ಸ್ವಯಂ ಉದ್ಯೋಗ ಯೋಜನೆ- ಯೋಜನೆಯಡಿ
ಪರಿಶಿಷ್ಟ ವರ್ಗದ ವಿವಿಧ ಚಟುವಟಿಕೆಗಳಿಗೆ
ಘಟಕ ವೆಚ್ಚ ರೂ.1,00,000/- ಒಳಗಿನ
ಉದ್ದೇಶಗಳಿಗೆ ಬ್ಯಾಂಕ್ ಮುಖಾಂತರ ಸಾಲ
ಸೌಲಭ್ಯವನ್ನು ಒದಗಿಸಲಾಗುವುದು.
- ನಿಗಮದಿಂದ ಘಟಕ ವೆಚ್ಚದ ಶೇ.50
ಭಾಗ ಅಥವಾ ಗರಿಷ್ಟ ರೂ.
35,000/-ಗಳು ಸಹಾಯಧನ ಮಂಜೂರು ಮಾಡಲಾಗುವುದು.
ಉಳಿದ ಭಾಗ ಬ್ಯಾಂಕ್ ಸಾಲವಾಗಿರುತ್ತದೆ.
ಹೈನುಗಾರಿಕೆ ಯೋಜನೆ
- ಯೋಜನೆಯಡಿ ಹೈನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪರಿಶಿಷ್ಟ ಪಂಗಡದ ಫಲಾಪೇಕ್ಷಿಗಳಿಗೆ ಘಟಕ ವೆಚ್ಚ ರೂ.1.00 ಲಕ್ಷದ ಮಿತಿಯೊಳಗೆ 2 ಹಾಲು ಕರೆಯುವ ಮಿಶ್ರತಳಿ ಹಸು ಅಥವಾ ಸುಧಾರಿತ ಎಮ್ಮೆಗಳನ್ನು ಖರೀದಿಸಲು ಬ್ಯಾಂಕ್ಗಳ ಸಹಬಾಗಿತ್ವದೊಂದಿಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು.
- ನಿಗಮದಿಂದ ಘಟಕ ವೆಚ್ಚದ ಶೇ.50 ಭಾಗ ಅಥವಾ ಗರಿಷ್ಟ ರೂ. 50,000/-ಗಳು ಸಹಾಯಧನವನ್ನು ಮಂಜೂರು ಮಾಡಲಾಗುವುದು. ಉಳಿದ ಭಾಗ ಬ್ಯಾಂಕ್ ಸಾಲವಾಗಿರುತ್ತದೆ.

ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳನ್ನು ನೋಡಲು
ಇಲ್ಲಿ
ಕ್ಲಿಕ್
ಮಾಡಿ
|