ಕರ್ನಾಟಕ ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಗಣಕೀಕರಣ : ರಾಜ್ಯದಲ್ಲಿನ ಎಲ್ಲಾ 250 ಉಪನೋಂದಣಿ ಕಛೇರಿಗಳು ಮತ್ತು 34 ಜಿಲ್ಲಾನೋಂದಣಿ ಕಛೇರಿಗಳನ್ನು 2003-2004 ನೇ ಸಾಲಿನಿಂದಲೆ ಗಣಕೀಕರಣಗೊಳಿಸಲಾಗಿದೆ. ಗಣಕೀಕರಣವು ಕೆಳಕಂಡ ಗುರಿಗಳನ್ನು ಹೊಂದಿರುತ್ತದೆ : - ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆಯ ಸರಳೀಕರಣ.
- ಸಾರ್ವಜನಿಕರಿಗೆ 30 ನಿಮಿಷಗಳ ಒಳಗೆ ನೋಂದಾಯಿಸಿದ ದಸ್ತಾವೇಜನ್ನು ಹಿಂತಿರುಗಿಸುವುದು.
- ಋಣಭಾರ ಪ್ರಮಾಣಪತ್ರ ಮತ್ತು ದಸ್ತಾವೇಜುಗಳ ದೃಢೀಕೃತ ಪತ್ರಿಗಳನ್ನು ಒಂದೇ ದಿನದಲ್ಲಿ ನೀಡುವುದು.
- ಇಲಾಖೆಯ ದಕ್ಷತೆಯನ್ನು ಉತ್ತಮಗೊಳಿಸುವುದು.
- ಇಲಾಖೆಯ ಕರ್ತವ್ಯಗಳಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ತರುವುದು.
- ಅಂತರ್ನಿರ್ಮಿತ ಮಾರುಕಟ್ಟೆ ದರ ಬುದ್ಧಿಮತ್ತೆ.
- ಬೆಂಗಳೂರು ನಗರ ಜಿಲ್ಲೆಯ ಯಾವುದೇ ಉಪನೋಂದಣಿ ಕಛೇರಿಯಿಂದ ಋಣಭಾರ ಪ್ರಮಾಣಪತ್ರ ನೀಡುವಿಕೆ.
- ಇಲಾಖೆ ಮತ್ತು ಸರ್ಕಾರದ ನೀತಿ ತಯಾರಕರ ಉಪಯೋಗಕ್ಕಾಗಿ ಹಲವಾರು ಎಂ.ಐ.ಎಸ್ (MIS) ವರದಿಗಳನ್ನು ಉತ್ಪತ್ತಿ ಮಾಡುವುದು.
|