ಕರ್ನಾಟಕ ಭವನ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಒಟ್ಟು ಮೂರು ಆತಿಥ್ಯ ಭವನಗಳಿದ್ದು, ಕ್ರಮವಾಗಿ ಕರ್ನಾಟಕ ಭವನ-1 (ಕಾವೇರಿ), ಕರ್ನಾಟಕ ಭವನ-2 (ಶರಾವತಿ) ಹಾಗೂ ಕರ್ನಾಟಕ ಭವನ-3 (ಭೀಮಾ) ಎಂದು ಕರೆಯುವರು,

 

ಕರ್ನಾಟಕ ಭವ​​ನ-1 (ಕಾವೇರಿ)

 
ವಿಳಾಸ:  ನಂ.10, ಕೌಟಿಲ್ಯ ಮಾರ್ಗ, ಚಾಣಕ್ಯಪುರಿ, ನವದೆಹಲಿ-110021.
           
ಇದು ನವದೆಹಲಿಯ ಕೇಂದ್ರ ಭಾಗದಲ್ಲಿದ್ದು, ಹೋಟೆಲ್ ಅಶೋಕ ಮತ್ತು ಸಾಮ್ರಾಟ್ ಗೆ ಹತ್ತಿರದಲ್ಲಿದೆ.   ನವದೆಹಲಿ ರೈಲ್ವೇ ಸ್ಟೇಷನ್ ನಿಂದ 9 ಕಿ.ಮೀ, ಹಜರತ್ ನಿಜಾಮುದ್ದೀನ್ ರೈಲ್ವೇ ನಿಲ್ಡಾಣದಿಂದ 7 ಕಿ.ಮೀ, ಹಳೆಯ ರೈಲ್ವೇ ನಿಲ್ಡಾಣದಿಂದ 18 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಇಂದಿರಾ ಗಾಂಧಿ ಡೊಮೆಸ್ಟಿಕ್ ವಿಮಾನ ನಿಲ್ಡಾಣವಾದ ಟಿರ್ಮಿನಲ್-1 ಕೇವಲ 10 ಕಿ.ಮೀ ದೂರದಲ್ಲಿದ್ದು, ಇಂದಿರಾ ಗಾಂಧಿಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದ ಟಿರ್ಮಿನಲ್-3 17 ಕಿ.ಮೀ ದೂರದಲ್ಲಿರುತ್ತದೆ.
 
• ಕರ್ನಾಟಕ ಭವನ-1 (ಕಾವೇರಿ) ಯಲ್ಲಿ 07 ಅತೀ ಗಣ್ಯರ ಕೊಠಡಿಗಳಿದ್ದು, ಇದರೊಂದಿಗೆ 02 ವಿಶೇಷ (ಸ್ಯೂಟ್) ಕೊಠಡಿಗಳಿದ್ದು, ಅವುಗಳಲ್ಲಿ 1) ಘನತೆವೆತ್ತ ರಾಜ್ಯಪಾಲರ 2) ಮಾನ್ಯ ಮುಖ್ಯ ನ್ಯಾಯಾಧೀಶರ ಉಪಯೋಗಕ್ಕಾಗಿಯೇ ಮೀಸಲಿರಿಸಲಾಗಿದೆ.
• ಕರ್ನಾಟಕ ಭವನ ಕಾವೇರಿ (ಆನೆಕ್ಸ್)ಯಲ್ಲಿ 35 ಕೊಠಡಿಗಳಿದ್ದು, ಇವುಗಳಲ್ಲಿ 01 ಅತೀ ಗಣ್ಯರಕೊಠಡಿಗಳು (ಮಾನ್ಯ ಮುಖ್ಯಮಂತ್ರಿಗಳ ಉಪಯೋಗಕ್ಕೆ ಮೀಸಲು), 10 ಗಣ್ಯರ ಕೊಠಡಿಗಳು, 24 ಅಥಿತಿಗಳ ಕೊಠಡಿಗಳು ಉಪಯೋಗಕ್ಕಾಗಿಯೇ ಮೀಸಲಿರಿಸಲಾಗಿದೆ.
 

ಕರ್ನಾಟಕ ಭವನ-2 (ಶರಾವತಿ)

 
ವಿಳಾಸ:  ನಂ.06, ಸರ್ದಾರ್ ಪಟೇಲ್ ಮಾರ್ಗ, ಚಾಣಕ್ಯಪುರಿ, ನವದೆಹಲಿ-110021.
           
ಇದೂ ಸಹ ನವದೆಹಲಿಯ ಕೇಂದ್ರ ಭಾಗದಲ್ಲಿದ್ದು, ನವದೆಹಲಿಯಲ್ಲಿ ವಿವಿಧ ರಾಷ್ಟ್ರಗಳ ಪ್ರತಿಶ್ಠಿತ ರಾಯಭಾರಿ ಕಚೇರಿಗಳಿರುವ ಡಿಪ್ಲಮೆಟಿಕ್ ಎನ್‍ಕ್ಲೇವ್ ಗೆ ಹೊಂದಿಕೊಂಡಿರುತ್ತದೆ. ನವದೆಹಲಿ ರೈಲ್ವೇ ಸ್ಟೇಷನ್ ನಿಂದ 8 ಕಿ.ಮೀ, ಹಜರತ್ ನಿಜಾಮುದ್ದೀನ್ ರೈಲ್ವೇ ನಿಲ್ಡಾಣದಿಂದ 9 ಕಿ.ಮೀ, ಹಳೆಯ ರೈಲ್ವೇ ನಿಲ್ಡಾಣದಿಂದ 18 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಇಂದಿರಾ ಗಾಂಧಿ ಡೊಮೆಸ್ಟಿಕ್ ವಿಮಾನ ನಿಲ್ಡಾಣವಾದ ಟಿರ್ಮಿನಲ್-1 ಕೇವಲ 11 ಕಿ.ಮೀ ದೂರದಲ್ಲಿದ್ದು, ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದ ಟಿರ್ಮಿನಲ್-3  17 ಕಿ.ಮೀ ದೂರದಲ್ಲಿರುತ್ತದೆ.

ಕರ್ನಾಟಕ ಭವನ-ಶರಾವತಿಯಲ್ಲಿ ಒಟ್ಟು 36 ಕೊಠಡಿಗಳಿರುತ್ತವೆ.  35 ಕೊಠಡಿಗಳುಎರಡು ಹಾಸಿಗೆಯನ್ನು ಹೊಂದಿರುತ್ತವೆ,  ಕರ್ನಾಟಕ ವಾರ್ತಾ ಮತ್ತು ಪ್ರಚಾರ ಇಲಾಖೆಯ ಕಛೇರಿಗಾಗಿ 01     ಕೊಠಡಿಯನ್ನು ಒದಗಿಸಲಾಗಿದೆ.

ಕರ್ನಾಟಕ ಭವನ-3 (ಭೀಮಾ)


ವಿಳಾಸ:  ನಂ. ಎ-5, ಆಂಡ್ರೂಸ್ ಗಂಜ್, ಹುಡ್ಕೋ ಪ್ಲೇಸ್, ಅನ್ಸಲ್ ಪ್ಲಾಜಾ, ಖೇಲ್ ಗಾವ್ ರಸ್ತೆ, ನವದೆಹಲಿ-110049

ಇದೂ ಸಹ ನವದೆಹಲಿಯ ಹುಡ್ಕೋ ಪ್ಲೇಸ್ ಪ್ರದೇಶದಲ್ಲಿದ್ದು, ನವದೆಹಲಿ ರೈಲ್ವೇ ಸ್ಟೇಷನ್ ನಿಂದ 12 ಕಿ.ಮೀ, ಹಜರತ್ ನಿಜಾಮುದ್ದೀನ್ ರೈಲ್ವೇ ನಿಲ್ಡಾಣದಿಂದ 8 ಕಿ.ಮೀ, ಹಳೆಯ ರೈಲ್ವೇ ನಿಲ್ಡಾಣದಿಂದ 20 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಇಂದಿರಾ ಗಾಂಧಿ ಡೊಮೆಸ್ಟಿಕ್ ವಿಮಾನ ನಿಲ್ಡಾಣವಾದ ಟಿರ್ಮಿನಲ್-1 13 ಕಿ.ಮೀ ದೂರದಲ್ಲಿದ್ದು, ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದ ಟಿರ್ಮಿನಲ್-3  19 ಕಿ.ಮೀ ದೂರದಲ್ಲಿರುತ್ತದೆ.

•  ಕರ್ನಾಟಕ ಭವನ- “ಭೀಮ”ದಲ್ಲಿ ಒಟ್ಟು  34 ಕೊಠಡಿಗಳಿದ್ದು, 5 ವಿಐಪಿ ಕೊಠಡಿಗಳು, 2 ಹಾಸಿಗೆಯ 25 ಕೊಠಡಿಗಳು, ಕರ್ನಾಟಕ ಉದ್ಯೋಗ ಮಿತ್ರ ಕಛೇರಿಗಾಗಿ 2 ಕೊಠಡಿಗಳು, ಕೆಪಿಸಿಎಲ್ ಕಛೇರಿಗೆ 1 ಕೊಠಡಿ ಮತ್ತು  1 ಉಗ್ರಾಣ ಕೊಠಡಿಯಿದೆ ಇದರೊಂದಿಗೆ ನೆಲ ಮಹಡಿಯಲ್ಲಿ ಕಾವೇರಿ ಮತ್ತು ಕೃಷ್ಣ ಜಲ ಕೋಶಗಳ ಕಛೇರಿಗಳು ಕರ್ತವ್ಯ ನಿರ್ವಹಿಸುತ್ತಿವೆ. 

ಎಲ್ಲಾ ಮೂರು ಕರ್ನಾಟಕ ಭವನಗಳು ಕೇಂದ್ರ ವಾತಾನುಕೂಲ ಸೌಲಭ್ಯವನ್ನು ಹೊಂದಿರುತ್ತವೆ ಮತ್ತು ಮೂರು ಸ್ಟಾರ್ ಹೋಟೆಲ್‍ಗೆ ಸಮನಾಗಿರುತ್ತವೆ.  ಪ್ರತಿ ಭವನದ ದಿನನಿತ್ಯ ವ್ಯವಹಾರ ನೋಡಿಕೊಳ್ಳಲು ಒಬ್ಬ ವ್ಯವಸ್ಥಾಪಕರು ಇರುತ್ತಾರೆ.  ಊಟ, ವಸತಿ ಸೌಲಭ್ಯ ನೋಡಿಕೊಳ್ಳಲು, ಬೆಳಗಿನ 7 ರಿಂದ ಮಧ್ಯಾಹ್ನ 3 ರವರೆಗೆ, ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ಎರಡು ಪಾಳಿಯಲ್ಲಿ ಸ್ಟೀವಾರ್ಡಗಳು ಕಾರ್ಯನಿರ್ವಹಿಸುತ್ತಾರೆ ಮತ್ತು ಮೂರು ಪಾಳಿಯಲ್ಲಿ ದಿನದ 24 ಗಂಟೆಗಳ ಕಾಲವೂ ಸ್ವಾಗತಕಾರರು ಹಾಗೂ ಕೊಠಡಿ ಸಹಾಯಕರು  ಮತ್ತು ರಕ್ಷಣಾ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾರೆ.

THERE ARE THREE GUEST HOUSES WORKING UNDER GOVERNMENT OF KARNATAKA, KARNATAKA BHAVAN, NEW DELHI NAMELY KARNATAKA BHAVANA -1 (CAUVERY), KARNATAKA BHAVANA-2 (SHARAVATHI) AND KARNATAKA BHAVAN-3 (BHEEMA) .

KARNATAKA BHAVANA-1 (CAUVERY)

 

Address:, No.10 Kautilya Marg,                       Chanakyapuri, New Delhi-110021.

 

This is situated in Central Part of  New Delhi, near Hotel  Ashok and Samrat. This Bhavan can be accessed in a radius of around 9 kms from New Delhi Railway Station, 7 kms from H. Nizamuddin, 18 kms from old Delhi Railway Station respectively and also very close to Airport i.e Indira Gandhi International Airport, T-1 is around 10 kms and T-3 is around 17 kms.

  • 'Cauvery' (Karnataka Bhavan-I Old Building), has 7 VIP Rooms.  In addition, there are two suites each meant for the exclusive use of Hon'ble Governor and the Hon'ble Chief Justice.
  • Karnataka Bhavan-I (Annexe) has 35 rooms.  10 are VIP Rooms and 24 are Guest Rooms.  In addition there is 01 VVIP suite which is meant for the exclusive use of the Hon'ble Chief Minister.

 KARNATAKA BHAVANA-2 (SHARAVATHI)


Addres: No.6, Sardar patel Marg,    Chanakyapuri, New Delhi-110021.

This also situated in Central Part of  New Delhi, and adjacent to prestigious Diplamatic enclave area. This Bhavan can be accessed in a radius of around 8 kms from New Delhi Railway Station, 9 kms from H. Nizamuddin, 18 kms from old Delhi Railway Station respectively and also very close to Airport i.e Indira Gandhi International Airport, T-1 is around 11 kms and T-3 is around 17 kms.

 

  • 'Sharavathi' (Karnataka Bhavan-II) has 36 rooms.  Double bed accommodation is provided in 35 rooms.  Out of which one room is being used by the  office of Karnataka information Center.


Karnataka Bhavan-3 (Bheema)


 Address: No.A-5, Andrews Gunj, Hudco Plae, Ansal Plaza, Khel gao road, New Delhi-110049.

This also situated in Hudco Place, Central Part of  New Delhi,. This Bhavan can be accessed in a radius of around 12 kms from New Delhi Railway Station, 8 kms from H. Nizamuddin, 20 kms from old Delhi Railway Station respectively and also very close to Airport i.e Indira Gandhi International Airport, T-1 is around 13 kms and T-3 is around 19 kms.

 

'Bheema' (Karnataka Bhavan-3) has 34 rooms.  Out of which, 05 are VIP Rooms, 25 rooms have double bed accommodation.  Besides this, two rooms are meant for the use of office of Karnataka Udyoga Mitra, two rooms for the use of KPCL, and one room is used for stores, apart from office accommodation given to Krishna Cell and Cauvery Cell in the ground floor, one quarters modified and allotted to Krishna Cell and Cauvery Cell for keeping records.

 

All the Bhavans have centrally air-conditioning systems excluding Karnataka Bhavan III "Bheema" wherein Split Air Conditioners have been installed.  Each Bhavan has a Manager to look after the day-to-day activities such as boarding & lodging facilities.  Assistant Managers work in two shifts from 7 AM to 3 PM & 3 PM to 10 PM.  The Receptionists, Room Boys and Security staff work round-the –clock in three shifts.

Last modified at 23/01/2018 15:56 by System Account

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ಭವನ, ನವದೆಹಲಿ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top