ಪರಿಚಯ

Last modified at 28/04/2016 11:32 by Ksfes

​​​​​ಪರಿಚಯ


ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ.

ಪೊಲೀಸ್ ಇಲಾಖೆಯ ಆಡಳಿತದಡಿಯಲ್ಲಿ ಎ ಫೈರ್ ಅಂಡ್ ಎಮರ್ಜೆನ್ಸಿ ಸರ್ವಿಸ್ ವಿಭಾಗವು ಕರ್ನಾಟಕದಲ್ಲಿ ಪ್ರಪಥಮ ಭಾರಿಗೆ 1942 ರಲ್ಲಿ  ಬೆಂಗಳೂರು ದಕ್ಷಿಣ ಮತ್ತು ಉತ್ತರ ವಿಭಾಗಗಳಲ್ಲಿ ಕಾರ್ಯ ಪ್ರಾರಂಭಿಸಿತು. ನಂತರ ಬಳ್ಳಾರಿ, ಹೊಸಪೇಟೆ, ಮಂಗಳೂರು, ಉಡುಪಿ ಮತ್ತು ರಾಯಚೂರುಗಳಲ್ಲಿ ಹೆಚ್ಚುವರಿಯಾಗಿ ಅಗ್ನಿ ಶಾಮಕ ಠಾಣೆಗಳನ್ನು ಸ್ಥಾಪಿಸಲಾಯಿತ್ತು.  ಕರ್ನಾಟಕ ರಾಜ್ಯ ಅಗ್ನಿ ಸೇವಾ ಕಾಯಿದೆ -1964 ಜಾರಿಗೆ ಬರುವವರಿಗೂ ಸಹ ಪೊಲೀಸ್ ಇಲಾಖೆಯ ಆಡಳಿತದಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿತ್ತು. ಕರ್ನಾಟಕ ಸ್ಟೇಟ್ ಫೈರ್ ಸರ್ವಿಸಸ್ ಆಕ್ಟ್ 1964 ಕಾಯಿದೆಯ ಪ್ರಕಾರ ದಿನಾಂಕ.05.11.1965 ರಂದು ಪ್ರತ್ಯೇಕವಾದ ಡೈರಕ್ಟರೇಟ್ ಆಫ್ ಫೈರ್ ಅಂಡ್ ಎಮರ್ಜೆನ್ಸಿ ಸರ್ವೀಸಸ್ ಅಸ್ಥಿತ್ವಕಕ್ಕೆ ಬಂದಿತು. ಅಲ್ಲಿಂದ ಇಲ್ಲಿಯವರೆವಿಗೂ ಈ ಇಲಾಖೆಯ ಡೈರಕ್ಟರ್ ಜನರಲ್ ಅಫ್ ಫೈರ್ ಅಂಡ್ ಎಮರ್ಜೆನ್ಸಿ ಸರ್ವೀಸಸ್ ಆಡಳಿತದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಡೈರಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಯ ಅಧಿಕಾರಿಯು ಇದರ ಮುಖಸ್ಥರಾಗಿರುತ್ತಾರೆ. ಸಿವಿಲ್ ಡಿಫೆನ್ಸ್ ಹಾಗೂ ಹೋಮ್ ಗಾಡ್ರ್ಸ್ ವಿಭಾಗಗಳು  ಸಹ ಇವರಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ. ​


​ತನ್ನ ದೈನಂದಿನ ಕರ್ತವ್ಯಗಳಲ್ಲಿ ದಿ ಡೈರಕ್ಟರ್ ಜನರಲ್ ಅಫ್ ಫೈರ್ ಅಂಡ್ ಎಮರ್ಜೆನ್ಸಿ  ಸರ್ವೀಸಸ್ ಈ ಇಲಾಖೆಯು ಈ ಕೆಳಗಿನ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ​ಆಡಳಿತ ಹಾಗೂ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡುತ್ತಿದೆ.

ಎ) ಇನ್ಸ್‍ಪೆಕ್ಟರ್ ಜನರಲ್ ಅಫ್ ಪೊಲೀಸ್ ಮತ್ತು ಅಡಿಷನಲ್ ಡೈರಕ್ಟರ್ ಜನರಲ್ -  ಪೊಲೀಸ್ ಇಲಾಖೆಯಿಂದ ನೇಮಕಗೊಂಡಿರುತ್ತಾರೆ. 

ಬಿ) ಡೆಫ್ಯೂಟಿ ಇನ್ಸ್‍ಪೆಕ್ಟರ್ ಜನರಲ್ ಅಫ್ ಫೈರ್ ಸರ್ವೀಸಸ್  - ಪೊಲೀಸ್ ಇಲಾಖೆಯಿಂದ ನೇಮಕಗೊಂಡಿರುತ್ತಾರೆ.
ಸಿ) ಡೈರಕ್ಟರ್ – ಇಲಾಖೆಯ ಅಧಿಕಾರಿ
ಡಿ) ಡೆಪ್ಯೂಟಿ ಡೈರಕ್ಟರ್ – (ತಾಂತ್ರಿಕ) – ಇಲಾಖೆಯ ಅಧಿಕಾರಿ
ಇ) ಡೆಪ್ಯೂಟಿ ಡೈರಕ್ಟರ್ – (ಆಡಳಿತ) – ಇಲಾಖೆಯ ಅಧಿಕಾರಿ
ಎಫ್) ಆಡಳಿತಾಧಿಕಾರಿ  – ಇಲಾಖೆಯ ಅಧಿಕಾರಿ
ಜಿ)  ಅಸಿಸ್ಟೆಂಟ್ ಕಂಟ್ರೋಲರ್ ಅಫ್ ಅಕೌಂಟ್ಸ್  - ರಾಜ್ಯ ಲೆಕ್ಕ ಪತ್ರ ಇಲಾಖೆಯಿಂದ ನೇಮಕಗೊಂಡಿರುತ್ತಾರೆ.