ಇಡೀ ದೇಶದಲ್ಲಿ ಪ್ರತ್ಯೇಕ ತೋಟಗಾರಿಕಾ ಇಲಾಖೆಯನ್ನು ಹೊಂದಿದ ಮೊದಲ ರಾಜ್ಯ ಕರ್ನಾಟಕ, ನಂತರದ ವರ್ಷಗಳಲ್ಲಿ ಇತರೆ ರಾಜ್ಯಗಳು ಕರ್ನಾಟಕದ ಉದಾಹರಣೆಯನ್ನು ಅನುಸರಿಸಿ ಪ್ರತ್ಯೇಕ ತೋಟಗಾರಿಕಾ ಇಲಾಖೆಯನ್ನು ಹೊಂದಿದವು. ಈ ಕಾರಣ, ರಾಜ್ಯವು ತೋಟಗಾರಿಕಾ ವಲಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲು ಸಾಧ್ಯವಾಯಿತು.
ತೋಟಗಾರಿಕೆಯು ಕರ್ನಾಟಕ ರಾಜ್ಯದಲ್ಲಿ ಒಂದು ಗಮನಾರ್ಹ ಮತ್ತು ಮುಂಬರುವ ಕ್ಷೇತ್ರವಾಗಿದೆ. ತೋಟಗಾರಿಕೆಯು ಕೃಷಿ ಭೂಮಿ ಬಳಕೆಗೆ ಒಂದು ಉತ್ತಮ ವೈವಿಧ್ಯೀಕರಣಕ ಆಯ್ಕೆ ಎಂದು ಸಾಬೀತಾಗಿದೆ. ಏಕೆಂದರೆ, ರೈತರಿಗೆ ಖಚಿತವಾದ ಲಾಭದಾಯಕ ಆದಾಯವಾಗಿದೆ. ತೋಟಗಾರಿಕೆ ಇಲಾಖೆಯು ರಾಜ್ಯದ ಒಟ್ಟಾರೆ ತೋಟಗಾರಿಕಾ ಅಭಿವೃದ್ಧಿಗೆ ಜವಾಬ್ದಾರಿಯಾಗಿದೆ. ಇಲಾಖೆಯು ತೋಟಗಾರಿಕೆ ಅಭಿವೃದ್ಧಿಗೆ ಒಂದು ನಿರ್ದಿಷ್ಟ ನೀತಿಯನ್ನು ಅಳವಡಿಸಿಕೊಂಡಿದೆ