ಮುಖಪುಟ
ಕರ್ನಾಟಕ
ರಾಜ್ಯವು 320 ಕಿ.ಮೀ. ಉದ್ಧದ ಕರಾವಳಿ ತೀರದೊಂದಿಗೆ 27,000 ಚ.ಕಿ.ಮೀ. ಖಂಡಾವರಣ
ಪ್ರದೇಶ ಮತ್ತು 5.65 ಲಕ್ಷ ಹೆಕ್ಟೇರಿನಷ್ಟು ವಿವಿಧ ಒಳನಾಡು ಜಲಸಂಪನ್ಮೂಲಗಳನ್ನು
ಹೊಂದಿದ್ದು ಮೀನುಗಾರಿಕೆ ಅಭಿವೃದ್ಧಿಗೆ ವಿಪುಲ ಅವಕಾಶ ಇರುತ್ತದೆ. ಜೊತೆಗೆ 8,000 ಹೆ.
ನಷ್ಟು ಹಿನ್ನೀರು ಪ್ರದೇಶವು ಸೀಗಡಿ/ಮೀನು ಕೃಷಿಗೆ ಒಳ್ಳೆಯ ಅವಕಾಶವನ್ನು
ಒದಗಿಸುತ್ತದೆ. ರಾಜ್ಯದಲ್ಲಿ ಸುಮಾರು 9.61 ಲಕ್ಷ ಮೀನುಗಾರರಿದ್ದು, ಕರಾವಳಿಯಲ್ಲಿ
3.28 ಲಕ್ಷ ಹಾಗೂ ಒಳನಾಡಿನಲ್ಲಿ 6.33 ಲಕ್ಷ ಮೀನುಗಾರರು ವಿವಿಧ ಮೀನುಗಾರಿಕೆ
ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ರಾಜ್ಯದ 2013-14ನೇ ಸಾಲಿನ ಒಟ್ಟು ಮೀನು ಉತ್ಪಾದನೆಯು
5.68 ಲಕ್ಷ ಟನ್ನಾಗಿದ್ದು, ರಾಷ್ಟ್ರದ ಒಟ್ಟು ಉತ್ಪಾದನೆಯಲ್ಲಿ ಶೇಕಡ
5.8ರಷ್ಟಾಗಿರುತ್ತದೆ. ರಾಷ್ಟ್ರದ ಮೀನು ಉತ್ಪಾದನೆಗೆ ಹೋಲಿಸಿದಾಗ ಕರ್ನಾಟಕವು ಕರಾವಳಿ
ಮೀನು ಉತ್ಪಾದನೆಯಲ್ಲಿ 7ನೇ ಸ್ಥಾನ ಮತ್ತು ಒಳನಾಡು ಉತ್ಪಾದನೆಯಲ್ಲಿ 6ನೇ
ಸ್ಥಾನದಲ್ಲಿರುತ್ತದೆ. ಮುಂದೆ ಓದಿ....