ದೃಷ್ಟಿ ಕಾರ್ಯಾಚರಣೆ

Last modified at 18/04/2016 08:13 by Ksfes

​​​​ದೃಷ್ಟಿ ಕಾರ್ಯಾಚರಣೆ

ಮುನ್ನೋಟ.

 • ಇಲಾಖೆಯು ಪರಿಣಾಮಕಾರಿಯಾಗಿ ಬೆಂಕಿ ಅನಾಹುತವನ್ನು ತಡೆಗಟ್ಟುವ ಉದ್ದೇಶ ಹೊಂದಿದ್ದು,  " ಪೈರ್ ಅಂಡ್ ಎಮರ್ಜೆನ್ಸಿ ಸರ್ವಿಸ್ ಆಕ್ಟ್" ನಲ್ಲಿ ಜೀವ ಮತ್ತು ಅಸ್ತಿಯನ್ನು ಬೆಂಕಿಯಿಂದ ರಕ್ಷಿಸಿ ಸುರಕ್ಷಿತವಾಗಿ ಸ್ಥಳಾಂತರಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ​
 • ಅಗ್ನಿ ತೊಂದರೆಗೆ ಅನುಗುಣವಾಗಿ ಕನಿಷ್ಟ 3 ನಿಮಿಷದೊಳಗೆ ಅನಾಹುತ ನಡೆದ ಸ್ಥಳಕ್ಕೆ ಧಾವಿಸಿ ಕಾರ್ಯೋನ್ಮುಖರಾಗುವುದು ;
 • ಅಗ್ನಿ ಶಾಮಕ ಠಾಣೆಗಳನ್ನು ಹೆಚ್ಚಿಸುವುದು, ಸರಿಯಾದ ಸ್ಥಳಗಳನ್ನು ಗುರ್ತಿಸಿ ವೈಜ್ಞಾನಿಕವಾಗಿ ವಿನ್ಯಾಸಗೊಳಿಸುವುದು, ಅವಶ್ಯಕತೆಗೆ  ಅನುಗುಣವಾಗಿ ಹೈಟೆಕ್ ವಾಹನಗಳು ಮತ್ತು ಉಪಕರಣಗಳನ್ನು ಒದಗಿಸುವುದು ;
 • ಎಲ್ಲಾ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಉತ್ತಮ ತರಭೇತಿ ನೀಡುವುದು ;
 • ಚುರುಕಾದ ಆಡಳಿತ ನಿರ್ವಹಣೆ ಹಾಗೂ ತುರ್ತು ವಾಹನಗಳಿಗೆ ಜಿಪಿಎಸ್ ಪದ್ದತಿ ಅಳವಡಿಕೆ ;
 • ಉತ್ತಮ ವೈರ್‍ಲೆಸ್ ಸೆಟ್ ಹಾಗೂ ಮೊಬೈಲ್ ಕಂಮೆಂಡ್ ಪದ್ದತಿ ಅಳವಡಿಕೆ ;
 • ಬಹುಪಯೋಗಿ ಬಳಕೆಯ ವಾಹನಗಳು ಹಾಗೂ ಉಪಕರಣಗಳು ;
 • ದುರಂತದ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಲು ಎಲ್ಲಾ ಅಗ್ನಿ ಶಾಮಕ ಠಾಣೆಗಳನ್ನು ಕಂಪ್ಯೂಟರ್ ನೆಟ್‍ವರ್ಕ್ ಮೂಲಕ ನಿರ್ವಹಣೆ ಮಾಡುವುದು ;
 • ದುರ್ಘಟನೆಯನ್ನು ಯಶಸ್ವಿಯಾಗಿ ಹತ್ತಿಕ್ಕಲು ಹಾಗೂ ನಿಭಾಯಿಸಲು ಗುಣಮಟ್ಟವನ್ನು ಉನ್ನತಿಕರಿಸುವುದು ;
 • ಸರ್ವೋತ್ತೊಮುಖವಾಗಿ ಸುಧಾರಣೆಗಳನ್ನು ತರುವುದು, ಶಾಂತಿ ಹಾಗೂ ಸಮರದ ಎರಡು ಸಂಧರ್ಭಗಳಲ್ಲಿಯೂ " We Serve to Save "  ಎಂಬ ಜೀವ ರಕ್ಷಣೆಯ  ಆಧೇಶಕರಾಗುವುದು.

 ಇಲಾಖೆ ದ್ಯೇಯಗಳು.

 •  ಪವಿತ್ರವಾದ ವಿಧಾನದಲ್ಲಿ ಅತ್ಮ ದೇಹ ಮತ್ತು ಮನಸ್ಸುಗಳನ್ನು ಪರಿಶುದ್ದವಾಗಿರಿಸಿಕೊಳ್ಳಲು ಪ್ರಯತ್ನಿಸುವಂತೆ, ಸಮಾಜದ ಜನರ ಜೀವ ಹಾಗೂ ಅಸ್ಥಿ ರಕ್ಷಣೆಯನ್ನು ಮಾಡುವ ಅಧಿಕಾರವನ್ನು ಅಗ್ನಿ ಶಾಮಕದಳವು ವಿಧಿವತ್ತಾಗಿ ಪಡೆದಿದೆ.