Last modified at 21/09/2019 15:25 by kswdc

​​​​​​​

ರಾಜ್ಯ ಸರ್ಕಾರದ ಯೋಜನೆಗಳು:-

  1. ಕುರಿ, ಮೇಕೆಗಳ ಆರೋಗ್ಯ ರಕ್ಷಣೆ:- ಕುರಿಗಳು ನೆಲಕ್ಕೆ ತಾಗಿದಂತೆ ಮೇಯುವುದರಿಂದ ಒಳ ಪರಾವಲಂಭಿ ಜೀವಿಗಳಿಗೆ ತುತ್ತಾಗುತ್ತವೆ. ಇದು ರೋಗಗಳಿಗೆ ಗುರಿ ಯಾಗುವಂತೆ ಮಾಡುವುದಲ್ಲದೆ ಮರಣ ಪ್ರಮಾಣದಿಂದ ರೈತರಿಗೆ​ ಆರ್ಥಿಕ ನಷ್ಟವುಂಟುಮಾಡುತ್ತದೆ. ಈ ದೃಷ್ಟಿಯಿಂದ ಕುರಿಗಳಿಗೆ ವರ್ಷದಲ್ಲಿ 3-4ಸಾರಿ ಜಂತು ನಿವಾರಕ ಔಷಧಿ ನೀಡಲು ಶಿಫಾರಸು ಮಾಡಲಾಗಿದೆ. ಇದರಿಂದ ಉತ್ಪಾದನೆ ಹೆಚ್ಚಾಗುವುದಲ್ಲದೆ. ಕುರಿಗಳಲ್ಲಿ ಮರಣ ಪ್ರಮಾಣ ಕಡಿಮೆಯಾಗುತ್ತದೆ.  ಈ ದೃಷ್ಟಿಯಿಂದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮವು ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶುವೈದ್ಯಕೀಯ ಸಂಸ್ಥೆಗಳ ಮೂಲಕ ಉಚಿತವಾಗಿ ಜಂತು ನಿವಾರಕ ಔಷಧಿಗಳನ್ನು ನೀಡುತ್ತಿದೆ.
  2. ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸ್ಥಾಪನೆ:- ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಕುರಿಗಾರರನ್ನು ಸಂಘಟಿಸಲು ತೊಡಗಿದ್ದು ಸಹಕಾರ ತತ್ವಗಳ ಆಧಾರದಲ್ಲಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುತ್ತಿದೆ, 15,000-25,000 ಕುರಿಗಳ ಸಂಖ್ಯೆಗೆ ಒಂದು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸಲು ಉದ್ದೇಶಿಸಿದೆ. ನಿಗಮವು ಪ್ರತಿ ಸಂಘಕ್ಕೆ ರೂ. 25,000ಗಳ ಷೇರು ಧನ ನೀಡುತ್ತಿದ್ದು ಇದರಿಂದ ಸಂಘಗಳು ಕುರಿ ಮತ್ತು ಕುರಿ ಉತ್ಪನ್ನಗಳ ಮಾರಾಟ ಮಾಡಬಹುದಾಗಿದೆ. ವೈಜ್ಞಾನಿಕ ಕುರಿ ಸಾಕಾಣಿಕೆ ತರಬೇತಿ ಶಿಬಿರಗಳು, ಯಾಂತ್ರೀಕೃತ ಉಣ್ಣೆ ಕಟಾವು ಸೌಲಭ್ಯಗಳನ್ನು ಒದಗಿಸಬಹುದಾಗಿದೆ. ಸಂಘಗಳು ಷೇರುಧನವನ್ನು 5 ವರ್ಷಗಳ ನಂತರ 5 ಕಂತುಗಳಲ್ಲಿ ಮರುಪಾವತಿ ಮಾಡಬೇಕಾಗಿದೆ. ಮೂರು ವರ್ಷಗಳು ಪೂರೈಸಿದ ಸಂಘಗಳಿಗೆ ತಲಾ ರೂ. 5.00 ಲಕ್ಷಗಳನ್ನು ಒಂದು ಸಲ ಪ್ರೋತ್ಸಾಹಧನವಾಗಿ ನೀಡುತ್ತಿದ್ದು ಸಂಘದ ಸದಸ್ಯರಿಗೆ ಕುರಿಮಿತ್ರ ಗೌರವಧನ, ಉಣ್ಣೆ ಕಟಾವು ಯಂತ್ರ ಖರೀದಿ, ಮಾರ್ಪಾಡುಮಾಡಿದ ವಾಹನ, ತೂಕದ ಯಂತ್ರಖರೀದಿ ಮುಂತಾದವುಗಳಿಗೆ ಬಳಸಿಕೊಳ್ಳಬಹುದಾಗಿದೆ. ಕುರಿಮಿತ್ರ ಪರಿಣಿತ ತರಬೇತುದಾರರಾಗಿದ್ದು ಸಂಗ್ರಹಣೆಯಿಂದ ಮಾರಾಟದವರಗೆ ಪರಿಣಿತರಾಗಿದ್ದು ಅರಿವು ಉಂಟು ಮಾಡುವ ಸೇವೆಗಳನ್ನು ನೀಡುವವರಾಗಿರುತ್ತಾರೆ.
  3. ಕುರಿ, ಮೇಕೆ ತಳಿ ಸುಧಾರಣೆ:- ಸ್ಥಳೀಯ ಕುರಿ ತಳಿಗಳಿಂದ ವಿದೇಶಿ ತಳಿಗಳಿಗಿಂತ ಕಡಿಮೆ ಗುಣಮಟ್ಟದ ಹಾಗೂ ಪ್ರಮಾಣದ ಉತ್ಪನ್ನಗಳು ಉತ್ಪಾದನೆಯಾಗುತ್ತಿದ್ದು ರೈತರಿಗೆ ಬರುವ ಆದಾಯವೂ ಕಡಿಮೆಯಾಗಿರುತ್ತದೆ. ಆದ್ದರಿಂದ ನಿಗಮದ ಕುರಿ ಸಂವರ್ಧನ ಕೇಂದ್ರಗಳಲ್ಲಿ ಸುಧಾರಿತ ತಳಿಯ ಟಗರು / ಹೋತಗಳನ್ನು ಉತ್ಪಾದಿಸಿ ರೈತರಿಗೆ ತಳಿ ಸುಧಾರಣೆಗೆ ಸಹಾಯ ಧನದಲ್ಲಿ ನೀಡಲಾಗುತ್ತಿದೆ. ಇದರಿಂದ ಕುರಿ ಮೇಕೆಗಳಲ್ಲಿ ಉತ್ಪಾದನೆ ಹೆಚ್ಚಾಗುತ್ತದೆ ಆಯ್ಕೆ ಸಂವರ್ಧನೆಗೆ ಒತ್ತು ನೀಡಲಾಗಿದೆ.
  4. ಯಾಂತ್ರಿಕ ಉಣ್ಣೆ ಕಟಾವು ಕಾರ್ಯಕ್ರಮ:- ಕಡಿಮೆ ಅವಧಿಯಲ್ಲಿ ಹೆಚ್ಚು ಕುರಿಗಳ ಉಣ್ಣೆ ಕಟಾವು ಮಾಡಲು ಸಾದ್ಯವಿರುವುದರಿಂದ ಯಾಂತ್ರೀಕೃತ ಉಣ್ಣೆ ಕಟಾವು ಮಾಡುವ ಕಾರ್ಯಕ್ರಮವನ್ನು ಪ್ರಚಾರಪಡಿಸುವಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ನಿಗಮವು ನಿರತವಾಗಿದೆ. ಯಾಂತ್ರಿಕವಾಗಿ ಕತ್ತರಿಸಿದ ಉಣ್ಣೆಯ ಉದ್ದವು ಹೆಚ್ಚಿರುವುದಲ್ಲದೆ ಉತ್ತಮ ಬೆಲೆಯೂ ಸಿಗುತ್ತದೆ. ನಿಗಮವು ಯಾಂತ್ರಿಕ ಉಣ್ಣೆ ಕಟಾವು ಸೇವೆ ನೀಡುತ್ತಿದೆ.
  5. ತರಬೇತಿ ಕಾರ್ಯಕ್ರಮಗಳು:- ಕುರಿ ಸಾಕಾಣಿಕೆಯು ರಾಜ್ಯದಲ್ಲಿ ಸಂಪ್ರದಾಯ ಕಸುಬಾಗಿದ್ದು ಕುರಿಗಾರರ ಮೂಡ ನಂಬಿಕೆಯುಳ್ಳವರಾಗಿದ್ದಾರೆ. ಇದು ರೈತರ ಕಡಿಮೆ ಆದಾಯಕ್ಕೆ ಕಾರಣವಾಗಿದೆ ಆದ್ದರಿಂದ ವೈಜ್ಞಾನಿಕ ಕುರಿ ಸಾಕಾಣಿಕೆ ಮತ್ತು ಮೇವು ಉತ್ಪಾದನೆ ಬಗ್ಗೆ ಉಚಿತ ತ​​ರಬೇತಿಗಳನ್ನು ಕೆಳಕಂಡ ಸಂಸ್ಥೆಗಳಲ್ಲಿ ನೀಡಲಾಗುತ್ತಿದೆ. (1) ಬಂಡೂರು ಕುರಿ ಸಂವರ್ಧನಾ ಮತ್ತು ತರಬೇತಿ ಕೇಂದ್ರ ಧನಗೂರು ಮಳವಳ್ಳಿ ತಾಲ್ಲೂಕು ಮಂಡ್ಯಜಿಲ್ಲೆ. (2) ಕುರಿ ಸಂವರ್ಧನೆ ಮತ್ತು ತರಬೇತಿ ಕೇಂದ್ರ ಖುಧಾಪುರ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.
  6. 2018-19 ರಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ಸಹಾಯಧನದ ಯೋಜನೆಗಳು
  1. ವಿಶೇಷ ಘಟಕ ಯೋಜನೆ:- ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಲ್ಲಿ ನೋಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಜಾತಿ ಮತ್ತು ಸ್ವಸಹಾಯ ಮಹಿಳಾ ಗುಂಪಿನ ಸದಸ್ಯರಿಗೆ ಕುರಿ / ಮೇಕೆ ಸಾಕಾಣಿಕೆಗೆ ಸಹಾಯಧನ ನೀಡಲಾಗುತ್ತದೆ.
    ವಿವರಗಳು ಕೆಳಕಂಡಂತಿವೆ.
    ಕುರಿ / ಮೇಕೆ ಘಟಕ                                  ರೂ. 67,440-00
    (10+1) ಕುರಿ/ಮೇಕೆ ಘಟಕ ವೆಚ್ಚ                        ರೂ.  6,744-00
    ಸಾಲದ ಅಂಶ (10%)                                   ರೂ.  7,440-00
    ಸಹಾಯಧನದ ಅಂಶ (90%)                           ರೂ. 60,000-00
    ಸಾಲವನ್ನು ಸ್ಥಳೀಯ ಗ್ರಾಮೀಣ/ಸಹಕಾರಿ/ ವಾಣಿಜ್ಯ ಬ್ಯಾಂಕುಗಳು ನಿಗದಿಪಡಿಸಿದ ಬಡ್ಡಿ ದರದಲ್ಲಿ ನೀಡುತ್ತವೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮವು ಸಹಾಯಧನ ನೀಡುತ್ತದೆ.

  2. ಗಿರಿಜನ ಉಪಯೋಜನೆ 2018-19:- ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಲ್ಲಿ ನೋಂದಣಿಯಾಗಿರುವ  ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಮತ್ತು ಸ್ವಸಹಾಯ ಗುಂಪಿನ, ಪರಿಶಿಷ್ಟ ಪಂಗಡದ ಮಹಿಳಾ ಸದಸ್ಯರು/ ಪುರುಷರಿಗೆ ಸಹಾಯಧನವನ್ನು ನೀಡಲಾಗುವುದು.
    ಕುರಿ / ಮೇಕೆ ಘಟಕ                                      ರೂ. 67,440-00
    (10+1) ಕುರಿ/ಮೇಕೆ ಘಟಕ ವೆಚ್ಚ                     ರೂ.  6,744-00
    ಸಾಲದ ಅಂಶ (10%)                                   ರೂ.  7,440-00
    ಸಹಾಯಧನದ ಅಂಶ (90%)                          ರೂ. 60,000-00                                              ​                                                                                                                                        

       ಸಾಲವನ್ನು ಸ್ಥಳೀಯ ಗ್ರಾಮೀಣ/ಸಹಕಾರಿ/ ವಾಣಿಜ್ಯ ಬ್ಯಾಂಕುಗಳು ನಿಗದಿಪಡಿಸಿದ ಬಡ್ಡಿ ದರದಲ್ಲಿ ನೀಡುತ್ತವೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮವು ಸಹಾಯಧನ ನೀಡುತ್ತದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ( ಆರ್.ಕೆ.ವಿ.ವೈ)

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಲ್ಲಿ ನೋಂದಾಯಿತವಾದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿಗೆ (100+5) ಕುರಿ/ಮೇಕೆ ಘಟಕಗಳನ್ನು  25% ಸಹಾಯ ಧನದಲ್ಲಿ ನೀಡಲಾಗುವುದು.

ಕುರಿ/ಮೇಕೆ ಘಟಕ                 ರೂ.  67,440-00

(10+1) ಮೇಕೆ/ಕುರಿ ಘಟಕ ವೆಚ್ಚ  ರೂ. 67,440-00

ಸಾಲದ ಅಂಶ (10%)               ರೂ. 7,440-00

ಸಹಾಯಧನದ ಅಂಶ(90%)         ರೂ. 60,000-00  

ಸಾಲವನ್ನು ಸ್ಥಳೀಯ ಗ್ರಾಮೀಣ / ಸಹಕಾರಿ / ವಾಣಿಜ್ಯ ಬ್ಯಾಂಕುಗಳು ನಿಗದಿತ ಬಡ್ಡಿ ಧರದಲ್ಲಿ ನೀಡುತ್ತಿವೆ. ಸಹಾಯ ಧನವನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ನೀಡುತ್ತದೆ.

ಫಲಾನುಭವಿ ಆಯ್ಕೆ ವಿಧಾನ

ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರನ್ನು ಮತ್ತು ಸಂಘಗಳಿದ್ದಲ್ಲಿ ಫಲಾನುಭವಿಗಳನ್ನು ಸರ್ಕಾರ ರಚಿಸಿದ ಜಿಲ್ಲಾ ಆಯ್ಕೆ ಸಮಿತಿ ಆಯ್ಕೆ ಮಾಡುತ್ತದೆ.

ಆಯ್ಕೆ ಸಮಿತಿಯ ಸದಸ್ಯರು


                                                                            1ಸಂಬಂಧಿಸಿದ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಅಧ್ಯಕ್ಷರು
                                                                            2ಸಂಬಂಧಿಸಿದ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯ ಸೇವೆಗಳ ಉಪನಿರ್ದೇಶಕರುಸದಸ್ಯರು
                                                                            3ಸಂಬಂಧಿಸಿದ ಜಿಲ್ಲೆಯ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳುಸದಸ್ಯರು
                                                                            4ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕರು ಅಥವಾ ಪ್ರತಿನಿಧಿಸದಸ್ಯರು
                                                                            5ಸಂಬಂಧಿಸಿದ​ ಜಿಲ್ಲೆಯ ಉಪ ನಿಬಂಧಕರುಸದಸ್ಯರು
                                                                            6ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲಾ ಅನುಷ್ಠಾನಾಧಿಕಾರಿಗಳು                     ಸದಸ್ಯ ಕಾರ್ಯದರ್ಶಿ

 


1.   ಆಕಸ್ಮಿಕವಾಗಿ ಮರಣ ಹೊಂದಿದ ಕುರಿ/ಮೇಕೆಗಳಿಗೆ ಪರಿಹಾರ ಧನ

            ಆಕಸ್ಮಿಕವಾಗಿ ಮರಣ ಹೊಂದಿದ 6 ತಿಂಗಳ ಒಳಗಿನ ವಯಸ್ಸಿನ ಕುರಿ/ಮೇಕೆಗಳಿಗೆ ತಲಾ ರೂ.2500 ಮತ್ತು 6 ತಿಂಗಳ ಮೇಲ್ಪಟ್ಟ ವಯಸ್ಸಿನ ಕುರಿ / ಮೇಕೆ ಗಳಿಗೆ ತಲಾ ರೂ. 5000ಗಳ ಪರಿಹಾರ ಧನವನ್ನು ನೀಡಲಾಗುವುದು. 2018-19ರ ಸಾಲಿನಲ್ಲಿ ಸಾಮಾನ್ಯ ಫಲಾನಭವಿಗಳಿಗೆ ರೂ. 1833.965 ಲಕ್ಷ ಪರಿಶಿಷ್ಠ ಜಾತಿ ಫಲಾನುಭವಿಗಳಿಗೆ ರೂ. 470.785 ಲಕ್ಷ ಮತ್ತು ಪರಿಶಿಷ್ಠ ಪಂಗಡದ ಫಲಾನುಭವಿಗಳಿಗೆ ರೂ.263.275 ಲಕ್ಷಗಳನ್ನು ಒದಗಿಸಲಾಗಿದೆ.


ಕರ್ನಾಟಕದಲ್ಲಿ ಕುರಿ ಮತ್ತು ಉಣ್ಣೆ ಉತ್ಪಾದನೆಗೆ ಕೈಗೊಂಡ ಪ್ರಾರಂಭಿಕ ಪ್ರಕ್ರಿಯೆ/ಉಪಕ್ರಮ ಮತ್ತು ಕ್ರಮಗಳು

ಪ್ರಕ್ರಿಯೆ/ಉಪಕ್ರಮ ಮತ್ತು ಕ್ರಮಗಳನ್ನು ತೆಗೆದುಕೊಂಡಿದೆ. ಅವುಗಳ ಪಕ್ಷಿ ನೋಟ ಕೆಳಕಂಡಂತಿದೆ.

  1. .
  2. ಮೂರು ವರ್ಷ ಪೂರೈಸಿದ ಸಂಘಗಳಿಗೆ ರೂ. 5 ಲಕ್ಷಗಳನ್ನು ಒಂದಾವರ್ತಿ ಸಹಾಯಧನವಾಗಿ ನೀಡಲಾಗುತ್ತಿದೆ. 
  3.  ಕಾರ್ಪೆಟ್, ಕಂಬಳಿ ಮುಂತಾದವುಗಳನ್ನು ತಯಾರಿಸಲು ಕುರಿ ಮತ್ತು ಉಣ್ಣೆ ಅಭಿವೃದ್ಧಿ ಯೋಜನೆ ರಾಣಿ ಬೆನ್ನೂರಿನಲ್ಲಿ ತರಬೇತಿಗಳನ್ನು ನೀಡಲಾಗುತ್ತಿದೆ.

 

ಉತ್ಕೃಷ್ಟ ಉಣ್ಣೆ ಉತ್ಪಾದನೆ:-

ಸ್ಥಳೀಯ ವರ್ಗಿಕರಿಸಿಲ್ಲದ ಕುರಿ ತಳಿಗಳನ್ನು ಉನ್ನತೀಕರಿಸಿ ಉತ್ತಮ ಗುಣಮಟ್ಟದ ಉಣ್ಣೆ ಉತ್ಪಾದನೆಗೆ ರಾಜ್ಯದಲ್ಲಿ ಪ್ರಾರಂಭದಲ್ಲಿ ಕಾರಿಡೇಲ್ ನಂತರ ರಾಂಬುಲೆ ತಳಿ ಕುರಿಗಳನ್ನು ರೈತರಿಗೆ ನೀಡಲಾಗಿದೆ. ಹೆಚ್ಚಿನ ರೈತರು ಕುರಿಗಳನ್ನು ಬಯಲಿನಲ್ಲಿ ಮೇಯಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ವಲಸೆ ಹೋಗಿ ಕುರಿ ಮೇಯಿಸುವುದು ಸಾಮಾನ್ಯವಾಗಿದೆ. ದಕ್ಷಿಣ ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಜಿಲ್ಲೆಗಳಲ್ಲಿ ಒಪ್ಪಿತವಾದ ರಾಂಬುಲೆ ತಳಿಯಲ್ಲಿ ಕೊಟ್ಟಿಗೆ ಪದ್ದತಿಯಲ್ಲಿ ಸಾಕುತ್ತಿದ್ದಾರೆ. ರಾಜ್ಯದಲ್ಲಿ ಸುಮಾರು 15,000 ಕ್ಕಿಂತಲ್ಲೂ ಹೆಚ್ಚಿನ ರಾಂಬುಲೆ ಮಿಶ್ರತಳಿ ಕುರಿಗಳಿವೆ. ಕೇಂದ್ರ ಸರ್ಕಾರದ ಉಣ್ಣೆ ಸುಧಾರಣೆ ಯೋಜನೆ ಜೊತೆಗೆ ರಾಜ್ಯಸರ್ಕಾರವು ಉಣ್ಣೆ ತಳಿ ಕುರಿಗಳನ್ನು ಸಹಾಯಧನದಲ್ಲಿ ನೀಡಿ ಪ್ರೋತ್ಸಾಹಿಸುತ್ತಿದೆ.

ಕರ್ನಾಟಕ ರಾಜ್ಯದಲ್ಲಿ 2011-12, 2012-13, 2013-14, 2014-15 ಮತ್ತು 2015-16 ರಲ್ಲಿ ಕೈಗೊಂಡ ಪ್ರಾರಂಭಿಕ ಪ್ರಕ್ರಿಯೆ ಮತ್ತು ಕ್ರಮಗಳು

ಕೇಂದ್ರ ವಲಯ (ಕೇಂದ್ರೀಯ ಉಣ್ಣೆ ಅಭಿವೃದ್ಧಿ ಮಂಡಳಿ, ರಾಜಸ್ಥಾನ)

ಕ್ರ. ಸಂಕಾರ್ಯಕ್ರಮ2011-122012-132013-142014-152015-16ಷರಾ
1ಪ್ರತಿ ತಂಡಕ್ಕೆ 40 ಕುರಿಗಾರರಂತೆ 4 ದಿನದ ತರಬೇತಿ ಕಾರ್ಯಕ್ರಮ    12 ತಂಡ5.88 ಲಕ್ಷ
2ಟಗರು ವಿತರಣೆ325 320180250 
3ಆರೋಗ್ಯ ರಕ್ಷಣೆ18 ಲಕ್ಷ18 ಲಕ್ಷ   2ನೇ ಮತ್ತು 3ನೇ ವರ್ಷದ ಅನುದಾನ

(2 ಯೋಜನಾ ಪ್ರದೇಶಗಳು)

1). 1 ಲಕ್ಷ ಡೆಕ್ಕನಿ ಕುರಿಗಳು- ಹಾನಗಲ್ & ಬಾದಾಮಿ

 

(3 ಯೋಜನಾ ಪ್ರದೇಶಗಳು)

2). 1.5 ಲಕ್ಷ ಕುರಿಗಳು- ಮೊಳಕಾಲ್ಮೂರು, ಮುದ್ದೇಬಿಹಾಳ & ಚಿಕ್ಕಬಳ್ಳಾಪುರ

   27 ಲಕ್ಷ27 ಲಕ್ಷ 1ನೇ ಮತ್ತು 2ನೇ ವರ್ಷದ ಅನುದಾನ
 

(6 ಯೋಜನಾ ಪ್ರದೇಶಗಳು)

3). ಶಿರಾ ತಾ, ಬೀದರ್ ದಕ್ಷಿಣ,& ಔರಾದ್, ಗೋಕಾಕ್, ಹೊಸಪೇಟೆ, ಲಿಂಗಸೂಗೂರು, ಚಿಂಚೋಳಿ

    54 ಲಕ್ಷ54 ಲಕ್ಷ
4ಕೇಂದ್ರೀಯ ಭೇಡ್ ಪಾಲಕ್ ಭೀಮಾ ಯೋಜನಾ5606 ಕುರಿಗಾರರು, 1839 ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲಾಗಿದೆ. 7 ಕುರಿಗಾರರ ಮರಣ ಪರಿಹಾರ 5606 ಕುರಿಗಾರರು, 1634 ವಿದ್ಯಾರ್ಥಿಗಳು4303 ಕುರಿಗಾರರು, 1969 ವಿದ್ಯಾರ್ಥಿ2848 ಕುರಿಗಾರರು, 48 ಕುರಿಗಾರರ ಮರಣ ಪರಿಹಾರ2927 ಕುರಿಗಾರರು,  46 ಕುರಿಗಾರರ ಮರಣ ಪರಿಹಾರ 
5

ಉಣ್ಣೆ ಸಂಸ್ಕರಣಾ ಕೇಂದ್ರ, ರಾಣೆಬೆನ್ನೂರು, ಹಾವೇರಿ.

ಕೋಲಾರ- ಕೋಲಾರ ಜಿಲ್ಲೆ (ಸುತ್ತು ನಿಧಿ)

    

10 ಲಕ್ಷ ಬಿಡುಗಡೆಯಾಗಿದೆ.

ಸಂಸ್ಕರಣೆಗೆ 1 ಟನ್ ಉಣ್ಣೆಯನ್ನು ಖರೀದಿಸಲು.

----

ಸಂಸ್ಕರಣೆಗೆ 7 ಟನ್ ಉಣ್ಣೆಯನ್ನು ಖರೀದಿಸಲು

​ 

 

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ , ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top