ಬುನಾದಿ
ಹೆಚ್ಚಿನ ಪರಿಶಿಷ್ಟ ಪಂಗಡದ ಕುಟುಂಬಗಳು ಉತ್ಪಾದಕತೆಯಾಗುವ ಆಸ್ತಿಯನ್ನು ಮತ್ತು ಆಧಾಯ ಗಳಿಸುವ ಮಾರ್ಗದಿಂದ ವಂಚಿತವಾಗಿದೆ. ಕರ್ನಾಟಕ ಸರ್ಕಾರವು ಪರಿಶಿಷ್ಟ ಪಂಗಡಗಳ ವಿಶೇಷ ಆದ್ಯತೆ ನೀಡುವ ದೃಷ್ಟಿಯಿಂದ , ಅವರ ಅಭ್ಯುದಯಕ್ಕಾಗಿ ಪ್ರತ್ಯೇಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವನ್ನು ಸರ್ಕಾರಿ ಆದೇಶ ಸಕಇ 65 ಎಸಡಿಸಿ 04 ದಿನಾಂಕ 27-5-2006 , 2006-07 ನೇ ಸಾಲಿನಿಂದ ತಕ್ಷಣವೇ ಜಾರಿಗೆ ಬರುವಂತೆ ಸೃಜಿಸಿ, ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮವೆಂದು ಕರ್ನಾಟಕ ಸರ್ಕಾರವು ಆದೇಶವನ್ನು ಹೊರಡಿಸಿದೆ. ಈ ನಿಗಮವನ್ನು 1956ರ ಭಾರತೀಯ ಕಂಪನಿಗಳ ನಿಯಮದ ಪ್ರಕಾರ ನೊಂದಾಯಿಸಲಾಗಿದೆ. ಕರ್ನಾಟಕ ಸರ್ಕಾರಿ ಆದೇಶ ಸPಇ 36 ಎಸ್ಡಿಸಿ 2013 ದಿನಾಂಕ 8/3/2013 ಕರ್ನಾಟಕ ಪರಿಶಿಷ್ಟ ಪಂಗಡಗಳ ನಿಗಮ ವನ್ನು ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮ ವೆಂದು ಮರು ನಾಮಕರಣ ಮಾಡಲಾಗಿದೆ.
ಪರಿಶಿಷ್ಟ ಪಂಗಡದವರ ಅಭಿವೃದ್ದಿಯನ್ನು ತ್ವರಿತಗೊಳಿಸುವ ಮೂಲಕ ಜನಾಂಗವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನಿಗಮವು ಸಂದರ್ಭಕ್ಕೆ ಅನುಗುಣವಾಗಿ ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸುತ್ತಿದೆ. ಈಗ ನಿಗಮದ ಮೂಲಕ ಪರಿಶಿಷ್ಟ ಪಂಗಡದ ಕುಟುಂಬಗಳ ಆರ್ಥಿಕ ಅಭ್ಯುಧಯಕ್ಕಾಗಿ ಸ್ವಯಂ ಉದ್ಯೋಗ ಯೋಜನೆ , ಭೂ ಖರೀಧಿ ಯೋಜನೆ, ಗಂಗಾ ಕಲ್ಯಾಣ ಯೋಜನೆ ಮತ್ತು ಮೈಕ್ರೋ ಕ್ರೆಡಿಟ್ ನಂತಹ ಹಲವಾರು ಯೋಜನೆಗಳನ್ನು ವ್ಯವಸ್ಧಿತವಾಗಿ ಅನುಷ್ಟಾನಗೊಳಿಸಲಾಗುತ್ತಿದೆ. .