ್ಞಾನ ಇಲಾಖೆಯು ಈ ಯೋಜನೆಯ ನೋಡಲ್ ಇಲಾಖೆಯಾಗಿ ಕಾರ್ಯ ನಿರ್ವಹಿಸಲಿದ್ದು, ರಾಜ್ಯ
ಸರ್ಕಾರ ಅಥವಾ ರಾಜ್ಯ ಸರ್ಕಾರ ಗೊತ್ತುಪಡಿಸುವ ಏಜೆನ್ಸಿಗಳು ಈ ಯೋಜನೆÀಯನ್ನು
ಅನುಷ್ಠಾನಗೊಳಿಸುವುವು. ಜಿಲ್ಲಾ ಕೇಂದ್ರಗಳಲ್ಲಿರುವ ವಿವಿಧ ಇಲಾಖೆಗಳ ಹಲವಾರು
ಸೇವೆಗಳನ್ನು ನಾಗರಿಕರಿಗೆ ತಡೆರಹಿತವಾಗಿ ನೀಡುಲು ಅನುವಾಗಲು ಮತ್ತು ಇಲಾಖೆಗಳ
ದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸೇವಾ ಸಿಂಧು ಯೋಜನೆಯನ್ನು ಪರಿಕಲ್ಪಿಸಲಾಗಿದೆ.
ಇ-ಆಡಳಿತ
ಇಲಾಖೆಯ ಇಡಿಸಿಎಸ್ ನಿರ್ದೇಶನಾಲಯವು ಇ-ಜಿಲ್ಲೆ ಮಿಷನ್ ಮೋಡ್ ಯೋಜನೆಯನ್ನು
ರಾಜ್ಯವ್ಯಾಪಿ ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿಯಾಗಿದೆ. ಇಲ್ಲಿಯವರೆವಿಗೆ ವಿವಿಧ
ಇಲಾಖೆಗಳ 346 ನಾಗರೀಕ ಸೇವೆಗಳನ್ನು ಸೇವಾ ಸಿಂಧು ಯೋಜನೆಯಡಿ ಸಂಯೋಜಿಸಲು
ಗುರುತಿಸಲಾಗಿದೆ. ಈ ಪೈಕಿ 71 ಸೇವೆಗಳು ರಾಷ್ಟೀಯ ಮಟ್ಟದ ಕಡ್ಡಾಯ ಸೇವೆಗಳಾಗಿದ್ದು,
ಉಳಿದ 225 ಸೇವೆಗಳನ್ನು ರಾಜ್ಯವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕಂದಾಯ ಇಲಾಖೆಯ 29
ಪ್ರಮಾಣ ಪತ್ರಗಳ ಸೇವೆಗಳನ್ನು ಸೇವಾ ಸಿಂಧು ಅಂತರ್ಜಾಲ ತಾಣದೊಂದಿಗೆ ಸಂಯೋಜಿಸುವುದರ
ಮೂಲಕ ಕರ್ನಾಟಕ ರಾಜ್ಯದಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ.
ಇಲ್ಲಿಯವರೆವಿಗೆ 1,12,000 ವ್ಯವಹಾರಗಳನ್ನು ಸೇವಾ ಸಿಂಧು ಅಂತರ್ಜಾಲ ತಾಣದ ಮೂಲಕ
ಯಶಸ್ವಿಯಾಗಿ ಮಾಡಲಾಗಿದ್ದು, 1.00 ಲಕ್ಷಕ್ಕೂ ಅಧಿಕ ಪ್ರಮಾಣ ಪತ್ರಗಳನ್ನು ನಾಗರಿಕರಿಗೆ
ವಿತರಿಸಲಾಗಿದೆ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಔಷದ ನಿಯಂತ್ರಣ ಇಲಾಖೆ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಯೋಜನಾ ಇಲಾಖೆಯ 18 ಹೆಚ್ಚುವರಿ
ಸೇವೆಗಳನ್ನು ಸೇವಾ ಸಿಂಧು ಅಂತರ್ಜಾಲ ತಾಣಕ್ಕೆ ಸಂಯೋಜಿಸಲಾಗಿದೆ.
ಇಲಾಖೆಗಳಿಗೆ ಆಗುವ ಮುಖ್ಯ ಉಪಯೋಗಗಳು :
- ಇಲಾಖೆಗಳು
ತಮ್ಮ ತಮ್ಮ ಇಲಾಖೆಯ ಮುಖ್ಯ ಕಾರ್ಯಗಳತ್ತ ಕೇಂದ್ರೀಕರಿಸ ಬಹುದಾಗಿದೆ. ಇದರಿಂದಾಗಿ
ಇಲಾಖೆಗಳ ಮತ್ತು ಉದ್ಯೋಗಿಗಳ ದಕ್ಷತೆ ಹೆಚ್ಚಲು ಅನುಕೂಲವಾಗುವುದು.
- ಇ-ಪೋರ್ಟಲ್
ಮೂಲಕ ಇಲಾಖೆಗಳಿಗೆ ವಾಸ್ತವಿಕ ಮತ್ತು ಅಸಾದಾರಣ ಮಾಹೆಯಾನ ವರದಿಗಳನ್ನು ನೀಡುವುದರ ಮೂಲಕ
ಇಲಾಖೆಗಳು ಸರ್ಕಾರಿ ಸೇವೆಗಳ ಅನುಷ್ಠಾನಕ್ಕಾಗಿ ಉತ್ತಮ ಯೋಜನೆಗಳನ್ನು
ರೂಪಿಸಿಕೊಳ್ಳಬಹುದು.
- ಸಕಾಲ ಯೋಜನೆಯಡಿ ಅರ್ಜಿಗಳನ್ನು ಸಂಯೋಜಿಸುವುದರಿಂದ, ನಿಗಧಿತ ಕಾಲ ಮಿತಿಯಲ್ಲಿ ಸೇವೆಗಳು ದೊರಕುವುವು.
- ಇತ್ತೀಚಿನ
ಮಾಹಿತಿ ವಿಶ್ಲೇಷಿತ ವರದಿಗಳ ಅಳವಡಿಕೆಯೊಂದಿಗೆ ಏರಿಳಿತಗಳನ್ನು ಊಹಿಸಲು ಮತ್ತು
ನಾಗರೀಕರಿಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ಇಲಾಖೆಗಳಿಗೆ ನೆರವಾಗುತ್ತÀದೆ.
- ಸೇವಾ ಸಿಂಧು ಜಾರಿಯಿಂದಾಗುವ ಉಪಯೋಗಗಳಿಂದ ನಾಗರಿಕರಿಗೆ ಅನುಕೂಲಕರ ಮತ್ತು
- ಶೀಘ್ರವಾಗಿ ಸೇವೆಗಳು ದೂರೆಯುತ್ತವೆ.
- ನಾಗರಿಕರಿಗೆ ಆಗುವ ಮುಖ್ಯ ಉಪಯೋಗಗಳು :
- ನಾಗರೀಕರು ವಿವಿಧ ಇಲಾಖೆಗಳ ಸೇವೆಗಳನ್ನು ಪಡೆಯಲು ಸೇವಾ ಸಿಂಧು ಅಂತರ್ಜಾಲ ತಾಣವು ಒಂದು ಏಕರೂಪ ವೇದಿಕೆಯನ್ನು ಒದಗಿಸುತ್ತದೆ.
- ನಾಗರೀಕರು ಕಛೇರಿ ವೇಳೆ ಹೊರತಾಗಿಯೂ, ಈ ಜಾಲತಾಣಕ್ಕೆ ಆನ್ಲೈನ್ನಲ್ಲಿ ತಮಗೆ ಬೇಕಾಗಿರುವ ಸೇವೆಗೆ ಮನವಿ ಸಲ್ಲಿಸಬಹುದು.
- ನಾಗರೀಕರು ತಮ್ಮ ಅರ್ಜಿಯ ಸ್ಥಿತಿ ಗತಿಗಳನ್ನು ಯಾವುದೇ ಸ್ಥಳದಲ್ಲಿ ಅಥವಾ ಯಾವುದೇ ಸಮಯದಲ್ಲಿ ಪತ್ತೆ ಹಚ್ಚಬಹುದು.
- ಪರ್ಯಾಯವಾಗಿ ನಾಗರೀಕರು ತಮ್ಮ ಹತ್ತಿರದ ಗ್ರಾಮ ಪಂಚಾಯತಿಯಲ್ಲಿ ಲಭ್ಯವಿರುವ ಯಾವುದೇ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಸೇವೆಗಳನ್ನು ಪಡೆಯಬಹುದು.
- ಕೇಂದ್ರೀಕೃತ ಸಹಾಯವಾಣಿಯ ಮೂಲಕ ನಾಗರೀಕರು ಅನುಮಾನಗಳನ್ನು ಪರಿಹರಿಸಿಕೊಂಡು ತಮ್ಮ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.
ಭವಿಷ್ಯದ ಯೋಜನೆಗಳು :
- ಇ-ಸೈನ್, ಡಿಜಿ ಲಾಕರ್ ಮತ್ತು ಎಸ್.ಎಸ್.ಡಿ.ಜಿ ತಂತ್ರಾಶದೊಂದಿಗೆ ಸೇವಾ ಸಿಂಧು ತಂತ್ರಾಶದ ಸಂಯೋಜನೆ.
- ಸೇವಾ
ಸಿಂಧು (ಇ-ಜಿಲ್ಲೆ) ತಂತ್ರಾಶದೊಂದಿಗೆ ಕಡ್ಡಾಯವಾಗಿ ಸರ್ಕಾರಿ ಸೇವೆಗಳನ್ನು ಸಂಯೋಜಿಸಲು
ಮತ್ತು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೀಡಲಾಗುವ ಸೇವೆಗಳಿಗೆ ನೀಡಬೇಕಾದ ಸೇವಾ ಶುಲ್ಕ
ಕುರಿತು ರಾಜ್ಯ ಸರ್ಕಾರದ ಆದೇಶ ಹೊರಡಿಸಲು ಕ್ರಮ ಕೈಗೊಳ್ಳುವುದು.
- ವಿವಿಧ ಇಲಾಖೆಗಳ 100 ಕ್ಕೂ ಹೆಚ್ಚು ಸೇವೆಗಳೊಂದಿಗೆ ರಾಜ್ಯದಲ್ಲಿ ಸೇವಾ ಸಿಂಧು ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸುವುದು.
- ಬೆಂಗಳೂರು
ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ, ಅಟಲ್ಜಿ ಜನಸ್ನೇಹಿ ಕೇಂದ್ರ, ಗ್ರಾಮ
ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿರುವ ಸಾಮಾನ್ಯ ಸೇವಾ ಕೇಂದ್ರ ಇತ್ಯಾದಿ ಸೇವಾ ವಿತರಣಾ
ಮಾರ್ಗಗಳ ಜೊತೆ ಸೇವಾ ಸಿಂಧು ಜಾಲತಾಣದ ಸಂಯೋಜನೆ.