Last modified at 23/03/2019 18:19 by System Account

​​​​​​​​​​​​       
                                            ಶ್ರೀ ಜಾವೇದ್ ಅಖ್ತರ್ ​​

                                          ಸರ್ಕಾರದ ಪ್ರಧಾನ ​ಕಾರ್ಯದರ್ಶಿಗಳು
                                  ಆರೋಗ್ಯ ಮ​ತ್ತು ಕುಟುಂ​ಬ ​ಕಲ್ಯಾ​ಣ ಇಲಾಖೆ
 


ಆರೋಗ್ಯವು ಮಾನವ ಅಭಿವೃದ್ಧಿಯ ಪ್ರಮುಖವಾದ ಒಂದು ಸೂಚಕವಾಗಿದ್ದು ರಾಜ್ಯದ ಒಟ್ಟಾರೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿರೀಕ್ಷಿತ ಆರೋಗ್ಯ ಮಟ್ಟವನ್ನು ಸಾಧಿಸುವ ಹಾಗೂ ಅದನ್ನು ಕಾಪಾಡಿಕೊಂಡು ಹೋಗುವುದೊಂದು ಸದಾ ಮುಂದುವರೆಯಲಿರುವ ಪ್ರಕ್ರಿಯೆ, ಕಳೆದ ಕೆಲ ವರ್ಷಗಳಲ್ಲಿ ರಾಜ್ಯವು ಆರೋಗ್ಯ ವಲಯಕ್ಕೆ ಗಣನೀಯ ಪ್ರಮಾಣದಲ್ಲಿ ಪ್ರಾಮುಖ್ಯತೆಯನ್ನು ನೀಡಿದೆ. ಉತ್ತಮ ಆರೋಗ್ಯ ಸೇವೆ ನೀಡುವುದು ರಾಜ್ಯವು ಅಳವಡಿಸಿಕೊಂಡಿರುವ ಆರೋಗ್ಯ ನೀತಿತಂತ್ರದ ಒಂದು ಅತ್ಯವಶ್ಯಕ ಆಯಾಮ ಸಾಧ್ಯ ಆರೋಗ್ಯ ನೀತಿ ಕ್ರಮಗಳ ಗಮನವು ಕಾಯಿಲೆಗಳನ್ನು ಪತ್ತೆಹಚ್ಚುವುದು, ಕಾಯಿಲೆ ಮತ್ತು ಗಾಯಗಳನ್ನು ಗುಣಪಡಿಸಲಾಗುವುದು ಮತ್ತು ಪ್ರಕರಣಗಳನ್ನು ಕಣ್ಗಾವಲು ವ್ಯವಸ್ಥೆಯ ಮೂಲಕ ಪತ್ತೆ ಹಚ್ಚಿ, ಆರೋಗ್ಯ ಸುಧಾರಿಸುವ ಸಲುವಾಗಿ ಪೂರಕ ವಾತಾವರಣ ನಿರ್ಮಾಣ ಮಾಡುವ ಮೂಲಕ ಹಾಗೂ ವಿವಿಧ ಯೋಜನೆಗಳ ಮೂಲಕ ಸಮುದಾಯಗಳ ಮನೋಬಲ ಮತ್ತು ಪರಿಸರಗುಣಮಟ್ಟ ಸುಧಾರಿಸಿ ಸಾಮಾಜಿಕ/ ಆಕ ಬೆಳವಣಿಗೆಗೆ ಸಹಕಾರಿಯಾಗುವ ದಿಸೆಯಲ್ಲಿ ರಾಜ್ಯವು ಹೆಚ್ಚಿನ ಗಮನವನ್ನು ನೀಡಿದೆ.

ಜನರ ಆರೋಗ್ಯ ಮಟ್ಟವನ್ನು ಸುಧಾರಿಸುವಲ್ಲಿ ಕರ್ನಾಟಕ ರಾಜ್ಯವು ಕಳೆದ ಕೆಲವು ದಶಕಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಆದಾಗ್ಯೂ, ಇಷ್ಟು ಪ್ರಗತಿಯನ್ನು ಸಾಧಿಸಿದ ಮೇಲೂ, ಅಪೇಕ್ಷಿತ ಆರೋಗ್ಯ ಗುರಿಗಳನ್ನು ಸಾಧಿಸಬೇಕಾದರೆ ರಾಜ್ಯವು ಬಹಳಷ್ಟು ದೂರ ಸಾಗಬೇಕಾಗಿದೆ. ರಾಜ್ಯದ ವಿವಿಧ ಮಟ್ಟಗಳಲ್ಲಿ ಆರೋಗ್ಯ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡುವಲ್ಲಿ ರಾಜ್ಯವು ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಆಂತರಿಕ ಉತ್ಪನ್ನದ ಬೆಳವಣಿಗೆ ದರ ಆರೋಗ್ಯದಡಿ ಸಾರ್ವಜನಿಕ ವೆಚ್ಚವು ಶೇ.0.9ರಷ್ಟು ಇರುತ್ತದೆ.


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಸಕಾಲದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಬೇಕೆಂಬುದು ಆರೋಗ್ಯ ಮತ್ತು ಕುಟುಂಬ ಇಲಾಖೆಯ ಧ್ಯೇಯವಾಗಿದ್ದು ಈ ಧ್ಯೇಯಗಳ ಸಾಧನೆಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹಲವಾರು ಮಹತ್ತರ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದೆ. ಪ್ರತಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ವಿವಿಧ ರೀತಿಯ ಕಾರ್ಯ ತಂತ್ರಗಳನ್ನು ರಚಿಸಿಕೊಳ್ಳಲಾಗುತ್ತದೆ.​

ಕರ್ನಾಟಕದ 6 ಕೋಟಿಗೂ ಮೀರಿದ ಜನರ ಆರೋಗ್ಯವನ್ನು ಕಾಪಾಡುವಂತಹ ಜವಾಬ್ದಾರಿ ಮತ್ತು ಬದ್ಧತೆಯಿಂದ ಆರೋಗ್ಯ ಮತ್ತು ಕು.ಕ ಸೇವೆಗಳ ಇಲಾಖೆಯ ಮೂಲಕ ಸಾರ್ವಜನಿಕ ಆರೋಗ್ಯವನ್ನು ಬಲಪಡಿಸುವ ವ್ಯವಸ್ಥೆಯಲ್ಲಿ ಕರ್ನಾಟಕ ಸರ್ಕಾರವು ಪ್ರಮುಖ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.


  • ​​​ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ಸರ್ಕಾರಿ ಸ್ವಾಮ್ಯದಲ್ಲಿ ವಿನೂತನವಾಗಿ ಬೈಕ್ ಆಂಬ್ಯುಲೆನ್ಸ್ ಸೇವೆಯನ್ನು ಅನುಷ್ಠಾನಗೊಳಿಸಿದೆ. ಇದರಿಂದ ಯಾವುದೇ ತುರ್ತು ಸಂದರ್ಭದ (Platinum Hour) ಲ್ಲಿ ತಲುಪಿ ಜೀವ ಉಳಿಸಲು ಸಾಧ್ಯವಾಗುತ್ತದೆ.​ 

  • ತುರ್ತು ಸಾಗಾಣಿಕೆ ಒದಗಿಸಲು ಆರೋಗ್ಯ ಕವಚ (108) ಯೋಜನೆಯನ್ನು ವಿಸ್ತರಿಸಿ ಹಾಲಿಯಿರುವ 711 ಆಂಬ್ಯುಲೆನ್ಸ್ ವಾಹನಗಳ ಜೊತೆಗೆ 198 ಆಂಬ್ಯುಲೆನ್ಸ್ ವಾಹನಗಳನ್ನು ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರ ಇದರ ಅಗತ್ಯತೆಯನ್ನು ಅರಿತು ಸದ್ಯದಲ್ಲಿಯೇ ಇನ್ನೂ 151 ಅಂಬ್ಯಲೆನ್ಸ್ ವಾಹನಗಳನ್ನು ಒದಗಿಸಲು ಉದ್ದೇಶಿಸಲಾಗಿದೆ.

  • ರಾಜೀವ್ ಆರೋಗ್ಯ ಭಾಗ್ಯಖ ಮತ್ತು ಖಜ್ಯೋತಿ ಸಂಜೀವಿನಿ ಯೋಜನೆಗಳ ಅನುಷ್ಠಾನದ ಮೂಲಕ, "ಎಲ್ಲರಿಗೂ ಆರೋಗ್ಯ, ಎಲ್ಲಡೆಯೂ ಆರೋಗ್ಯ" ಘೋಷಣೆ (Universal Health Care) (Quality health care for all) ಗೆ ಪೂರಕವಾದಂತೆ,ಮಾರಣಾಂತಿಕ ಖಾಯಿಲೆಗಳ ಚಿಕಿತ್ಸೆಯನ್ನು ರಾಜ್ಯದ ಎಲ್ಲರಿಗೂ ಒದಗಿಸುವ ರಾಷ್ಟ್ರದ ಏಕಮೇವ ಮತ್ತು ಮೊಟ್ಟಮೊದಲ ರಾಜ್ಯವಾಗಿರುತ್ತದೆ.  ಆರೋಗ್ಯವಿಮೆ / ಭಾಗೀದಾರರ ಕೊಡುಗೆಯನ್ನು ಆಧರಿಸಿ ರಾಜೀವ್ ಆರೋಗ್ಯ ಭಾಗ್ಯ ಯೋಜನೆಯ ಮೂಲಕ, ಬಿಪಿಎಲ್ ವರ್ಗಕ್ಕೆ ಸೇರದಿರುವ ಎ.ಪಿ.ಎಲ್.ಗೆ ಸೇರಿದ ವಿವಿಧ ಕಾರ್ಮಿಕ ವರ್ಗಗಳು ಹಾಗೂ ಜನಸಮುದಾಯದವರಿಗೆಗಂಭೀರ ಹಾಗೂ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾದ ಎ.ಪಿ.ಎಲ್. ಕುಟುಂಬದ ಸದಸ್ಯರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ತೃತೀಯ ಹಂತದ (Tertiary Health Care) ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಖಜ್ಯೋತಿ ಸಂಜೀವಿನಿಖ ವಿಮಾ ಯೋಜನೆಯ ರಾಜ್ಯ ಸರ್ಕಾರದ ನೌಕರರು ಮತ್ತು ಅವರ ಕುಟುಂಬ ಅವಲಂಬಿತ ಸದಸ್ಯರಿಗೆ ವೈದ್ಯಕೀಯ ನೆರವನ್ನು (ನಗದು ರಹಿತ ಚಿಕಿತ್ಸೆ) ನೀಡಲಾಗುತ್ತಿದೆ.

  • ಖಾಲಿಯಿರುವ 983 ತಜ್ಞ ವೈದ್ಯರು, 331 ಸಾಮಾನ್ಯ ವೈದ್ಯಾಧಿಕಾರಿಗಳು ಮತ್ತು 87 ದಂತ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಕರ್ನಾಟಕ ಲೋಕಸೇವಾ ಆಯೋಗವು ಜಾಹೀರಾತನ್ನು ಹೊರಡಿಸಿದೆ.  ಈ ಹುದ್ದೆಗಳು ಸೇರಿದಂತೆ ಇಲಾಖೆಯಲ್ಲಿ ಖಾಲಿಯಿರುವ ಇತರೆ ವೈದ್ಯೇತರ ಹುದ್ದೆಗಳ ನೇಮಕಾತಿಯನ್ನು ಕೂಡ ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಲು ಉದ್ದೇಶಿಸಿದೆ ಹಾಗೂ ಪ್ರೋತ್ಸಾಹದಾಯಕವಾದ ವೇತನವನ್ನು ನಿಗಧಿಗೊಳಿಸಿದೆ. ಗ್ರಾಮಾಂತರ ವೈದ್ಯ ಸೇವೆ ಅಧಿನಿಯಮಕ್ಕೆ ಪೂರಕವಾಗಿ ಸುಮಾರು 2,000 ಕ್ಕಿಂತ ಹೆಚ್ಚು ವೈದ್ಯರುಗಳು ಗ್ರಾಮಾಂತರ ಸೇವೆಗೆ ಲಭ್ಯವಿದ್ದಾರೆ ಹಾಗೂ ಅವರ ಗೌರವಧನಕ್ಕಾಗಿ ರೂ. 185 ಕೋಟಿ ಮೀಸಲಿರಿಸಲಾಗಿದೆ.

  • ರಸ್ತೆ ಅಪಾತಕ್ಕೆ ತುತ್ತಾಗುವ ಸಂತ್ರಸ್ತರಿಗೆ ತುರ್ತು ನಗದು ರಹಿತ ಚಿಕಿತ್ಸೆಯನ್ನು ಅಪಾತದ ನಂತರದ ಸೂಕ್ಷ್ಮ ಅವಧಿಯೊಳಗೆ (Golden Hour) ನೀಡಲು ಮುಖ್ಯಮಂತ್ರಿಗಳ ಸಾಂತ್ವಾನ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

  • ಸರ್ಕಾರಿ ಆಸ್ಪತ್ರೆಗಳಿಗೆ ಬೇಡಿಕೆಗೆ ಅನುಗುಣವಾಗಿ ಅವಶ್ಯಕ ಔಷಧಿಗಳನ್ನು ಪೂರೈಸುವ ಮೂಲಕ ಎಲ್ಲಾ ರೋಗಿಗಳಿಗೆ ಉಚಿತ ಔಷಧಿ ಲಭ್ಯಗೊಳಿಸಲು ಈ ಸಾಲಿನಿಂದ ನೂತನ ಕಾರ್ಯತಂತ್ರವನ್ನು ರೂಪಿಸಿಕೊಳ್ಳಲಾಗಿದೆ. ಈಗಾಗಲೇ, 2013-14ನೇ ಸಾಲಿನಿಂದ ನಮ್ಮ ಸರ್ಕಾರವು ಪ್ರತಿ ತಾಲ್ಲೂಕಿಗೆ ಒಂದರಂತೆ ಜೆನೆರಿಕ್ ಔಷಧಿಗಳ ಮಳಿಗೆಗಳನ್ನು ಸ್ಥಾಪಿಸಲು ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ಯೋಜನೆಯನ್ನು ಈ ವರ್ಷ ಕಾರ್ಯಗತಗೊಳಿಸಲಾಗುತ್ತಿದೆ.

  • ಈ ವರ್ಷದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿರುವ ಹೈ-ಫ್ರೀಕ್ವೆನ್ಸಿ ಕ್ಷ-ಕಿರಣ ಡಿಜಿಟಲ್ ತಂತ್ರಾಂಶವನ್ನು ಅಳವಡಿಸಿ, ಟೆಲಿ-ರೇಡಿಯಾಲಜಿ ಮೂಲಕ ಕ್ಷ-ಕಿರಣ ಪ್ರತಿಗಳನ್ನು ಮೇಲ್ಪಟ್ಟದ ಆಸ್ಪತ್ರೆಗಳಿಗೆ ಕಳುಹಿಸಿ ತಜ್ಞರ ಅಭಿಪ್ರಾಯ ಹಾಗೂ ಸಲಹೆ ನೀಡುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ.

  • ರಾಜ್ಯದ ಹಿಂದುಳಿದ ಜಿಲ್ಲೆಗಳಾದ ಕಲ್ಬುರ್ಗಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೆಳ್ಳಾರಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರವು ರೂಪಿಸಿರುವ ಇಂದ್ರಧನುಷ್ ಅಭಿಯಾನ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗಿದೆ.  ಈ ಕಾರ್ಯಕ್ರಮದ ಮೂಲಕ, ಎಲ್ಲಾ ಶಿಶುಗಳನ್ನು 9 ಮಾರಕ ರೋಗಗಳಿಂದ ರಕ್ಷಿಸಲು ಬಿಸಿಜಿ ಮತ್ತು ಲಸಿಕೆಗಳನ್ನು ನೀಡಲಾಗುತ್ತಿದೆ.

  • ರಾಜ್ಯದಲ್ಲಿ ಪ್ರಸಕ್ತ ತಾಯಂದಿರ ಮರಣ ಪ್ರಮಾಣ 1 ಲಕ್ಷ ಸಜೀವ ಜನನಕ್ಕೆ 133ರಿಂದ 100ರವರೆಗೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಸೂತಿ ಆರೈಕೆ, ಜನನಿ ಸುರಕ್ಷಾ ಯೋಜನೆ, ತಾಯಿ ಭಾಗ್ಯ ಮತ್ತು ಜನನಿ ಶಿಶು ಸುರಕ್ಷ ಕಾರ್ಯಕ್ರಮಗಳು ಪೂರ್ಣ ಫಲಕಾರಿಯಾಗಲು, ರಾಜ್ಯದ ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ರಕ್ತ ಸಂಗ್ರಹಣ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.

  • ಶಿಶು ಮರಣ ಪ್ರಮಾಣ ಪ್ರತಿ ಸಾವಿರ ಸಜೀವ ಜನನಗಳಿಗೆ ಪ್ರಸಕ್ತ 31 ಇದ್ದು, ಇದನ್ನು ಇನ್ನು ಕಡಿಮೆ ಮಾಡುವ ಗುರಿಯನ್ನು ಸಾಧಿಸುವುದಕ್ಕಾಗಿ, ನವಜಾತಿ ಶಿಶುಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸಾ ಘಟಕಗಳನ್ನು SNCU (Sick natal care unit) ಸ್ಥಾಪಿಸಲಾಗುತ್ತಿದೆ.

​ 


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top