ಆಧುನಿಕ ವಧಾಗಾರ ಸ್ಥಾಪನೆ
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಚೀಲನಹಳ್ಳಿ ಗ್ರಾಮದ ಸರ್ವೆ ನಂ. 14 ರಲ್ಲಿ 20 ಎಕರೆ ಜಮೀನಿನಲ್ಲಿ ಆಧುನಿಕ ವಧಾಗಾರ ಸ್ಥಾಪಿಸಲು ಸರ್ಕಾರವು ಜಮೀನನ್ನು ನಿಗಮಕ್ಕೆ ಮಂಜೂರು ಮಾಡಿರುತ್ತದೆ. ನಿಗಮದ ವತಿಯಿಂದ ಆಧುನಿಕ ವಧಾಗಾರವನ್ನು ಸ್ಥಾಪಿಸಲು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ಸರ್ಕಾರದ ಮಂಜೂರಾತಿಯನ್ನು ಪಡೆದು ಆರ್.ಐ.ಡಿ.ಎಫ್ ನರ್ಬಾಡ್ ವತಿಯಿಂದ 2523.07 ಲಕ್ಷಗಳ ಅನುದಾನವನ್ನು ಸರ್ಕಾರವು ಮಂಜೂರು ಮಾಡಿರುತ್ತದೆ. ಆಧುನಿಕ ವಧಾಗಾರದ ಕಟ್ಟಡವನ್ನು ನಿರ್ಮಾಣ ಮಾಡಲು ಏಜೆನ್ಸಿ ನೇಮಕ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸದರಿ ಯೋಜನೆಯಲ್ಲಿ ಪ್ರತಿ ದಿನ 1500 ಕುರಿ/ಮೇಕೆಗಳನ್ನು ವೈಜ್ಞಾನಿಕವಾಗಿ ವಧಿಸಿ, ಸಂಸ್ಕರಿಸಿ ಬಳಕೆದಾರರಿಗೆ ಶುಚಿಯಾದ ಆರೋಗ್ಯಕರ ಮಾಂಸವನ್ನು ಒದಗಿಸುವುದು ಮುಖ್ಯ ಉದ್ದೇಶವಾಗಿದೆ.
ಯೋಜನೆಯ ಹಣಕಾಸಿನ ಪಕ್ಷಿನೋಟ
ಯೋಜನೆಯ ಮೊತ್ತ | | |
ವಿವರಗಳು | ಮೊತ್ತ (ಲಕ್ಷಗಳಲ್ಲಿ) | ಶೇಕಡಾ ಪಾಲು % |
ಸಿವಿಲ್ ಕಾಮಗಾರಿ ಮತ್ತು ವಿದ್ಯುಚ್ಛಕ್ತಿ ಅಳವಡಿಕೆ | 1,471.00 | 55 |
ಘಟಕ ಮತ್ತು ಯಂತ್ರೋಪಕರಣಗಳು | 566.00 | 21 |
ಶೈತ್ಯಾಗಾರ ಮೂಲ ಸೌಕರ್ಯ | 457.00 | 17 |
ಶೀಥಲೀಕರಿಸಿದ ವಾಹನಗಳು | 112.00 | 4 |
ಇತರೆ | 50.00 | 2 |
ಒಟ್ಟು ಮೊತ್ತ | 2,656.00 | 100 |
ಹಣಕಾಸಿನ ಮೂಲಗಳು
ವಿವರಗಳು | ಮೊತ್ತ (ಲಕ್ಷಗಳಲ್ಲಿ) | ವಿವರಣೆ |
ಆರ್.ಐ.ಡಿ.ಎಫ್ ಅನುದಾನ | 2,523.07 | ಒಟ್ಟು ಅಂದಾಜು ವೆಚ್ಚದ ಶೇಕಡಾ 95% |
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ | 132.79 | ಒಟ್ಟು ಅಂದಾಜು ವೆಚ್ಚದ ಶೇಕಡಾ 5% |
ಒಟ್ಟು | 2,655.86 | |
ಆರ್.ಐ.ಡಿ.ಎಫ್ ಅನುದಾನವನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಸರ್ಕಾರವು ಅನುದಾನವೆಂದು ಪರಿಗಣಿಸಲಾಗಿದೆ.