ಜ್ಞಾನದ ವ್ಯಾಪ್ತಿ (2016-2019)
ಕರ್ನಾಟಕ ಸರ್ಕಾರವು ಕರ್ನಾಟಕ ಜ್ಞಾನ ಆಯೋಗದ ರಚನೆಯ ಮರು-ಅಧಿಸೂಚನೆಯನ್ನು ಹೊರಡಿಸಿದೆ:
GO No. ED 354 URC 2016 (Part-1) Dated 25/06/2019
ಈ ಅಧಿಸೂಚನೆಯು ಉಲ್ಲೇಖದ ನಿಯಮಗಳು, ಸದಸ್ಯತ್ವ ಮತ್ತು ಆಯೋಗಕ್ಕೆ ಸಂಬಂಧಿಸಿದ ಇನ್ನಿತರ ಮಾಹಿತಿಗಳನ್ನು ಒದಗಿಸುತ್ತದೆ. ಆಯೋಗದ ಅಧಿಕಾರಾವಧಿಯು ಮೂರುವರ್ಷಗಳು ಆಗಿವೆ (2016-2019).
ಡಾ. ಕಸ್ತೂರಿರಂಗನ್‍ರವರು ಆಯೋಗದ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಪ್ರಸ್ತುತ ಆಯೋಗವು 36 ಸದಸ್ಯರನ್ನು ಒಳಗೊಂಡಿದೆ.
ಸಾಂಸ್ಥಿಕ ರಚನೆ, ನೀತಿ ನಾವಿನ್ಯತೆ ಮತ್ತು ಶಿಕ್ಷಣ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಉದ್ಯಮ, ವಾಣಿಜ್ಯೋದ್ಯಮ, ಸಂಶೋಧನೆ ಮತ್ತು ನಾವೀನ್ಯತೆ, ಸಾಂಪ್ರದಾಯಿಕ ಜ್ಞಾನ, ಕೃಷಿ, ಇ-ಆಡಳಿತ, ಗ್ರಾಮೀಣಾಭಿವೃದ್ಧಿ ಇತ್ಯಾದಿ ಹಾಗೂ ಇತರ ಸಂಬಂಧಿತ ವಲಯಗಳೆಡೆ ತನ್ನ ಗಮನವನ್ನು ಕೇಂದ್ರೀಕರಿಸಿದೆ.
ಈ ಕೆಳಗಿನವುಗಳು ಆಯೋಗದ ಉಲ್ಲೇಖದ ನಿಯಮಗಳಾಗಿವೆ:
- ಸಾಂಸ್ಥಿಕ ರಚನೆ, ನೀತಿ ನಾವಿನ್ಯತೆ ಮತ್ತು ಶಿಕ್ಷಣ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ, ಉದ್ಯಮ, ವಾಣಿಜ್ಯೋದ್ಯಮ, ಸಂಶೋಧನೆ ಮತ್ತು ನಾವೀನ್ಯತೆ, ಸಾಂಪ್ರದಾಯಿಕ ಜ್ಞಾನ, ಕೃಷಿ, ಇ-ಆಡಳಿತ, ಗ್ರಾಮೀಣಾಭಿವೃದ್ಧಿ ಇತ್ಯಾದಿ ಹಾಗೂ ಇತರೆ ಕರ್ನಾಟಕ ಸಂಬಂಧಿತ ವಲಯಗಳೆಡೆಗೆ ಗಮನೀಕರಿಸುವುದು.
- 21ನೇ ಶತಮಾನದ ಜ್ಞಾನಸವಾಲುಗಳನ್ನು ಪೂರೈಸಲು ಮತ್ತು ಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕದ ಸ್ಪರ್ಧಾತ್ಮಕ ಅನುಕೂಲತೆಯನ್ನು ಹೆಚ್ಚಿಸಲು ಶೈಕ್ಷಣಿಕ ವ್ಯವಸ್ಥೆಯ ಉತ್ಕೃಷ್ಟತೆಯನ್ನು ನಿರ್ಮಿಸುವುದು.
- ಕರ್ನಾಟಕದ ಎಲ್ಲಾ ಔಪಚಾರಿಕ ಮತ್ತು ಅನೌಪಚಾರಿಕ ಶೈಕ್ಷಣಿಕ, ವೈಜ್ಞಾನಿಕ ಮತ್ತು ಜ್ಞಾನ ಸಂಸ್ಥೆಗಳಲ್ಲಿ ಜ್ಞಾನದ ಸೃಷ್ಟಿಗೆ ಉತ್ತೇಜನ ನೀಡುವುದು.
- ಕರ್ನಾಟಕದ ಶೈಕ್ಷಣಿಕ ಮತ್ತು ಜ್ಞಾನಸಂಸ್ಥೆಗಳ ನಾಯಕತ್ವ ಮತ್ತು ನಿರ್ವಹಣೆ ಸುಧಾರಿಸುವುದು.
- ಕೃಷಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಉದ್ಯಮ ಮತ್ತು ಇತರ ಕ್ಷೇತ್ರಗಳಲ್ಲಿ ಜ್ಞಾನದ ಅನ್ವಯಿಕಗಳನ್ನು ಉತ್ತೇಜಿಸುವುದು.
- ನಾಗರಿಕರಿಗೆ ಸರ್ಕಾರದ ಸೇವೆಗಳನ್ನು ಪರಿಣಾಮಕಾರಿಯಾಗಿ ಪೂರೈಕೆ ಮಾಡುವಲ್ಲಿ ಮತ್ತು ಸಾರ್ವಜನಿಕರು ಈ ನಿಟ್ಟಿನಲ್ಲಿ ಪ್ರಯೋಜನವನ್ನು ಪಡೆಯಲು ಜ್ಞಾನದ ವ್ಯಾಪಕ ಹಂಚಿಕೆಯನ್ನು ಉತ್ತೇಜಿಸಲು ಜ್ಞಾನದ ಸಾಮರ್ಥ್ಯ ಗಳನ್ನು ವರ್ಧಿಸುವುದು.
- ಜ್ಞಾನಾಧಾರಿತ ಸಂರಕ್ಷಣೆ, ಹೊಸ ಪರಿಕಲ್ಪನೆಗಳು, ಸೃಷ್ಟಿ, ಅನ್ವಯಿಕಗಳು, ಪ್ರಸರಣ ಮತ್ತು ಸೇವೆಗಳನ್ನೊಳಗೊಂಡ ಉದ್ದೇಶಗಳನ್ನು ಪೂರೈಸಲು ಅಂತರ-ಕ್ಷೇತ್ರದ ಸಂವಹನೆ ಮತ್ತು ಪರಸ್ಪರ ಸಂಪರ್ಕ ಪ್ರೋತ್ಸಾಹಿಸುವುದು.
- ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಸೂಕ್ತವಾದ ಸಾಂಸ್ಥಿಕ ಚೌಕಟ್ಟನ್ನು ಅಭಿವೃದ್ಧಿಪಡಿಸಿ, ದೇಶೀಯ ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಜ್ಞಾನದ ಅನ್ವಯಿಕಗಳನ್ನು ಸುಗಮಗೊಳಿಸುವುದು.
- ಆಡಳಿತವನ್ನು ವರ್ಧಿಸಲು, ಸಂಪರ್ಕವನ್ನು ಸುಧಾರಿಸಲು ಮತ್ತು ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡಲು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಭದ್ರಪಡಿಸುವುದು.
- ಜಾಗತಿಕ ಮಟ್ಟದಲ್ಲಿ ಜ್ಞಾನ ವ್ಯವಸ್ಥೆಗಳ ನಡುವಿನ ವಿನಿಮಯ ಮತ್ತು ಪರಸ್ವರ ಸಂವಹನ ಪ್ರಕ್ರಿಯೆಗಳನ್ನು ಹೆಚ್ಚಿಸಲು ಕಾರ್ಯವಿಧಾನಗಳನ್ನು ರೂಪಿಸುವುದು.
- ಸಮಯಾನುಸಾರ ಪರೀಕ್ಷಿತಗೊಂಡ ಪರಿಕಲ್ಪನೆಗಳು ಮತ್ತು ಜ್ಞಾನದ ಉತ್ತಮ ಬಳಕೆಗಳನ್ನು ಕಾಯ್ದಿರಿಸಿಕೊಳ್ಳಲು ಕರ್ನಾಟಕದ ಸ್ಥಳೀಯ ಮತ್ತು ಪರಂಪರಾಗತ ಜ್ಞಾನವನ್ನು ಸಂರಕ್ಷಿಸುವುದು.