ಉದ್ಯಮ ಶೀಲತಾ ಯೋಜನೆ​​

ನಿರುದ್ಯೋಗಿ ಪರಿಶಿಷ್ಟ ಪಂಗಡದವರು ನಡೆಸಲು ಇಚ್ಚಿಸುವ ವಿವಿಧ  ಉದ್ಯಮಶೀಲತಾ ಚಟುವಟಿಕೆಗಳಾದ ಸಣ್ಣ ಕೈಗಾರಿಕೆ, ಟಾಟಾ ಇಂಡಿಕಾ, ಆಟೋರಿಕ್ಷಾ, ಟ್ಯ್ರಾಕ್ಟರ್, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಚಮ‍್ಗಾರಿಕೆ, ವಕೀಲ ಕಛೇರಿ, ಬ್ಯೂಟಿ ಪಾರ್ಲರ್, ರೆಡಿಮೇಡ್ ಗಾರ್ಮೆಂಟ್ಸ್, ಡಿ.ಟಿ.ಪಿ. ಸೆಂಟರ್ ಇತ್ಯಾದಿ ಉದ್ದೇಶಗಳಿಗೆ ರೂ.1.00 ಲಕ್ಷಕ್ಕೂ ಮೇಲ್ಪಟ್ಟ ಘಟಕಗಳಿಗೆ ಬ್ಯಾಂಕುಗಳಿಂದ ಸಾಲ ಮಂಜೂರು ಮಾಡಿದಲ್ಲಿ ನಿಗಮದಿಂದಲೇ ರೀತಿ ಸಹಾಯಧನ ಮಂಜೂರು ಮಾಡಲಾಗುವುದು.

​ಘಟಕ ವೆಚ್ಚ      
 ​​ಸಹಾಯಧನದ ಮಿತಿ

ರೂ.1.00 ಲಕ್ಷ ಮೇಲ್ಪಟ್ಟು ರೂ. 5​.00 ಲಕ್ಷದವರೆಗೆ       ​

ಘಟಕ ವೆಚ್ಚದ ಶೇ.70 ರಷ್ಟು  ಗರಿಷ್ಟ ರೂ.3.50 ಲಕ್ಷ

ರೂ.5.00 ಲಕ್ಷ ಮೇಲ್ಪಟ್ಟು ರೂ.10.00 ಲಕ್ಷದವರೆಗೆ

ಟಕ ವೆಚ್ಚದ ಶೇ.60 ರಷ್ಟು ಗರಿಷ್ಟ ರೂ. 5.00 ಲಕ್ಷ

ರೂ.10.00 ಲಕ್ಷ ಮೇಲ್ಪಟ್ಟು ರೂ.20.00 ಲಕ್ಷದವರೆಗೆ

ಟಕ ವೆಚ್ಚದ ಶೇ.50 ರಷ್ಟು ಗರಿಷ್ಟ ರೂ.5.0​0 ಲಕ್ಷ

   

ಸ್ವಯಂ ಉದ್ಯೋಗ ಯೋಜನೆ (ಪ್ರವಾಸಿ ಟ್ಯಾಕ್ಸಿ)

     ರಾಜ್ಯದಲ್ಲಿನ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಅವರುಗಳ ಆರ್ಥಿಕ ಸ್ಥಿತಿಯನ್ನು ಸುದಾರಣೆ ಮಾಡಿಕೊಳ್ಳುವಲ್ಲಿ ನೆರವಾಗಲು ಬ್ಯಾಂಕ್‍ಗಳ ಸಹಾಯೋಗದೊಂದಿಗೆ ನಿಗಮವು ಪ್ರಸಕ್ತ ಸಾಲಿನಲ್ಲಿ ಸ್ವಯಂ ಉದ್ಯೋಗ ಯೋಜನೆಯಡಿ ವಾಹನ ಚಾಲನಾ ಪರವಾನಗಿ ಹೊಂದಿರುವ ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿಗಳನ್ನು ಖರೀದಿಸಲು ರೂ.3.00 ಲಕ್ಷಗಳವರೆಗೆ ಅಥವಾ ವಾಹನದ ಶೇ.50 ರಷ್ಟು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನ ನೀಡಲಾಗುವುದು. ಉಳಿದ ಮೊತ್ತವನ್ನು ಬ್ಯಾಂಕ್‍ಗಳಿಂದ ಸಾಲದ ರೂಪದಲ್ಲಿ ಪಡೆಯಬಹುದು.

ವೃತ್ತಿ ಕೌಶಲ್ಯ ಸ್ವಯಂ ಉದ್ಯೋಗ ಯೋಜನೆ

ರಾಜ್ಯದಲ್ಲಿನ ವೃತ್ತಿ ಕೌಶಲ್ಯ ತರಬೇತಿ ಪಡೆದ ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕರಿಗೆ ಬ್ಯಾಂಕ್ ಸಹಯೋಗದೊಂದಿಗೆ ರೂ.5.00 ಲಕ್ಷಗಳವರೆಗಿನ ಘಟಕ ವೆಚ್ಚವನ್ನು ಹೊಂದಿರುವ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ರೂ.2.50 ಲಕ್ಷ ಅಥವಾ ಶೇ.50 ರಷ್ಟು ಯೋಜನಾ ವೆಚ್ಚ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನ ನೀಡಲಾಗುವುದು.

ನೇರಸಾಲ ಯೋಜನೆ

ಪ್ರಸಕ್ತ ಸಾಲಿನಲ್ಲಿ ನೇರ ಸಾಲ ಯೋಜನೆಯಡಿ ರಾಜ್ಯದ ಪರಿಶಿಷ್ಟ ಪಂಗಡದವರ ಆರ್ಥಿಕ ಅಭಿವೃದ್ಧಿಗಾಗಿ ರೂ.40,000/-ಗಳ ಘಟಕ ವೆಚ್ಚದಲ್ಲಿ ಹಸು/ಎಮ್ಮೆ ಮತ್ತು ಕುರಿ/ಮೇಕೆ ಸಾಕಾಣಿಕೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನೆರವು ನೀಡಲಾಗುತ್ತಿದೆ. ಇದರಲ್ಲಿ ಸಹಾಯಧನ ರೂ.25,000/- ಮತ್ತು ನೇರ ಸಾಲ ಶೇ.4ರ ಬಡ್ಡಿ ದರದಲ್ಲಿ ರೂ.15,000/-ಗಳು ಒಳಗೊಂಡಿರುತ್ತದೆ.

ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ  ಅರ್ಹತೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ