ಪರಿಚಯ
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
ರಾಜ್ಯದ ಕುರಿ ಮತ್ತು ಕುರಿಗಾರರ ಕಲ್ಯಾಣ ಉಸ್ತುವಾರಿಗಾಗಿ ಸರ್ಕಾರದ ಆದೇಶ ಸಂಖ್ಯೆ: ಸಿಐ:77:ಸಿ ಎಸ್ ಬಿ: 74 ದಿನಾಂಕ: 03.03.1995ರಂತೆ ಕರ್ನಾಟಕ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿ ಮಂಡಳಿ ಸ್ಥಾಪನೆಯಾಗಿ ಸರ್ಕಾರದ ಆದೇಶ ಸಂಖ್ಯೆ: ಸಂವ್ಯಶಾಇ:30:ಶಾಸನ:2002, ದಿನಾಂಕ: 28.03.2003ರ ರೀತ್ಯಾ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವಾಗಿ ಪರಿವರ್ತಿತವಾಯಿತು. ದಿನಾಂಕ: 01.04.2002 ರಿಂದ ಜಾರಿಗೆ ಬರುವ ಹಾಗೆ ಕರ್ನಾಟಕ ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿ ಮಂಡಳಿ ಬದಲಿಗೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತವು ಅಸ್ತಿತ್ವಕ್ಕೆ ಬಂದಿದೆ.
ಆಡಳಿತ ಮಂಡಳಿಯ ನಿರ್ದೇಶಕರುಗಳು:
- ಅಧ್ಯಕ್ಷರು
- ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು
- ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ
- ಸರ್ಕಾರದ ಕಾರ್ಯದರ್ಶಿ, ಹಣಕಾಸು ಇಲಾಖೆ (ಸಂಪನ್ಮೂಲ)
- ಜವಳಿ ಆಯುಕ್ತರು ಅಥವಾ ಅವರ ಪ್ರತಿನಿಧಿ
- ಆಯುಕ್ತರು, ಪಶುಪಾಲನೆ ಮತ್ತು ಪಶುವೈದ್ಯ ಸೇವೆಗಳು ಅಥವಾ ಪ್ರತಿನಿಧಿ (ವಿಶೇಷ ಠರಾವು ದಿನಾಂಕ:29.11.2006)
- ನಿರ್ದೇಶಕರು, ಪಶು ಪಾಲನೆ ಮತ್ತು ಪಶುವೈದ್ಯ ಸೇವೆಗಳು
- ನಿರ್ದೇಶಕರು, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ
- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಹಕಾರಿ ಕೈಮಗ್ಗ ಮಹಾ ಮಂಡಳಿ ನಿಯಮಿತ, ಬೆಂಗಳೂರು
- ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
- ನಿಗಮದ ವ್ಯವಸ್ಥಾಪಕ ನಿರ್ದೇಶಕರು
ರಾಜ್ಯ ಮಂತ್ರಿ ಮಂಡಲದಲ್ಲಿ ಪಶುಸಂಗೋಪನೆ ಖಾತೆ ಹೊಂದಿರುವ ಸಚಿವರು ಅಥವಾ
ಸರ್ಕಾರವು ನೇಮಿಸುವ ವ್ಯಕ್ತಿಯು ಆಡಳಿತ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ (ಠರಾವು ದಿನಾಂಕ:
13.07.2004).
ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಪರ ನಿರ್ದೇಶಕರ ಹುದ್ದೆಯ ಅಧಿಕಾರಿಯು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವರು.
ನಿಗಮದ ಮುಖ್ಯ ಉದ್ದೇಶಗಳು
- ದೇಶೀಯ ಮತ್ತು ವಿದೇಶಿ ತಳಿಯ ಕುರಿ ಮೇಕೆಗಳ ಉತ್ಪಾದನೆಯನ್ನು ಆಯ್ಕೆ ಉನ್ನತೀಕರಣ ಮತ್ತು ಮಿಶ್ರ ತಳಿ ಸಂವರ್ಧನೆಯಿಂದ, ವೈಜ್ಞಾನಿಕ ಸಂವರ್ಧನೆಯಿಂದ ಹೆಚ್ಚಿಸಲು ಮತ್ತು ಅಭಿವೃದ್ಧಿಪಡಿಸಲು ಉತ್ತೇಜಿಸುವುದು.
- ಕುರಿ ಮತ್ತು ಮೇಕೆಗಳಿಗೆ ಆರೋಗ್ಯ ರಕ್ಷಣೆ ನೀಡುವುದು ವಿಶೇಷವಾಗಿ ಒಳ ಮತ್ತು ಹೊರ ಪರಾವಲಂಬಿ ಜೀವಿಗಳ ಕುರಿತು ಮತ್ತು ಸಂಪ್ರದಾಯ ಮತ್ತು ಅಸಂಪ್ರದಾಯಕ ವಿದವಿದ ಮೇವಿನ ಉತ್ಪಾದನೆ ಉತ್ತೇಜಿಸುವುದು ಮತ್ತು ಕುರಿ ಮೇಕೆಗಳಿಗೆ ಹುಲ್ಲುಗಾವಲುಗಳ ಅಭಿವೃದ್ಧಿ ಪಡಿಸುವುದು.
- ಕುರಿಮೇಕೆಗಳಿಗೆ ವಿವಿಧ ರೀತಿಯ ಆಹಾರ ಮಿಶ್ರಣ ಕೈಗೊಳ್ಳುವುದು ಚರ್ಮ ಉಣ್ಣೆ ಮತ್ತು ಇತರೆ ಸಂಬಂಧಿತ ಉತ್ಪನ್ನಗಳನ್ನು ಸಂಸ್ಕರಣೆ ಮತ್ತು ಮಾರಾಟ ಮಾಡುವುದು ಮತ್ತು ನಿಗಮದ ಉದ್ದೇಶಗಳ ಪೂರೈಕೆಗೆ ಅಗತ್ಯವೆನಿಸುವ ಮಾರಾಟ ಅಥವಾ ರಫ್ತು ಕೈಗೊಳ್ಳುವುದು.
- ಉಣ್ಣೆ ಮತ್ತು ಅರೆ ಉಣ್ಣೆ ವಸ್ತುಗಳ ಸಂಗ್ರಹಣೆ, ಸಂಸ್ಕರಣೆ
ಮತ್ತು ಮಾರಾಟಕ್ಕೆ ತರಭೇತಿ ನೀಡುವುದು ಮತ್ತು ಕುರಿ ಮೇಕೆ ಅಭಿವೃದ್ಧಿ
ಕ್ಷೇತ್ರದಲ್ಲಿ ತಾಂತ್ರಿಕ ಸಲಹಾ ಸೇವೆ ನೀಡುವುದು
- ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಂತರ ರಾಷ್ಟ್ರೀಯ ಸಹಾಯ ಸಂಸ್ಥೆಗಳ
ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದು.
- ಕುರಿ ಸಹಕಾರಿ ಸಂಘಗಳ ರಚನೆಯಲ್ಲಿ ಸಹಕರಿಸಿ ಉತ್ತೇಜಿಸುವುದು
ಮತ್ತು ರಾಜ್ಯದಲ್ಲಿ ಉಣ್ಣೆ ಅಭಿವೃದ್ಧಿ ಮಾಡುವುದು.
ನಿಗಮದ ಕಾರ್ಯಕ್ರಮಗಳು:
- ಕುರಿ
ಮತ್ತು ಮೇಕೆ ತಳಿ ಸುಧಾರಣೆ ಮತ್ತು ಸಂಸ್ಕರಣೆಗೆ ನಾಲ್ಕು ಕುರಿ ಸಂವರ್ಧನಾ ಕೆಂದ್ರ ಮತ್ತು ಒಂದು ಮೇಕೆ
ಸಂವರ್ಧನಾ ಕೇಂದ್ರಗಳ ನಿರ್ವಹಣೆ
- ದೇಶೀ
ತಳಿಗಳ ಸಂರಕ್ಷಣೆ ಆಯ್ಕೆಯಾದ ಟಗರುಗಳನ್ನು ರೈತರಿಗೆ ವಿತರಿಸಿ ಅವರಲ್ಲಿಯ ಕುರಿಗಳ ಒಳ ಸಂಕರಣವನ್ನು
ತಡೆಯುವುದು. ಹಾಸನದಲ್ಲಿ ಘನೀಕೃತ ವೀರ್ಯ ಸಂಗ್ರಹಣಾ ಕೇಂದ್ರವನ್ನು ಸ್ಥಾಪಿಸಿ ಕುರಿ ಮೇಕೆಗಳಲ್ಲಿ
ಕೃತಕ ಗರ್ಭಧಾರಣೆಗೆ ರೂ.5 ಕೋಟಿಗಳನ್ನು ಮಂಜೂರು ಮಾಡಿದೆ.
- ಸಹಾಯಧನದೊಂದಿಗೆ
ಕುರಿಗಾರರಿಗೆ ಟಗರು/ಹೋತಗಳನ್ನು ತಳಿ ಸಂವರ್ಧನೆಗೆ ವಿತರಿಸುವುದು.
- ಆರೋಗ್ಯ
ರಕ್ಷಣೆ -ವಾರ್ಷಿಕ ಎರಡು ಸಲ 100% ಜಂತುನಿವಾರಕ ಔಷಧಿಯನ್ನು ಉಚಿತವಾಗಿ
ನೀಡುವುದು ಹಾಗೂ18 ಜಿಲ್ಲೆಗಳಲ್ಲಿ ಕುರಿ ಮೇಕೆಗಳಿಗೆ ಸೇವೆ ನೀಡಲು ಸಂಚಾರಿ
ಆಂಬುಲೆನ್ಸ್ ಸೇವೆ.
- ಯಾಂತ್ರೀಕೃತ
ಉಣ್ಣೆ ಕಟಾವು ಅನುಕೂಲ ಒದಗಿಸುವುದು
- ಹವಾಮಾನ
ಬದಲಾವಣೆಯ ರಾಷ್ಟ್ರೀಯ ಹೊಂದಾಣಿಕೆ ನಿಧಿಯಿಂದ ದೇಶೀಯ ಕುರಿ ತಳಿ ಸಂರಕ್ಷಣೆಗೆ (ಬಂಡೂರು, ಬಳ್ಳಾರಿ
ಮತ್ತು ಡೆಕ್ಕನಿ ಕುರಿಗಳು) ರೂ.1.32 ಕೋಟಿಗಳನ್ನು ಮಂಜೂರು ಮಾಡಲಾಗಿದೆ.
- ಕುರಿ
ಮೇಕೆಗಳ ವೈಜ್ಞಾನಿಕ ಮಾರುಕಟ್ಟೆಗಾಗಿ ಎಪಿಎಂಸಿಗಳ ಮೂಲಕ ಮೂಲಭೂತ ಸೌಕರ್ಯ ಒದಗಿಸುವುದು. 2015-16ನೇ ಸಾಲಿನಲ್ಲಿ 28 ಎಪಿಎಂಸಿ ಮಾರುಕಟ್ಟೆಗಳಲ್ಲಿ ಎಪಿಎಂಸಿ ಮತ್ತು
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಕಾರದೊಂದಿಗೆ ತಲಾ ರೂ.50 ಲಕ್ಷದಂತೆ 14.5 ಕೋಟಿಗಳನ್ನು ಮೂಲಭೂತ ಸೌಕರ್ಯ ಒದಗಿಸಿ ರೈತರಿಗೆ ನ್ಯಾಯಯುತ
ಬೆಲೆ ಸಿಗಲು ಮಂಜೂರು ಮಾಡಲಾಗಿದೆ. 2016-17ನೇ ಸಾಲಿನಲ್ಲಿ 25 ಎಪಿಎಂಸಿಗಳ ಮೂಲಭೂತ ಸೌಕರ್ಯಕ್ಕಾಗಿ ತಲಾ ರೂ.20 ಲಕ್ಷದಂತೆ ರೂ 5.00 ಕೋಟಿಗಳನ್ನು
ಮಂಜೂರು ಮಾಡಲಾಗಿದೆ.
- ಸಾಮಾಜಿಕ ಆರ್ಥಿಕ ಯೋಜನೆ ಅಡಿಯಲ್ಲಿ ಕುರಿ ಮತ್ತು
ಮೇಕೆ ಘಟಕಗಳ ನೀಡಿಕೆ
- ವಿಶೇಷ
ಘಟಕ ಯೋಜನೆ ಕಾರ್ಯಕ್ರಮದಲ್ಲಿ 90% ಸಹಾಯಧನದಲ್ಲಿ (10+1) ಕುರಿ ಮತ್ತು ಮೇಕೆ ಘಟಕಗಳನ್ನು ನೀಡಲಾಗುವುದು.
- ಗಿರಿಜನ
ಉಪಯೋಜನೆ ಅಡಿಯಲ್ಲಿ 90% ಸಹಾಯಧನದಲ್ಲಿ (10+1) ಕುರಿ ಮತ್ತು ಮೇಕೆ ಘಟಕಗಳನ್ನು ನೀಡಲಾಗುವುದು.
- ವಿದವೆ
ಮತ್ತು ನಿರಾಶ್ರಿತ ಮಹಿಳೆಯರಿಗೆ 75% ಸಹಾಯಧನದಲ್ಲಿ ಮೂರು ಮೇಕೆ / ಕುರಿಗಳನ್ನು ರೂ.10,000ಗಳ ಘಟಕ
ವೆಚ್ಚದಲ್ಲಿ 10,000 ಫಲಾನುಭವಿಗಳಿಗೆ ನೀಡಲಾಗುವುದು (ಅನುಷ್ಠಾನ ಪಶುಪಾಲನಾ ಮತ್ತು ಪಶುವೈದ್ಯ ಸೇವಾ
ಇಲಾಖೆಯಿಂದ)
9. ಆಕಸ್ಮಿಕ
ಮರಣ ಹೊಂದಿದ ಕುರಿ ಮೇಕೆಗಳಿಗೆ ಪರಿಹಾರಧನವಾಗಿ 6 ತಿಂಗಳವರೆಗಿನ ವಯಸ್ಸಿನ ಮರಿಗಳಿಗೆ ರೂ.2500 ಮತ್ತು
6 ತಿಂಗಳ ಮೇಲ್ಪಟ್ಟ ವಯಸ್ಸಿನ ಕುರಿ ಮೇಕೆಗಳಿಗೆ ರೂ.5000 ಗಳನ್ನು ನೀಡಲಾಗುವುದು.
- 2013-14 ರೂ. 2 ಕೋಟಿ
- 2014-15 ರೂ.
5.90 ಕೋಟಿ
- 2015-16 ರೂ.4.75
ಕೋಟಿ
- 2016-17 ರೂ.10 ಕೋಟಿ
- 2017-18 ರೂ.12 ಕೋಟಿ
10. ಆಧುನಿಕ
ವಧಾಗಾರ ಸ್ಥಾಪನೆಗಾಗಿ ತುಮಕೂರು ಜಿಲ್ಲೆ ಚೀಲನಹಳ್ಳಿಯಲ್ಲಿ ವಧಾಗಾರ ನಿರ್ಮಿಸಲು ನಬಾರ್ಡನ ಆರ್ ಐ ಡಿ ಎಫ್ ಅಡಿಯಲ್ಲಿ ರೂ.26.55 ಕೋಟಿ ರೂಗಳನ್ನು ಮಂಜೂರು ಮಾಡಲಾಗಿದೆ.
11. ತರಬೇತಿ ಕಾರ್ಯಕ್ರಮ
ಕುರಿಗಾರರಿಗೆ ಕುರಿ
ಮೇಕೆಗಳನ್ನು ವೈಜ್ಞಾನಿಕವಾಗಿ ಸಾಕಲು ತರಬೇತಿಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ನೀಡಲಾಗುವುದು.
ಪ್ರತಿ ತರಬೇತಿಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ತಲಾ ರೂ.10000 ಗಳನ್ನು ನೀಡಲಾಗುವುದು.
12. ಕುರಿ ಮತ್ತು ಉಣ್ಣೆ ಅಭಿವೃದ್ಧಿ ಯೋಜನೆ ರಾಣಿಬೆನ್ನೂರು ಕೇಂದ್ರದಲ್ಲಿ ಮಹಿಳೆಯರು ಮತ್ತು ನಿರುದ್ಯೊಗಿಗಳಿಗೆ ಕಂಬಳಿ, ಕಾರ್ಪೆಟ್ (ನೆಲಹಾಸು), ಚಾಪೆ ಮುಂತಾದ ವಸ್ತುಗಳ ತಯಾರಿಕೆಗೆ 6 ತಿಂಗಳ ತರಬೇತಿಯನ್ನು ಪ್ರತಿ ತಿಂಗಳು ರೂ.1500ಗಳ ಶಿಷ್ಯ ವೇತನದೊಂದಿಗೆ ನೀಡಲಾಗುವುದು.
13. ಮೂರು ದಿನಗಳ ವೈಜ್ಞಾನಿಕ ಕುರಿ ಸಾಕಾಣಿಕೆ ತರಬೇತಿಯನ್ನು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ಧನಗೂರಿನ ಬಂಡೂರು ಕುರಿ ಸಂವರ್ಧನಾ ಕ್ಷೇತ್ರದಲ್ಲಿ ನೀಡಲಾಗುವುದು.
14. ಪ್ರತಿ ಹೋಬಳಿಯಲ್ಲಿ 15000-25000 ಕುರಿ
ಮೇಕೆಗಳನ್ನು ಹೊಂದಿದ್ದರೆ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳನ್ನು ರಚಿಸಿ ಪ್ರತಿ ಸಂಘಕ್ಕೆ ರೂ.5 ಲಕ್ಷಗಳನ್ನು ಸಂಘ ಬಲವರ್ಧನೆ ಚಟುವಟಿಕೆಗಳಾದ
ಕುರಿ ಮಿತ್ರಗೆ ಗೌರವ ಧನ, ತೂಕದ ಯಂತ್ರ ಖರೀದಿ, ಉಣ್ಣೆ ಕಠಾವು ಯಂತ್ರ, ಟಗರು ಪೂರೈಕೆ ಮತ್ತು ಅಗತ್ಯಕ್ಕೆ
ತಕ್ಕಂತೆ ಮಾರ್ಪಾಡು ಮಾಡಿದ ವಾಹನಗಳನ್ನು ಸಾರಿಗೆಗೆ ಉಪಯೋಗಿಸಿಕೊಳ್ಳಲು ನೀಡಲಾಗುವುದು.
15. ಸರ್ಕಾರ
ರಚಿಸಿದ ಕುರಿ ಮತ್ತು ಮೇಕೆ ಮಾರುಕಟ್ಟೆ ಸುಧಾರಣಾ ಸಮಿತಿಯು ಪ್ರತಿ ಕುರಿ ಮತ್ತು ಉಣ್ಣೆ ಉತ್ಪಾದಕರ
ಸಹಕಾರ ಸಂಘವು ಒಬ್ಬ ಕುರಿ ಮಿತ್ರರನ್ನು ಆರೋಗ್ಯ ಇಲಾಖೆಯ ಕಾರ್ಯಕರ್ತರಂತೆ ನೇಮಕ ಮಾಡಿಕೊಳ್ಳಲು ಶಿಫಾರಸ್ಸು
ಮಾಡಿರುತ್ತಾರೆ.
ಕರ್ನಾಟಕ ಕುರಿ ಮತ್ತು ಉತ್ಪನ್ನಗಳ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರ ಪಟ್ಟಿ
ಕ್ರಮ ಸಂಖ್ಯೆ | ಹೆಸರು | ಅವಧಿ ಇಂದ | ವರೆಗೆ |
1 | ಶ್ರೀ ಮಲ್ಲಪ್ಪ | 29/11/1972 | March 1975 |
2 | ಶ್ರೀ ಚಮ್ಮಯ್ಯ ಒಡೆಯರ್ | March 1975 | 27/01/1978 |
3 | ಶ್ರೀ ಎಸ್.ಎಂ.ಜೋಗಿ | 19/10/1978 | 28/06/1980 |
4 | ಶ್ರೀ ಕೆ.ಎಸ್.ಎನ್.ಮೂರ್ತಿ ಐಎಎಸ್ | 21/10/1980 | 11/12/1980 |
5 | ಶ್ರೀ ಜಿ.ವಿ.ವಿಶ್ವನಾಥ್ ಐಎಎಸ್ | 12/12/1980 | 18/10/1981 |
6 | ಶ್ರೀ ಎಂ ಕೃಷ್ಣಯ್ಯ | 19/10/1981 | 25/03/1983 |
7 | ಶ್ರೀ ವಿತರಕ ಐಎಎಸ್ | 26/03/1983 | 22/07/1983 |
8 | ಶ್ರೀ ಚಿಗಿರಿಗೌಡ | 23/07/1983 | 21/06/1984 |
9 | ಶ್ರೀ ಸಿ.ಎಸ್. ಭಾಸ್ಕರಪ್ಪ | 26/11/1984 | 12/06/1985 |
10 | ಶ್ರೀ ಸಿ.ಟಿ ಬಂಜಮಿನ್ ಐಎಎಸ್ | 13/06/1985 | 25/12/1985 |
11 | ಶ್ರೀ ನಾಗಪ್ಪ ಭಿಮಾಪ್ಪ ಸಲೋಮಿ | 26/12/1988 | 04/05/1988 |
12 | ಡಾ. ಎಚ್.ಬಿ.ಶಟ್ಟಿ ನಿರ್ದೇಶಕ ಎಹೆಚ್&ವಿ | 05/05/1988 | 03/08/1993 |
13 | ಶ್ರೀ ಎಸ್.ಎಫ್ ಎನ್ ಗಾಜೀಗೌಡರು | 04/08/1993 | 22/12/1994 |
14 | ಶ್ರೀ ಎನ್ ಆರ್ ವೆಂಕಟೇಶ್ | 09/01/1995 | 28/02/1995 |
15 | ಡಾ. ಎ. ಕುಮಾರ ಸ್ವಾಮಿ | 08/03/1995 | 31/05/1995 |
16 | ಡಾ. ಟಿ. ಅಶ್ವತನಾರಾಯಣ | 30/08/1995 | 09/12/1997 |
17 | ಶ್ರೀ. ಮರಿಗೌಡ ಹುಲ್ಕಲ್ | 10/12/1997 | 06/08/1999 |
18 | ಶ್ರೀ. ಕೃಷ್ಣಪ್ಪ | 14/12/1999 | 21/04/2002 |
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರ ಪಟ್ಟಿ.
1 | ಶ್ರೀ. ವೈ.ಎನ್. ಗೌಡರು | 23.04.2002 | 30.11.2003 |
2 | ಶ್ರೀ. ಎಂ. ಮಹದೇವ್ | 31.11.2003 | 21.01.2004 |
3 | ಶ್ರೀ. ವೈ.ಎನ್.ಗೌಡರು | 21.01.2004 | 30.06.2005 |
4 | ಶ್ರೀ. ಮಿರಾಜುದ್ದೀನ್ ಎನ್ ಪಟೇಲ್ | 10.11.2005 | 06.04.2006 |
5 | ಶ್ರೀ. ವಿ.ಎಸ್. ಆಚಾರ್ಯ | 07.04.2006 | 26.07.2006 |
6 | ಶ್ರೀ. ರೇವು ನಾಯಕ್ ಬೆಳಮಗಿ | 27.03.2006 | 25.02.2007 |
7 | ಶ್ರೀ ದೊಡ್ಡನ ಗೌಡ ಪಾಟೀಲ್ | 26.02.2007 | 22.02.2007 |
8 | ಶ್ರೀ ಡಿ.ವಿ.ಪ್ರಸಾದ್ ಐಎಎಸ್ | 23.11.2007 | 13.06.2008 |
9 | ಶ್ರೀ. ರೇವು ನಾಯಕ್ ಬೆಳಮಗಿ | 11.07.2008 | 21.09.2010 |
10 | ಶ್ರೀ ಬೋಜರಾಜ್ ಬಿ ಕರುಡಿ | 22.11.2010 | 20.05.2013 |
11 | ಶ್ರೀ. ಅರವಿಂದ ಜನ್ನು ಐಎಎಸ್ | 06.06.2013 | 31.07.2013 |
12 | ಶ್ರೀ ಟಿ.ಬಿ. ಜಯಚಂದ್ರ | 01.08.2013 | 24.11.2014 |
13 | ಶ್ರೀ. ಪಂಡಿತ್ ರಾವ್ ಚಿದ್ರಿ | 25.11.2014 | 24.11.2014 |
14 | ಶ್ರೀ. ಎ. ಮಂಜು | 15.09.2016 | 03.11.2016 |
15 | ಶ್ರೀ. ಜಿ. ಕೃಷ್ಣ | 04.11.2016 | ಇಲ್ಲಿಯವರೆಗೂ |
ಕರ್ನಾಟಕ
ಕುರಿ ಮತ್ತು ಕುರಿ ಉತ್ಪನ್ನಗಳ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳ
ಪಟ್ಟಿ
ಕ್ರಮ ಸಂಖ್ಯೆ | ಅಧಿಕಾರಿಯ ಹೆಸರು | ಅವಧಿ |
1 | ಡಾ. ಬಿ.ಚಂದ್ರಶೇಕರ್ | 12.06.1975 to 10.07.1978 |
2 | ಡಾ. ಕೆ. ರಾಮದೇವ್ ಸಿಂಧಿಯಾ | 11.07.1978 to 03.10.1979 |
3 | ಶ್ರೀ ಎಂ. ರಾಮಯ್ಯ | 04.10.1979 to 30.10.1982 |
4 | ಡಾ. ಎಂ.ಕೆ.ಶೇಷಪ್ಪ(ಐ/ಸಿ) | 31.01.1982 to 22.10.1982 |
5 | ಶ್ರೀ ಎಮ್ ದೊಡ್ಡಪ್ಪ | 23.10.1982 to 27.12.1983 |
6 | ಶ್ರೀ ನಾಗಪ್ಪ ಎಚ್.ಎಂ | 07.01.1985 to 02.08.1985 |
7 | ಡಾ. ಎಂ.ಕೆ.ಶೇಷಪ್ಪ | 03.08.1985 to 29.09.1986 |
8 | ಡಾ. ಎಚ್.ಆರ್.ಕಾಂತರಾಜು | 10.10.1986 to 15.10.1989 |
9 | ಡಾ. ಎಂ.ಕೆ. ಶೇಷಪ್ಪ | 16.10.1989 to 15.12.1989 |
10 | ಡಾ. ಎಚ್.ಆರ್.ಕಾಂತರಾಜು | 16.12.1989 to 31.10.1990 |
11 | ಡಾ. ಎಚ್.ವಿ.ಚಂದ್ರಶೇಖರಯ್ಯ | 01.11.1990 to 30.11.1990 |
12 | ಡಾ. ಅಬ್ದುಲ್ ಕಲಾಮ್ ಅಹ್ಮದ್ | 01.12.1990 to 09.05.1991 |
13 | ಡಾ. ಪಿ. ನಂದಗೋಪಾಲ್ | 10.05.1991 to 11.09.1996 |
14 | ಡಾ. ಸಿ.ಎಲ್. ಜಯದೇವ್ | 14.09.1996 to 30.06.1997 |
15 | ಡಾ .ಪಿ.ನಂದಗೋಪಾಲ್ | 14.07.1997 to 30.06.1999 |
16 | ಡಾ. ರಫೀಕ್ ಅನ್ವರ್(ಐ/ಸಿ) | 01.07.1999 to 08.05.2000 |
17 | ಡಾ. ಎಂ.ರಂಗಸ್ವಾಮಯ್ಯ | 10.05.2000 to 04.12.2001 |
ಕರ್ನಾಟಕ
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ
ಅಧಿಕಾರಿಗಳ ಪಟ್ಟಿ
ಕ್ರಮ ಸಂಖ್ಯೆ | ಅಧಿಕಾರಿಯ ಹೆಸರು | ಅವಧಿ |
1 | ಡಾ. ಎಂ. ರಂಗಸ್ವಾಮಯ್ಯ | 05.12.2001 to 31.05.2002 |
2 | ಡಾ. ಎಲ್. ಶಾಂತಕುಮಾರ್ (ಐ/ಸಿ) | 01.06.2002 to 06.01.2003 |
3 | ಡಾ. ಎಲ್. ಶಾಂತಕುಮಾರ್ | 07.01.2003 to 10.11.2003 |
4 | ಡಾ. ಶಿವಕುಮಾರ್ (ಐ/ಸಿ) | 11.11.2003 to 19.01.2004 |
5 | ಡಾ. ಎಲ್. ಶಾಂತಕುಮಾರ್ | 19.01.2004 to 23.12.2004 |
6 | ಡಾ. ಶಿವಕುಮಾರ್ (ಐ/ಸಿ) | 23.12.2004 to 06.07.2005 |
7 | ಡಾ. ಡಿ.ಎಮ್.ದಾಸ್ (ಐ/ಸಿ) | 07.07.2005 to 20.06.2006 |
8 | ಡಾ. ಕೆ.ಶಿವಕುಮಾರ್ | 21.06.2006 to 21.06.2010 |
9 | ಡಾ. ಡಿ.ಎಮ್.ದಾಸ್ | 21.06.2010 to 21.04.2011 |
10 | ಡಾ. ಎಸ್.ಎಸ್.ರಂಗಸ್ವಾಮಿ (ಐ.ಸಿ) | 21.04.2011 to 21.04.2011 |
11 | ಡಾ. ಹೆಚ್.ಹೆಚ್. ಮೊಹಮ್ಮದ್ ಫಜುಲುಲ್ಲಾ ಷರೀಫ್ | 27.04.2011 to 31.12.2012 |
12 | ಡಾ. ಸಯೀದ್ ಅಹ್ಮದ್ | 31.12.2012 to 28.01.2014 |
13 | ಡಾ. ಬಿ. ಮುನಿವೆಂಕಟಪ್ಪ | 29.01.2014 to 23.01.2015 |
14 | ಡಾ. ಕೆ.ಎಂ. ಮೊಹ್ಮದ್ ಜಫ್ರುಲ್ಲಾ ಖಾನ್ | 23.01.2015 to 22.06.2016 |
15 | ಡಾ. ಟಿ. ಶಿವರಾಮ ಭಟ್ | 22.06.2016 ಇಲ್ಲಿಯವರೆಗೂ |
ಅಧ್ಯಕ್ಷರ ಅಧಿಕಾರಗಳು
- ಅಧ್ಯಕ್ಷರು ಪ್ರತಿ ಆಡಳಿತ ಮಂಡಳಿಯ ಸಭೆ ಮತ್ತು ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿವುದು.
- ಸಮಮತಗಳಿದ್ದಾಗ ಅಧ್ಯಕ್ಷರು ತಮ್ಮ ಮತದ ಜೊತೆಗೆ ನಿರ್ಧಾರಿತ ಮತವನ್ನು ಸಂದರ್ಭಾನುಸಾರ ನಿರ್ದೇಶಕರಾಗಿ ಅಥವಾ ಸದಸ್ಯರಾಗಿ ಹಾಕಬಹುದು.
- ಅಧ್ಯಕ್ಷರು ಆಡಳಿತ ಮಂಡಳಿಯ ಸಭೆಯನ್ನು ಅಥವಾ ಸಾಮಾನ್ಯ ಸಭೆಯನ್ನು ಅಥವಾ ಯಾವುದೇ ಸಮಿತಿ ಸಭೆಯನ್ನು ಸಮಂಜಸವೆನಿಸಿದಲ್ಲಿ ಕೆಳಕಂಡ ಸಂದರ್ಭಗಳಲ್ಲಿ ಮುಂದೂಡಬಹುದು.
ಅ. ಸಭೆಗೆ ನಿಗದಿಪಡಿಸಿದ ಅವಧಿಯ 15 ನಿಮಿಷಗಳೊಳಗೆ ಕೋರಂ ಇಲ್ಲದಿದ್ದಲ್ಲಿ.
ಆ. ಮತದಾನಕ್ಕೆ ಒತ್ತಾಯಿಸಿದಾಗ.
ಇ. ಸದಸ್ಯನು ಔಚಿತ್ಯವನ್ನು ಪ್ರಶ್ನಿಸಿದಾಗ (ತಪ್ಪು ಪದ್ದತಿ, ಅನಗತ್ಯತೆ ಮತ್ತು ಅಸಂವಿಧಾನಿಕ ಭಾಷೆ ಬಳಸಿದಾಗ ಅಥವಾ ಕಂಪನಿಯ ನಿಯಮಾವಳಿಗಳ ಅವಗಡನೆಗೆ ಮಾತ್ರ ಸೀಮಿತವಾಗಿರತಕ್ಕದ್ದು)
ಈ. ಸಭೆಯು ಗದ್ದಲವಾದಾಗ - ಸದಸ್ಯರ ನಿರ್ಣಯ ಚರ್ಚೆಯು ಯಾವುದೇ ಉಪಯುಕ್ತ ಮತ್ತು ರಚನಾತ್ಮಕವಾಗಿಲ್ಲವೆಂದು ತೃಪ್ತಿಪಟ್ಟ ಅಧ್ಯಕ್ಷರು ಚರ್ಚೆಯನ್ನು ಮುಕ್ತಾಯಗೊಳಿಸುವುದು.
- ಆಡಳಿತ ಮಂಡಳಿಯ ಸಭೆಗಳನ್ನು ಕರೆಯಲು ಅಧ್ಯಕ್ಷರು ಅಧಿಕಾರವನ್ನು ಹೊಂದಿರುತ್ತಾರೆ.
ವ್ಯವಸ್ಥಾಪಕ ನಿರ್ದೇಶಕರ ಶಾಸನಬದ್ಧ ಅಧಿಕಾರಗಳು
- ವಿವಿಧ
ಕಾಯಿದೆಗಳಡಿ ಶಾಸನಬದ್ಧ ಸಲ್ಲಿಕೆಗಳಲ್ಲಿ ಮತ್ತು ಕಂಪನಿಕಾಯ್ದೆಯಡಿ ಸಲ್ಲಿಸುವುದು.
- ತೆರಿಗೆ ಪ್ರಾಧಿಕಾರಿ ಅಬಕಾರಿ
ಪ್ರಾಧಿಕಾರ ಮುಂತಾದವುಗಳಿಗೆ ಅಗತ್ಯಬಿದ್ದಾಗ ಹಾಜರಾಗುವುದು.
ವ್ಯವಸ್ಥಾಪಕ
ನಿರ್ದೇಶಕರ ವಿತ್ತಾಧಿಕಾರಗಳು
- ತುರ್ತು
ಸಂದರ್ಭಗಳಲ್ಲಿ ಆಯವ್ಯಯ ಅನುಮೋದನೆ ಇಲ್ಲದಿದ್ದರೂ ಪ್ರತಿ ಬಾರಿಗೆ ರೂ 5 ಲಕ್ಷಗಳಿಗೆ ಮೀರದಂತೆ ವಾರ್ಷಿಕ
ರೂ.50 ಲಕ್ಷಗಳವರೆಗೆ ಆಡಳಿತ ಮಂಡಳಿಯ ಸ್ಥಿರೀಕರಣದೊಂದಿಗೆ ಖರ್ಚು ಮಾಡಬಹುದು. (ವಿಶೇಷ ಠರಾವು ತಿದ್ದಪಡಿ
ದಿನಾಂಕ: 29.01.2006)
- ಕಂಪನಿಯ ವ್ಯವಹಾರ ಉತ್ತೇಜಿಸಲು
ಅಗತ್ಯವೆನಿಸದ ರೀತಿಯಲ್ಲಿ ಪ್ರತಿ ಭಾರಿ ಹತ್ತು ಸಾವಿರಗಳಿಗೆ ಮೀರದಂತೆ ಯಾವುದೇ ಹಣಕಾಸು ವರ್ಷದಲ್ಲಿ
ರೂ.3 ಲಕ್ಷಗಳಿಗೆ ಮೀರದಂತೆ ಆಯವ್ಯಯದಲ್ಲಿ ಖರ್ಚು ಮಾಡಬಹುದು. (ತಿದ್ದುಪಡಿ ಠರಾವು ದಿನಾಂಕ:
13.07.2004)
ವ್ಯವಸ್ಥಾಪಕ
ನಿರ್ದೇಶಕರ ಆಡಳಿತಾತ್ಮಕ ಅಧಿಕಾರಗಳು
(ತಿದ್ದುಪಡಿ ಠರಾವು ದಿನಾಂಕ: 13.07.2004)
- ಕಂಪನಿಯ
ದಿನನಿತ್ಯದ ಅಗತ್ಯವೆನಿಸಿದ ವ್ಯವಹಾರಗಳನ್ನು ನಿರ್ದೇಶಿಸಿ ವ್ಯವಹರಿಸುವುದು.
- ಒಟ್ಟಾರೆ
ಆಡಳಿತವು ಇವರ ಪೂರ್ಣ ಅಧೀನದಲ್ಲಿದ್ದು ಸೇವಾ ಅವಧಿಯ ನಿರ್ಬಂಧವಿಲ್ಲದೆ ಆಡಳಿತ ಮತ್ತು ನೇಮಕವಾದ ಸಿಬ್ಬಂದಿಯ
ಪೂರ್ಣ ಆಡಳಿತ ನಿಯಂತ್ರಣ ಹೊಂದಿರುತ್ತಾರೆ.
- ವಿದೇಶಿ
ಸಹಯೋಗ ಸೇರಿದಂತೆ ಯಾವುದೇ ಉದ್ದೇಶದ ಯೋಜನೆಗಳ ಮಾತು-ಕತೆಗಳ ಪ್ರಕ್ರಿಯೆ ಕೈಗೊಳ್ಳುವುದು. ಅಂತಹ ತೀರ್ಮಾನಗಳನ್ನು
ಆಡಳಿತ ಮಂಡಳಿ ಮತ್ತು ಸರ್ಕಾರದ ಸಮಾಲೋಚನೆಯೊಂದಿಗೆ ಕೈಗೊಳ್ಳುವುದು.
- ಆಡಳಿತ
ಮಂಡಳಿಯ ಒಪ್ಪಿಗೆಯೊಂದಿಗೆ ಭಾರತದಲ್ಲಿನ ಯಾವುದೇ ಭಾಗೀದಾರರೊಂದಿಗೆ ಗುತ್ತಿಗೆ ನೀಡುವುದು, ರದ್ದು
ಮಾಡುವುದು, ವ್ಯವಸ್ಥೆಗಳು, ಸಾಧನೆ, ಕರೆತರುವುದು (ವಾರೆಂಟ್ಸ್) ಬಾಂಡ್ಸ್ ಅಥವಾ ಇನ್ಯಾವುದೇ ದಾಖಲಾತಿಗಳಿಗೆ
ಸಹಿ ಮಾಡಿ ನಿರ್ವಹಿಸುವುದು.
- ಕಾನೂನಾತ್ಮಕ
ನಡವಳಿಗಳನ್ನು ಮತ್ತು ಉದ್ದೆಮೆಗಳನ್ನು ನಿರ್ಧರಿಸಲು, ಸಮರ್ಥಿಸಲು, ರಾಜೀಮಾಡಲು, ರದ್ದು ಮಾಡಲು ಮೇಲ್ಮನವಿ
ಮತ್ತು ಇತರೆ ಕಂಪನಿಯ ಹಕ್ಕು ಮತ್ತು ವಿರುದ್ಧದ ಮನವಿಗಳಿದ್ದಲ್ಲಿ ಸೂಕ್ತವಾಗಿ ನಿರ್ವಹಿಸುವುದು.
- ಬ್ಯಾಂಕು
ದಿವಾಳಿ ಮತ್ತು ಇತರೆ ದಿವಾಳಿ ಪ್ರಕರಣಗಳಲ್ಲಿ ಕಾರ್ಯೋನ್ಮುಖವಾಗುವುದು.
- ಕಂಪನಿಯ
ಮೊಹರಿನೊಂದಿಗೆ (ಸೀಲ್) ಅವರ ಮೊಹರಿನಿಂದ ಕಾರ್ಯಗತಗೊಳಿಸಿದ ಕರಾರುಗಳು/ಒಪ್ಪಂದಗಳಿಗೆ ಕಂಪನಿ ಬದ್ಧವಾಗಿದ್ದು
ಕಂಪನಿಯಷ್ಟೇ ಪರಿಣಾಮವಿರುತ್ತದೆ.
- ವೃತ್ತಿಪರರನ್ನು,
ಸಲಹೆಗಾರರನ್ನು, ವಕೀಲರನ್ನು ಯಥೋಚಿತ ವಿಧಿಗಳು ಮತ್ತು ಷರತ್ತುಗಳೊಂದಿಗೆ ಆಡಳಿತ ಮಂಡಳಿಯ ಒಪ್ಪಿಗೆಯೊಂದಿಗೆ
ನೇಮಕ ಮಾಡುವುದು.
- ಕಾಲಕಾಲಕ್ಕೆ
ಆಡಳಿತ ಮಂಡಳಿಯ ಅನುಮತಿಯೊಂದಿಗೆ ಕಂಪನಿಯ ಬ್ಯಾಂಕ್
ಖಾತೆಗಳನ್ನು ನಿರ್ವಹಿಸುವುದು.
- ಕಂಪನಿಯ
ಹಣ ಸ್ವೀಕರಿಸಲು ಮತ್ತು ನೀಡಲು ಸ್ವೀಕೃತಿ ಮತ್ತು ವಿತರಣೆಗಳ ಜಾರಿಗೆ ಸಹಿ ಮಾಡುವುದು.
- ಕಂಪನಿಗೆ
ಯಾವುದೇ ಬೇಡಿಕೆ, ಖರೀದಿ ವ್ಯವಸ್ಥೆ ಮತ್ತು ವಸ್ತುಗಳು, ಸೇವೆಗಳು ದಾಖಲಾತಿಗಳು ಇತ್ಯಾದಿಗಳನ್ನು ನಿರ್ವಹಿಸುವುದು.
- ಪ್ರತಿ
ವರ್ಷ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ಆಯವ್ಯಯ ಸಿದ್ದಪಡಿಸಿ ಆಡಳಿತ ಮಂಡಳಿಯ ಅನುಮೋದನೆಗೆ ಮಂಡಿಸುವುದು.
- ಅನಿರೀಕ್ಷಿತ
ಸಂದರ್ಭಗಳಲ್ಲಿ ಅವಶ್ಯಕತೆಯಿದ್ದಲ್ಲಿ ಆಯವ್ಯಯವನ್ನು ಮಾರ್ಪಾಡು ಮಾಡಿ ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ಅಳವಡಿಸಿಕೊಳ್ಳುವುದು.
- ಸಾಮಾನ್ಯವಾಗಿ
ಕಂಪನಿಯ ನಿರ್ವಹಣೆಗೆ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.
- ದಿನಪತ್ರಿಕೆಗಳಲ್ಲಿ
ಮತ್ತು ನಿಯತಕಾಲಿಕೆಗಳಲ್ಲಿ ಜಾಹೀರಾತು ಪ್ರಕಟಣೆಗೆ ಪ್ರತಿ ಭಾರಿ ರೂ.50,000 ಗಳಂತೆ ವಾರ್ಷಿಕ ರೂ.
ಎರಡು ಲಕ್ಷಗಳಿಗೆ ಮೀರದಂತೆ ಮಂಜೂರಾತಿ ನೀಡುವುದು.
- ಪತ್ರಾಂಕಿತ
ಮತ್ತು ಅಪತ್ರಾಂಕಿತ ಅಧೀನ ಸಿಬ್ಬಂದಿಯನ್ನು ತನ್ನ
ಕಾರ್ಯ ವ್ಯಾಪ್ತಿಯ ಹೊರಗೂ ಆದರೆ ಭಾರತದಲ್ಲಿ ಕಾರ್ಯನಿಮಿತ್ತ ಹೋಗಲು ಅಧಿಕಾರ ನೀಡುವುದು.
- ಪಶುಪಾಲನಾ
ಮತ್ತು ಪಶುವೈದ್ಯ ಸೇವಾ ಇಲಾಖೆ ನಿಗದಿಪಡಿಸಿದ ಮಾರ್ಗಸೂಚಿಯಂತೆ ಮಂಜೂರಾತಿ ನೀಡಲು, ದಾಸ್ತಾನಿನಲ್ಲಿ
ಕೊರತೆಯಾದ ಆಹಾರ ಮತ್ತು ಬಳಕೆ ವಸ್ತುಗಳ ಮೌಲ್ಯ, ಕುರಿ
ಮರಿಗಳು ಮತ್ತು ಕುರಿಗಳು ಒಳಗೊಂಡಂತೆ ಜಾನುವಾರುಗಳ ಮೌಲ್ಯಗಳನ್ನು ಯಾವುದೇ ವರ್ಷದಲ್ಲಿ ರೂ. ಐವತ್ತು
ಸಾವಿರಗಳಿಗೆ ಮೀರದಂತೆ ರದ್ದು ಮಾಡುವುದು.
- ಹರಾಜು
ಮಾಡಿ ಮಾರಾಟ ಮಾಡಿದ ಗೊಬ್ಬರ, ಹುಲ್ಲು ಮತ್ತು ಕಿರು ಕೃಷಿ ಉತ್ಪನ್ನಗಳು ಮತ್ತು ಇತರೆ ನಿರುಪಯೋಗಿ
ಮತ್ತು ಹೆಚ್ಚುವರಿ ವಸ್ತುಗಳಿಗೆ ಮಂಜೂರು ಮಾಡುವುದು.