​ಗ್ಯಾಸೆಟಿಯರ್ ಇಲಾಖೆಯ ಪಕ್ಷಿನೋಟ

     

ಗ್ಯಾಸೆಟಿಯರ್ ಎಂದರೆ ಸಾಮಾನ್ಯವಾಗಿ 'ರಾಜ್ಯಪತ್ರ' ಅಥವಾ 'ಗೆಸೆಟ್' ಎಂದು ತಪ್ಪಾಗಿ ಅಥವಾ ಅಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲಾಗುತ್ತದೆ. ಆದರೆ ಈ ಪದಗಳು ಉತ್ತರ ಮತ್ತು ದಕ್ಷಿಣ ದೃವಗಳಿದ್ದಂತೆ. ಆಂಗ್ಲ ಭಾಷೆಯಲ್ಲಿ ಗೆಜೆಟ್ ಮತ್ತು ಗ್ಯಾಸೆಟಿಯರ್ ಪದಗಳು ಒಂದೇ ರೀತಿಯಲ್ಲಿ ಕಂಡುಬರುವಂತೆ ಪದಯೋಗವನ್ನು ಮಾಡಲಾಗುತ್ತದೆ. ಗ್ರೀಕ್ ಭಾಷೆಯಲ್ಲಿ 'ಗ್ಯಾಜ'  ಎಂದರೆ 'ವಾರ್ತಗಳ ಖಜಾನೆ' ಎಂದರ್ಥದಲ್ಲಿ ಪ್ರಯೋಗವಾಗಿರುತ್ತದೆ. ಬೆಲೆ ಕಟ್ಟಲಾಗದ ಮಾಹಿತಿ ಸಂಪುಟಗಳೇ 'ಗ್ಯಾಸೆಟಿಯರ್' ಹಾಗೂ ಆಡಳಿತ ಪ್ರಭುತ್ವವನ್ನು ನಿರ್ವಹಿಸುವವರ ಆದೇಶಗಳು, ಆಜ್ಞೆಗಳು, ಸರಕಾರದ ನಡಾವಳಿಗಳು, ನಿರ್ಣಯಗಳು, ಪ್ರಕಟಗೊಳ್ಳುವ ಮಾಧ್ಯಮವಾಗಿರುವುದೇ 'ಗೆಜೆಟ್'. ಪೂರ್ವದಲ್ಲಿ ಪ್ರಮುಖವಾದ ಪ್ರದೇಶಗಳ ಮತ್ತು ವ್ಯಕ್ತಿಗಳ ಕುರಿತಂತೆ ಮಾರ್ಗದರ್ಶನ ಮಾಡುವ 'ಮಾರ್ಗದರ್ಶಿ' ರೂಪದಲ್ಲಿ ಅಥವಾ ಭೌಗೋಳಿಕ ನಿಘಂಟು ಅಥವಾ ಭೌಗೋಳಿಕ ಪರಿವಿಡಿಯ ಪ್ರಾಮುಖ್ಯತೆಯನ್ನು ಗ್ಯಾಸೆಟಿಯರ್ ಬಿಂಬಿಸುತ್ತಿತ್ತು. ಆದರೆ ಕಾಲ ಕಳೆದಂತೆ ಇದರ ವ್ಯಾಪ್ತಿಯು ಹಿಗ್ಗುತ್ತಾ ಹೋಗಿದೆ. ಒಂದು ಪ್ರಾಂತ್ಯದಲ್ಲಿನ ಜನಜೀವನದ ಅಥವಾ ದೇಶದ ಹಲವಾರು ಆಯಾಮಗಳ ವಾಸ್ತವವಾದ ಜ್ಞಾನದ ಸಮೃದ್ಧ ಭಂಡಾರವಾಗಿ ರೂಪುಗೊಂಡಿದೆ.

  ಗ್ಯಾಸೆಟಿಯರ್ ಪುಸ್ತಕದ ಮೂಲಾಂಶಗಳ ಹೋಲಿಕೆಯನ್ನು ಪ್ರಾಚೀನ ಕಾಲದ ಕೆಲವು ಪುಸ್ತಕಗಳಲ್ಲಿ ಒಂದಾದ ಕ್ರಿ.ಶ 6ನೇ ಶತಮಾನದ "The work of stephen of Byzantium", "ವಿಲಿಯಮ್ ಎಂಬ ಜಯಶಾಲಿ" ಪುಸ್ತಕಕ್ಕೋಸ್ಕರ ವಿಷಯಗಳನ್ನು ಸಂಕಲನ ಮಾಡಿದ Doomsday ಪುಸ್ತಕ, ವರಾಹ ಮಿಹಿರನ ಬೃಹತ್ ಸಂಹಿತ, ವಾಯು ಪುರಾಣ, "ಅಬ್ದುಲ್ ಫಜಲ್ ಐನ್-ಇ-ಅಕ್ಬರೀ" ಎಂಬ ಪುಸ್ತಕಗಳಲ್ಲಿ ಕಾಣಬಹುದು. ಆದರೆ, ಕೈಗಾರಿಕಾ ಕ್ರಾಂತಿ ಹಾಗೂ ಸಾಹಿತ್ಯ ಮತ್ತು ಕಲೆಗಳ ಪುನರುಜ್ಜೀವನದಿಂದಾಗಿ ಉಂಟಾದ ಹೊಸ ಪ್ರಜ್ಞಾಶಾಲಿಗಳಿಂದಾಗಿ ಯೂರೋಪಿನಲ್ಲಿ ಹೊಸ ಆಧುನಿಕ ಗ್ಯಾಸೆಟಿಯರ್ ವ್ಯವಸ್ಥೆಯು ಪ್ರಾರಂಭವಾಯಿತು. ಈ ನಿಟ್ಟಿನಲ್ಲಿ ಜರ್ಮನ್ ಮತ್ತು ಪ್ರಾನ್ಸ್ ದೇಶಗಳು ದಾರಿದೀಪಗಳಾದವು. ಭಾರತ ದೇಶದಲ್ಲಿ ತನ್ನ ಪ್ರಭುತ್ವವನ್ನು ಗಟ್ಟಿಗೊಳಿಸುವ ಸಲುವಾಗಿ ಮಿಲಿಟರಿ, ಕಂದಾಯ ಮತ್ತು ಅಂಕಿ-ಅಂಶಗಳ ಸರ್ವೆ ಕಾರ್ಯವನ್ನು ಭಾರತದಲ್ಲಿನ ನೆಲಸುನಾಡಿನ ಬ್ರಿಟೀಷ್ ಆಡಳಿತವು (Colonial British Administration) ಕೈಗೊಂಡಿತು. Edward Thornton ಮತ್ತು Walter Hamilton ಎಂಬ ಇಬ್ಬರು ಖಾಸಗಿ ಲೇಖಕರು 1815ರಲ್ಲಿ ಈಸ್ಟ್ ಇಂಡಿಯ ಗ್ಯಾಸೆಟಿಯರ್ ಮತ್ತು  1854ರಲ್ಲಿನ ಈಸ್ಟ್ ಇಂಡಿಯ ಕಂಪನಿ ಸರ್ಕಾರದ  ಅಡಿಯಲ್ಲಿನ ಪ್ರಾದೇಶಿಕ ಗ್ಯಾಸೆಟಿಯರ್ ಎಂಬ ಎರಡು ಗ್ಯಾಸೆಟಿಯರ್ ಗಳನ್ನು ತಯಾರಿಸಿದರು. ಈ ಎರಡು ಗ್ಯಾಸೆಟಿಯರ್ ಗಳು ಭಾರತದಲ್ಲಿ ದೊರೆಯುವ ಅತಿ ಪುರಾತನ ಗ್ಯಾಸೆಟಿಯರ್ ಗಳಾಗಿವೆ. ಕೆಲವು ವರ್ಷಗಳ ನಂತರ ಅಂದರೆ 1866ರಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಮದ್ಯ ಪ್ರಾಂತ್ಯದ ಭಂಡಾರ (Bhandra) ಜಿಲ್ಲೆಯ ಗ್ಯಾಸೆಟಿಯರನ್ನು ರಿಚರ್ಡ್ ಟಿಂಪಲ್ ರವರು ಪ್ರಕಟಿಸಿದರು. ಇದು, ದೇಶದ ಹಲವಾರು ಭಾಗಗಳ ಗ್ಯಾಸೆಟಿಯರ್ ಸಂಪುಟಗಳನ್ನು ಹೊರತರಲು ಕಾರಣವಾಯಿತು.







Last modified at 24/02/2020 11:55 by System Account

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಗ್ಯಾಸೆಟಿಯರ್ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top