-->

ಕರ್ನಾಟಕ ರಾಜ್ಯ ರೇಷ್ಮೆ ಸಂಶೋದನೆ ಮತ್ತು ಅಭಿವೃದ್ಧಿ ಸಂಸ್ಥೆಯ ವೆಬ್‌ಸೈಟ್ ಗೆ ಸ್ವಾಗತ


ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು 1981 ರಲ್ಲಿ ವಿಶ್ವಬ್ಯಾಂಕ್ ನೆರವಿನಿಂದ ಕರ್ನಾಟಕ ರೇಷ್ಮೆ ಕೃಷಿ ಯೋಜನೆಯಲ್ಲಿ ಸ್ಥಾಪಿಸಲಾಯಿತು, ಸಂಸ್ಥೆಯ ಮುಖ್ಯ ಉದ್ದೇಶ, ಸ್ಥಾನಿಕ ಹವಾಮಾನಗಳಿಗೆ ಹೊಂದುವ ಹಿಪ್ಪುನೇರಳೆ ಹಾಗೂ ರೇಷ್ಮೆ ಹುಳು ತಳಿಗಳ ಅಭಿವೃದ್ಧಿ, ಉತ್ಪಾದನೆ ಹಾಗು ಉತ್ಪಾದಕತೆಯಲ್ಲಿ ಗುಣಮಟ್ಟ ಮತ್ತು ಮಿತವ್ಯಯ ಸಾಧಿಸಲು ಸಂಶೋಧನೆ ಮತ್ತು ನೂತನ ತಾಂತ್ರಿಕತೆಗಳ ಅಭಿವೃದ್ಧಿ ಚಟುವಟಿಕೆಗಳಾಗಿದೆ. ರಾಜ್ಯದ ರೇಷ್ಮೆ ಕೃಷಿಗೆ ಸಂಬಂದಿಸಿದ ಕ್ಷೇತ್ರಾಧಾರಿತ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ನೀಡುವುದರ ಜೊತೆಗೆ ಉದ್ಯಮದ ಅಭಿವೃದ್ಧಿಗೆ ಸಂಶೋಧನಾತ್ಮಕ ಪರಿಹಾರವನ್ನು ಒದಗಿಸುತ್ತಿದೆ. ಇದಕ್ಕೆ ಅನುಗುಣವಾಗಿ ಸಂಸ್ಥೆಯ ಕಾರ್ಯಚಟುವಟಿಕೆ, ಉದ್ದೇಶ ಮತ್ತು ದ್ಯೇಯಗಳನ್ನು ಕೆಳಗೆ ನೀಡಲಾಗಿದೆ

ಸಂಸ್ಥೆಯ ಕಾರ್ಯಚಟುವಟಿಕೆಗಳು

1. ಉತ್ಪಾದನೆ, ಉತ್ಪಾದಕತೆ ಹಾಗೂ ಗುಣಮಟ್ಟವನ್ನು ಹೆಚ್ಚಿಸಲು ಅಧಿಕ ಇಳುವರಿ ನೀಡುವ ಸುಧಾರಿತ ಹಿಪ್ಪುನೇರಳೆ ಹಾಗೂ ರೇಷ್ಮೆ ಹುಳು ತಳಿಗಳ ಅಭಿವೃದ್ಧಿ.
2. ನೀರಾವರಿ ಮತ್ತು ಮಳೆಯಾಶ್ರಿತ ರೇಷ್ಮೆ ಕೃಷಿ ಬೇಸಾಯ ಪದ್ಧತಿಯ ಅಭಿವೃದ್ಧಿ.
3. ರೇಷ್ಮೆ ಹುಳು ಸಾಕಣೆ, ಬೀಜೋತ್ಪಾದನೆ, ರೇಷ್ಮೆ ಹುಳು ಅಂಗ ಶಾಸ್ತ್ರದ ಬಗ್ಗೆ ಸಂಶೋಧನೆ.
4. ರೇಷ್ಮೆ ಕೃಷಿಯಲ್ಲಿ ಹಿಪ್ಪುನೇರಳೆ ಹಾಗೂ ಹುಳು ಸಾಕಣೆಯಲ್ಲಿ ರೋಗ ಮತ್ತು ಕೀಟ ನಿಯಂತ್ರಣದ ಬಗ್ಗೆ ಅಧ್ಯಯನ, ಸಂಶೋಧನೆ ಹಾಗೂ ನಿವಾರಣೆ.
5. ನೂಲು ಬಿಚ್ಚಾಣಿಕೆ ಇತ್ಯಾದಿ ವಿಷಯಗಳ ಬಗ್ಗೆ ಮತ್ತು ಸ್ಥಳೀಯ ಗೂಡುಗಳಿಂದ ಉತ್ತಮ ರೇಷ್ಮೆ ದಾರ ತೆಗೆಯುವ ಬಗ್ಗೆ ಸಂಶೋಧನೆ ಹಾಗೂ ಸಮಗ್ರ ತಾಂತ್ರಿಕತೆಗಳ ಅಭಿವೃದ್ಧಿ.
6. ರೇಷ್ಮೆ ವಸ್ತ್ರದ ಉತ್ತಮ ಗುಣಮಟ್ಟವನ್ನು ಕಾಪಾಡಲು ನೇಯ್ಗೆ, ಬಣ್ಣ ಮತ್ತು ವಿನ್ಯಾಸಗಳ ಬಗ್ಗೆ ಅಧ್ಯಯನ, ಅಗತ್ಯ ತಾಂತ್ರಿಕತೆ ಶಿಫಾರಸ್ಸು.
7. ತಾಂತ್ರಿಕ ಹಾಗೂ ಮಾನವ ಸಂಪನ್ಮೂಲವನ್ನು ವೃದ್ಧಿಗೊಳಿಸಲು ವಿವಿಧ ತರಬೇತಿ ಕಾರ್ಯಕ್ರಮಗಳ ನಿರ್ವಹಣೆ, ತಾಂತ್ರಿಕತೆಗಳ ಕ್ಷೇತ್ರ ಅನುಷ್ಠಾನದ ಬಗ್ಗೆ ರೇಷ್ಮೆ ಇಲಾಖೆಯ ಸಹಕಾರದೊಂದಿಗೆ ಕ್ಷೇತ್ರ ಪರೀಕ್ಷೆ.
8. ತಾಂತ್ರಿಕ ವರ್ಗಾವಣೆ ಹಾಗೂ ಆಧುನಿಕ ತಾಂತ್ರಿಕತೆಯ ಬಗ್ಗೆ ಅರಿವು ಮೂಡಿಸಲು ಫಲಾನುಭವಿಗಳನ್ನೊಳಗೊಂಡಂತೆ ವಿಚಾರ ಸಂಕಿರಣ, ಸಮೂಹ ಚರ್ಚೆ, ಕಾರ್ಯಾಗಾರ, ಸಮ್ಮೇಳನಗಳ ಆಯೋಜನೆ.
9. ತಾಂತ್ರಿಕತೆಗಳ ಬಳಕೆದಾರರಲ್ಲಿ ತಾಂತ್ರಿಕ ಜ್ಞಾನಾರ್ಜನೆಯೊಂದಿಗೆ ಮಾನವ ಕುಶಲತೆಯ ಅಭಿವೃದ್ಧಿ.

ನಿರ್ದೇಶಕರ ಮಾತು

ಉಸ್ತುವಾರಿ ನಿರ್ದೇಶಕರು, ರೇಷ್ಮೆ ಇಲಾಖೆ, ಇವರು ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಪ್ರಭಾರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ಸಂಶೋಧನಾ ಯೋಜನೆಗಳ ನಿರೂಪಣೆ/ಅನುಷ್ಟಾನಗೊಳಿಸುವ ಹಾಗೂ ಆಡಳಿತ ಮತ್ತು ಹಣಕಾಸು ವಿಷಯಗಳ ನಿರ್ವಹಣೆಯಲ್ಲಿ ಸಂಸ್ಥೆಯ ಮುಖ್ಯ ಅಧಿಕಾರಿಗಳಾಗಿರುತ್ತಾರೆ. ಕರ್ನಾಟಕ ರಾಜ್ಯ ರೇಷ್ಮೆ ಕೃಷಿಕರು ಕಾಲ ಕಾಲಕ್ಕೆ ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳಿಗೆ (ಮಣ್ಣು ಪರೀಕ್ಷೆಯಿಂದ ವಸ್ತ್ರದ ವಿನ್ಯಾಸದವರೆಗೆ) ವಿಶೇಷವಾಗಿ ಕ್ಷೇತ್ರಾಧಾರಿತ ತಾಂತ್ರಿಕ ಸಮಸ್ಯೆಗಳಿಗೆ ಹಾಗೂ ಉದ್ಯಮದಾರರಿಗೆ ಸಂಶೋಧನಾಧಾರಿತ ಸಲಹೆ/ಪರಿಹಾರಗಳನ್ನು ಒದಗಿಸುತ್ತಾರೆ.