ಸರ್ಕಾರದ ವಿವಿಧ ಇಲಾಖೆಗಳ ಭೌಗೋಳಿಕವಾಗಿ ನಕಲಿ/ಖೋಟಾ ನಮೂದುಗಳಿಲ್ಲದ ಪರಿಶುದ್ಧವಾದ ಫಲಾನುಭವಿಗಳ ವಿವರಗಳನ್ನು ಅವರ ಆಧಾರ್ ಸಂಖ್ಯೆಯೊಂದಿಗೆ ಸೇರ್ಪಡೆ ಮಾಡುವುದರಿಂದ ಸಂಪರ್ಕ ಹೊಂದಿದ ಡಾಟಾ ಬೇಸ್ ಹೊಂದಲು ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳಿಗೆ KRDH- (ಕರ್ನಾಟಕ ರೆಸಿಡೆಂಟ್ ಡೆಟಾ ಹಬ್ ) ಸಮಗ್ರ ವೇದಿಕೆಯನ್ನು ಅಭಿವೃದ್ಧಿಗೊಳಿಸಿದೆ. ಇಲಾಖೆಗಳ ದತ್ತಾಂಶದಿಂದ ನಕಲಿ ಫಲಾನುಭವಿಗಳನ್ನು ಹೊರತುಪಡಿಸಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ.
ಈ ವೇದಿಕೆಯ ಮುಖಾಂತರ ಇಲಾಖೆಗಳ ಯೋಜನೆಯಲ್ಲಿ ನಿಯಮಾನುಸಾರ ಯಾವುದೆ ಫಲಾನುಭವಿಯ ಅರ್ಹತ ಮೌಲ್ಯಮಾಪನ ಮಾಡಬಹುದಾಗಿದೆ. ಉದಾ: BPL ಕಾರ್ಡ್ ಹೊಂದಿರುವ ವ್ಯಕ್ತಿಯು ವಾಹನವನ್ನು ಹೊಂದುವಂತಿಲ್ಲ ಹಾಗೂ ಒಬ್ಬ ವಿದ್ಯಾರ್ಥಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ವಿದ್ಯಾರ್ಥಿ ವೇತನ ಪಡೆಯುವಂತಿಲ್ಲ.
ಆಧಾರ್ ನ ಹೆಸರು ಹಾಗೂ ಫಲಾನುಭವಿಯ ಹೆಸರನ್ನು ಜೋಡಿಸಲು ನವೀನ ರೀತಿಯ Fuzzy Score ಅನ್ನು ಬಳಸಲಾಗಿದೆ. ಇದರಿಂದ ಸಂಪೂರ್ಣ ಹೊಂದಾಣಿಕೆಯಾದ ಭಾಗಶಃ ಹೊಂದಾಣಿಕೆಯಾದ ಹಾಗು ಹೊಂದಾಣಿಕೆಯಾಗದ ಮೂರು ವಿಭಾಗಗಳನ್ನು ಮಾಡಲಾಗುತ್ತದೆ.