ಗುರಿ
ಮೂಲ ಉದ್ದೇಶ
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ ಸಂಸ್ಥೆಯು ಕರ್ನಾಟಕ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಂಸ್ಥ್ಥೆಯಾಗಿರುತ್ತದೆ,
ರಚನೆಯ ಉದೇಶ
ಪರಿಶಿಷ್ಟ ಪಂಗಡಗದ ಜನರ ಆರ್ಥಿಕಾಭಿವೃದ್ಧಿಗಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಮತ್ತು ಸಹಾಯ ಧನದ ನೆರವು ಒದಗಿಸುವುದು , ಇವರಿಗೆ ಸಾಂಪ್ರದಾಯಿಕ ವೃತ್ತಿಪರ ಕೌಶಲ್ಯತೆ ಹೆಚ್ಚಿಸಿ ಕೊಳ್ಳಲು ಅಗತ್ಯ ತರಬೇತಿ ಮತ್ತು ಸಾಲ ಸಹಾಯದನದ ನೆರವು, ಸಣ್ಣ ಮತ್ತು ಅತಿಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವುದು.
ಧ್ಯೇಯೋದ್ದೇಶಗಳು
ಪರಿಶಿಷ್ಟ ಪಂಗಡದ ಜನರ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಮತ್ತು ಸಹಾಯ ಧನದ ನೆರವು ಒದಗಿಸುವುದು ವೃತ್ತಿಪರ ಕೌಶಲ್ಯತೆ ಹೆಚ್ಚಿಸುವುದು.
ಗುರಿ
ಪರಿಶಿಷ್ಟ ಪಂಗಡದ ಜನರ ಆರ್ಥಿಕಾಭಿವೃದ್ಧಿ ಹೆಚ್ಚಿಸುವುದು.
ಕಾರ್ಯನೀತಿ
ಪರಿಶಿಷ್ಟ ಪಂಗಡದ ಜನರ ಆರ್ಥಿಕಾಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರವು ಒದಗಿಸಿದ ಅನುದಾನದಲ್ಲಿ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಗೊಳಿಸುವುದು.
ಕಾರ್ಯನಿರ್ವಹಣೆ
ಪರಿಶಿಷ್ಟ ಪಂಗಡದ ಜನರಿಗೆ ಸಾಲ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಿ , ಅರ್ಜಿದಾರರನ್ನು ನಿಯಮಾನುಸಾರ ರಾಜ್ಯ/ಜಿಲ್ಲಾ/ತಾಲ್ಲೂಕು ಆಯ್ಕೆ ಸಮಿತಿಯ ಮೂಲಕ ಆಯ್ಕೆಮಾಡಿ , ಅವರುಗಳು ಕೈಗೊಳ್ಳುವ ಉದ್ದೇಶ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸುವುದು. ಸಣ್ಣ ಮತ್ತು ಅತೀ ಸಣ್ಣ ಖುಷ್ಕಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಪ್ರಗತಿಪರ ರೈತರನ್ನಾಗಿಸಲು ಗಂಗಾ ಕಲ್ಯಾಣ ವೈಯುಕ್ತಿಕ ನೀರಾವರಿ ಕೊಳವೆ/ತೆರೆದ ಭಾವಿ , ಏತ ನೀರಾವರಿ ಯೋಜನೆಯನ್ನು ಅನುಷ್ಟಾನಗೊಳಿಸುವುದರ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ತರುವುದು. ಆರ್ಥಿಕ ನೆರವು ಪಡೆದು ಕೊಂಡ ಫಲಾನುಭವಿಗಳು ಚಟುವಟಿಕೆಗಳ ಘಟಕ ಸ್ಥಾಪನೆ ಮಾಡಿ , ಆರ್ಥಿಕ ಚಟುವಟಿಕೆಗಳು ಕೈಗೊಳ್ಳುತ್ತಿರುವದರ ಬಗ್ಗೆ ಮತ್ತು ಆರ್ಥಿಕವಾಗಿ ಪ್ರಗತಿಯಾಗಿರುವ ಬಗ್ಗೆ ದೃಢೀಕರಿಸಿಕೊಳ್ಳುವುದು