ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ದಿನಾಂಕ: 03/04/2010ರಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ. ಗಡಿ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡುವುದು ರಾಜ್ಯದ ಗಡಿ ಭಾಗಗಳ ಜನರ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ಥಿತಿಯನ್ನು ಸುಧಾರಿಸುವುದು ರಾಜ್ಯದ ಹೊರಭಾಗದ ಗಡಿಯಲ್ಲಿ ಕನ್ನಡ ಶಾಲೆಗಳನ್ನು ತೆರೆಯಲು ಸಹಾಯ ಒದಗಿಸುವುದು. ಕನ್ನಡಿಗರಿಗೆ ಕನ್ನಡ ವೃತ್ತ ಪತ್ರಿಕೆಗಳು-ಮಾಸಪತ್ರಿಕೆಗಳು-ವಾರಪತ್ರಿಕೆಗಳು ಗಡಿ ಭಾಗಗಳಲ್ಲಿ ದೊರಕುವಂತೆ ಮಾಡುವುದು ಮತ್ತು ಭಾಷಾ ಚಟುವಟಿಕೆಗಳನ್ನು ನಡೆಸಲು ಅನುದಾನ ನೀಡುವುದು. ಹೊರ ರಾಜ್ಯಗಳ ಕನ್ನಡಿಗರಿಗೆ ಈ ಕಲೆಗಳನ್ನು ಪ್ರದರ್ಶಿಸಲು ಸಾಂಸ್ಕೃತಿಕ ಭವನಗಳನ್ನು ಕಟ್ಟುವುದು, ಗಡಿ ಪ್ರದೇಶದ ಜನರ ಪರಿಸ್ಥಿತಿಯನ್ನು ಸುಧಾರಿಸಲು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು. ಗಡಿ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನತೆಯ ಜೀವನ ಭದ್ರತೆಯ ದೃಷ್ಠಿಯಿಂದ ನೀಡಬಹುದಾದ ಸೌಲಭ್ಯಗಳ ಬಗ್ಗೆ ಅಧ್ಯಯನ, ಗಡಿ ಪ್ರದೇಶಗಳಲ್ಲಿ ಕರಕುಶಲ ಕೈಗಾರಿಕೆ, ಗುಡಿ ಕೈಗಾರಿಕೆ ಹಾಗೂ ಇತರೆ ಉದ್ಯಮಗಳಿಗೆ ಪ್ರೋತ್ಸಾಹದಾಯಕ ಕ್ರಮ ಕೈಗೊಳ್ಳುವುದು. ಇವುಗಳು ಪ್ರಾಧಿಕಾರದ ಪ್ರಕಾರ್ಯಗಳಾಗಿರುತ್ತವೆ.