ಕರ್ನಾಟಕ ಭವನ, ನವದೆಹಲಿ ನವದೆಹಲಿಯಲ್ಲಿ ನೆಲೆಗೊಂಡಿರುವ ಕೇಂದ್ರ ಸರ್ಕಾರದ ವಿವಿಧ ಮಂತ್ರಾಲಯಗಳು/ ಇಲಾಖೆಗಳು/
ರಾಯಭಾರಿ ಕಛೇರಿಗಳು, ಇತರೆ ಕಾರ್ಯಾಲಯಗಳು ಇವುಗಳೊಡನೆ ರಾಜ್ಯ ಸರ್ಕಾರದ ವಿವಿಧ
ಇಲಾಖೆಗಳು ಮತ್ತು ಸಂಸ್ಥೆಗಳು ಹೆಚ್ಚಿನ ಸಮನ್ವಯ ಸಾಧಿಸಲು ನಿವಾಸಿ ಆಯುಕ್ತರ ಕಛೇರಿ
ಮತ್ತು ಕರ್ನಾಟಕ ಭವನವನ್ನು ನವದೆಹಲಿಯಲ್ಲಿ ಸ್ಥಾಪಿಸಲಾಗಿದೆ. ಇಲ್ಲಿನ ನಿವಾಸಿ
ಆಯುಕ್ತರು ಭಾರತೀಯ ಆಡಳಿತ ಸೇವೆಗೆ ಸೇರಿದ ಹಿರಿಯ ಅಧಿಕಾರಿಯಾಗಿರುತ್ತಾರೆ. ನಿವಾಸಿ
ಆಯುಕ್ತರವರಿಗೆ ಸಹಾಯಕರಾಗಿ, ಅಪರ ನಿವಾಸಿ ಆಯುಕ್ತರು, ಉಪ ನಿವಾಸಿ ಆಯುಕ್ತರು, ಉಪ
ನಿವಾಸಿ ಆಯುಕ್ತರು (ಸಾ.ಸಂ.), ಸಮನ್ವಯ ಅಧಿಕಾರಿ (ಸಂಸದರ ಕೋಶ), ಅಧೀನ ಕಾರ್ಯದರ್ಶಿಗಳು
(ಕಾನೂನು ಕೋಶ) ಸಹಾಯಕ ನಿವಾಸಿ ಆಯುಕ್ತರು, ಲೆಕ್ಕಾಧಿಕಾರಿಗಳು ಕೆಲಸ
ನಿರ್ವಹಿಸುತ್ತಿದ್ದಾರೆ. ಇವರುಗಳು ನಿವಾಸಿ ಆಯುಕ್ತರಿಗೆ ಆತಿಥ್ಯ, ಶಿಷ್ಠಾಚಾರ,
ಆಡಳಿತ, ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯದ ಸಂಸದರೊಡನೆ ಸಮನ್ವಯ ಕಾರ್ಯಗಳಲ್ಲಿ ಕರ್ತವ್ಯ ನಿರ್ವಹಿಸಲು ಸಹಾಯಕರಾಗಿರುತ್ತಾರೆ.
| Karnataka
Bhavan, New Delhi
The Office of the Resident Commissioner, Karnataka was
established in New Delhi to enable greater co-ordination between different
departments and organizations of the State Government and various Central
Ministries/Departments/Embassies and other officers/Institutions based in
Delhi. The Resident Commissioner is a Senior IAS officer. The Resident
Commissioner is assisted by a Additional Resident Commissioner, Deputy Resident
Commissioner, Deputy Resident Commissioner(PR), Liaison Officer (MP’s Cell), Under
Secretary (Legal Cell) Assistant Resident Commissioner, Accounts Officer. They assist the Resident Commissioner in matters
related to Hospitality, Protocol, Administration, and Liaison with Members of
Parliament and with Government of India.
|