ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ (SIHFW)
ಸಂಸ್ಥೆಯ ಬಗ್ಗೆ
1996-97ರಲ್ಲಿ ಈ ಸಂಸ್ಥೆಯು "ಐಪಿಪಿ-9 ಕರ್ನಾಟಕ ಯೋಜನೆ" ಇದರಡಿಯಲ್ಲಿ ಪ್ರಾರಂಭವಾಯಿತು. ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ, ನವದೆಹಲಿ, ಇವರು 2000-01ರಲ್ಲಿ ಈ ರಾಜ್ಯ ಸಂಸ್ಥೆಗೆ ಆರ್.ಸಿ.ಎಚ್., ಎನ್.ಐ.ಎಚ್.ಎಫ್.ಡಬ್ಲ್ಯೂ. ಗಳಿಗಾಗಿ ಸಹಭಾಗಿತ್ವದ ತರಬೇತಿ ಸಂಸ್ಥೆ (CTI)ಯಾಗಿ ಮಾನ್ಯತೆ ನೀಡಿದರು, ಹಾಗೂ ಈ ಸಂಸ್ಥೆಯು ವೃತ್ತಿಪರ ಅಭಿವೃದ್ಧಿ ಕೋರ್ಸು (ಇ-ಪಿಡಿಸಿ) ಮತ್ತು ಪ್ರೋಗ್ರಾಂ ನಿರ್ವಹಣಾ ಬೆಂಬಲ ಘಟಕ (ಇ-ಪಿಎಂಎಸ್ ಯು)ಗಳೇ ಮುಂತಾದ ಇ-ಕಲಿಕಾ ಕೋರ್ಸುಗಳಿಗೆ ನೋಡಲ್ ಕೇಂದ್ರವಾಗಿದೆ. ಈ ಸಂಸ್ಥೆಯು ಆಸ್ಪತ್ರೆ ನಿರ್ವಹಣೆ, ಆರೋಗ್ಯ ಪ್ರೋತ್ಸಾಹ ಡಿಪ್ಲೊಮಾ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ವಹಣೆಯ ಡಿಪ್ಲೊಮಾ ಕೋರ್ಸುಗಳಿಗೆ ದಕ್ಷಿಣ ಭಾರತದಲ್ಲಿ ದೂರ ಸಂಪರ್ಕ ಕಲಿಕಾ ಶಿಕ್ಷಣಕ್ಕೆ ನೋಡಲ್ ಕೇಂದ್ರವಾಗಿದೆ.
ಧ್ಯೇಯೋದ್ದೇಶಗಳು
• ರಾಜ್ಯ ಮಟ್ಟದಲ್ಲಿ ತರಬೇತಿ ಚಟುವಟಿಕೆಗಳನ್ನು ಸುಗಮಗೊಳಿಸಿ ಗುಣಮಟ್ಟದ ನಿರ್ವಹಣೆ ಹಾಗೂ ತರಬೇತಿಗಳಲ್ಲಿ ಏಕರೂಪತೆ ತರುವುದು.
• ದೀರ್ಘಾವಧಿ ಕೋರ್ಸುಗಳನ್ನು ಪ್ರಾರಂಭಿಸುವುದು – ಆರೋಗ್ಯ ಶಿಕ್ಷಣದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮತ್ತು ಸಾರ್ವಜನಿಕ ಆರೋಗ್ಯ ಶಿಕ್ಷಣದ ನರ್ಸಿಂಗ್ ಕೋರ್ಸು.
• ಇಲಾಖೆಯಲ್ಲಿನ ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗಳಿಗಾಗಿ ತರಬೇತಿ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸುವುದು.
• ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳಡಿಯಲ್ಲಿ ತರಬೇತಿ ಚಟುವಟಿಕೆಗಳನ್ನು ಯೋಜಿಸುವುದು.
• ತರಬೇತಿಯ ಉಸ್ತುವಾರಿ ಹಾಗೂ ಮೌಲ್ಯಮಾಪನ.
ಮಾಹಿತಿ ಹಕ್ಕು