Last modified at 21/08/2018 16:32 by System Account
​​​​ಪರಿಚಯ

ಇಂಧನ ಇಲಾಖೆ ಪರಿಚಯ​

ಕರ್ನಾಟಕ ಸರ್ಕಾರವು ಯಾವಾಗಲೂ ವಿದ್ಯುತ್ ಕ್ಷೇತ್ರದ ಪ್ರಗತಿಗೆ ಅತಿ ಹೆಚ್ಚು ಮಹತ್ವ ನೀಡುತ್ತ ಬಂದಿದೆ. ಉತ್ಪಾದನೆ, ಪ್ರಸರಣ ಮತ್ತು ವಿತರಣೆ ವಿಭಾಗಗಳು ವಿದ್ಯುತ್ ಸಾಗಿಸುವಲ್ಲಿ ಮುಖ್ಯವಾಗಿದ್ದು, ಅವುಗಳಿಗೆ ಅದ್ಯತೆಯ ಅಗತ್ಯವಿದೆ. ಕರ್ನಾಟಕ ಸರ್ಕಾರವು ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಈ ಕೆಳಗೆ ಸೂಚಿಸಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 

೧.   ​ರಾಜ್ಯದ ವಿದ್ಯುಚ್ಛಕ್ತಿ ಉತ್ಪಾದನಾ ಸಾಮರ್ಥ್ಯ​ವನ್ನು
 ಕ.ವಿ.ನಿ.ನಿ.​, ಭಾರತ ಸರ್ಕಾರದ ಸ್ವಾಮ್ಯಕ್ಕೆ ಒಳಪಡುವ
       ಸಂಸ್ಥೆಗಳಿಂದ ಮತ್ತು ಖಾಸಗಿ ಅಭಿವೃದ್ದಿದಾರರ ಮುಖಾಂತರ ವಿದ್ಯುತ್ ಸಾಮರ್ಥ್ಯವನ್ನು ಹೆಚ್ಚಿಸುವುದು.
೨. ಕ.ವಿ.ಪ್ರ.ನಿ.ನಿ ಹಾಗೂ ವಿದ್ಯುತ್ ವಿತರಣಾ ಕಂಪನಿಗಳಿಂದ ಪ್ರಸರಣ ಮತ್ತು ವಿತರಣಾ ನಷ್ಟವನ್ನು ತಾಂತ್ರಿಕ     ಪ್ರಗತಿಯ ಮೂಲಕ ಕಡಿಮೆ ಮಾಡುವುದು.
೩.   ವಿದ್ಯುತ್ ವ್ಯವಸ್ಥೆಯಲ್ಲಿ ಸುಧಾರಣೆ ಕೆಲಸಗಳ ಮೂಲಕ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವುದು.
೪.   ಪ್ರಸರಣ ಮತ್ತು ವಿತರಣಾ ಜಾಲವನ್ನು ರಾಜ್ಯದ ಉದ್ದಗಲಕ್ಕೂ ವಿಸ್ತರಿಸುವುದು.
೫.   ಹಂತ ಹಂತವಾಗಿ ರಾಜ್ಯದ ಎಲ್ಲಾ ಸಣ್ಣ ಹಳ್ಳಿಗಳಿಗೆ ಮತ್ತು ಮನೆಗಳಿಗೆ ವಿದ್ಯುದೀಕರಣಗೊಳಿಸುವುದು.​
೬.   ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವುದು.
೭.   ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿಗೆ ಪ್ರೋತ್ಸಾಹಿಸುವುದು.

೮.   ಇಂಧನ ಉಳಿತಾಯದ ಕ್ರಮಗಳನ್ನು ಅನುಷ್ಠಾನಗೊಳಿಸುವುದು.

1. ವಿದ್ಯುಚ್ಛಕ್ತಿ  ಆಯೋಗ ​

KERCಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ

2. ಇಂಧನ ಇಲಾಖೆಯ ಆಡಳಿತದಡಿಯಲ್ಲಿ ಬರುವ ಸಂಸ್ಥೆಗಳು: ​

(ಅ). ವಿದ್ಯುತ್ ಉತ್ಪಾದನಾ ಸಂಸ್ಥೆ.

KPCLಕರ್ನಾಟಕ ವಿದ್ಯುತ್ ನಿಗಮ ನಿಯಮಿತ(ಕ.ವಿ.ನಿ.ನಿ)

(ಆ). ವಿದ್ಯುತ್ ಪ್ರಸರಣ ಸಂಸ್ಥೆ.

KPTCLಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕ.ವಿ.ಪ್ರ.ನಿ.ನಿ)

(ಇ). ವಿದ್ಯುತ್ ಪರಿವೀಕ್ಷಣಾಲಯ.

Electrical%20Inspectorate​ವಿದ್ಯುತ್ ಪರಿವೀಕ್ಷಣಾಲಯ

(ಈ). ವಿದ್ಯುತ್ ಸರಬರಾಜು ಕಂಪನಿಗಳು ಮತ್ತು ನಿಗಮ:​


ಕರ್ನಾಟಕ ರಾಜ್ಯವು ೧೯೯೯ರಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಒಂದು ಮಹತ್ವದ ಬದಲಾವಣೆ ಕಂಡಿತುಅದರ ಮೊದಲ ಹೆಜ್ಜೆಯಾಗಿ, ಕರ್ನಾಟಕ ವಿದ್ಯುತ್ ಮಂಡಳಿಯನ್ನು ವಿಭಜನೆ ಮಾಡಲಾಯಿತು (ಕೆ..ಬಿ.) ಮತ್ತು ಅದರ ಜಾಗದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕ.ವಿ.ಪ್ರ.ನಿ.ನಿ) ಸ್ಥಾಪಿಸಲಾಯಿತು. ನಂತರ ಕರ್ನಾಟಕ ವಿದ್ಯುತ್ಚ್ಛಕ್ತಿ ನಿಯಂತ್ರಣ ಆಯೋಗವು ೧೯೯೯ ನವೆಂಬರ್ನಲ್ಲಿ ಅಸ್ತಿತ್ವಕ್ಕೆ ಬಂದಿತು. ಮುಂದಿನ ಹಂತದಲ್ಲಿ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ವಿತರಣೆಯ ಸಲುವಾಗಿ, ವಿತರಣಾ ಕಂಪನಿಗಳನ್ನು ಸ್ಥಾಪಿಸಲಾಯಿತು.ವಿದ್ಯುತ್ ಪ್ರಸರಣ ಮತ್ತು ವಿತರಣೆ ವ್ಯವಸ್ಥೆಯನ್ನು ನೋಡುತ್ತಿದ್ದಕ.ವಿ.ಪ್ರ.ನಿ.ನಿ ಅನ್ನು ಜೂನ್ ೨೦೦೨ರಲ್ಲಿ ವಿಭಜಿಸಲಾಯಿತು. ಅವುಗಳು ಯಾವುದೆಂದರೆ
BESCOMಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಬೆವಿಕಂ)      
MESCOMಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಮವಿಕಂ) 
HESCOMಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಹುವಿಕಂ)    
GESCOMಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಗುವಿಕಂ)      
CESC ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಕಂ)

(ಉ). ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ:  

KREDLಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ.ಆರ್..ಡಿ.ಎಲ್.)  

KSPDCLಕರ್ನಾಟಕ ಸೌರ ವಿದ್ಯುತ್ ಅಭಿವೃದ್ಧಿ ನಿಗಮ ನಿಯಮಿತ

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಇಂಧನ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top