ಕರ್ನಾಟಕ
ಸರ್ಕಾರದ ನಡವಳಿಗಳು
ವಿಷಯ:
|
Breeding
Policy for Sheep and Goat in Karnataka ಗೆ ಸರ್ಕಾರದ ಅನುಮೋದನೆ
ನೀಡುವ ಬಗ್ಗೆ.
|
ಓದಲಾಗಿದೆ:
|
- ಆದೇಶ ಸಂಖ್ಯೆ: ಪಸಂಮೀ 76 ಪಪಾಯೋ 2014 (ಭಾಗ-1) ದಿನಾಂಕ:
03.03.2015
- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ
ಅಭಿವೃದ್ಧಿ ನಿಗಮ ನಿಯಮಿತ ಇವರ ಏಕ ಕಡತ ಸಂಖ್ಯೆ: KSWDCL/Breeding Policy/2014-15
|
ಪ್ರಸ್ತಾವನೆ:
ಮೇಲೆ ಓದಲಾದ ಆದೇಶದಲ್ಲಿ ಕರ್ನಾಟಕ ಕುರಿ ಮತ್ತು
ಉಣ್ಣೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇತರೆ ಅಧಿಕಾರಿಗಳು ಹಾಗೂ ಡಾ. ಸೀತಾರಾಮ,
ಸಹಾಯಕ ನಿರ್ದೇಶಕರು (ನಿವೃತ್ತ) ತಾಂತ್ರಿಕ ಅಧಿಕಾರಿಗಳು ಇವರುಗಳು ತಯಾರಿಸಿದ್ದ ಕರಡು ಕರ್ನಾಟಕದಲ್ಲಿನ
ಕುರಿ ಮತ್ತು ಮೇಕೆಗಳ ಸಂವರ್ಧನಾ ನೀತಿಯ (Draft Breeding Policy for
Sheep and Goat in Karnataka) ಕುರಿತು ಚರ್ಚಿಸಲು ಹಾಗೂ ಅದನ್ನು
ಅನುಮೋದಿಸಲು ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಹಾಗೂ ಇತರೆ 10 ಮಂದಿ ಅಧಿಕಾರಿಗಳು/ತಾಂತ್ರಿಕ ಸದಸ್ಯರನ್ನೊಳಗೊಂಡಂತೆ
ಸಮಿತಿ ರಚಿಸಲಾಗಿದೆ.
ಮೇಲೆ (2) ರಲ್ಲಿ ಓದಲಾದ ಉಲ್ಲೇಖದನ್ವಯ ವ್ಯವಸ್ಥಾಪಕ
ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಇವರು ದಿನಾಂಕ:
05.05.2015 ರಂದು ಸರ್ಕಾರದ ಕಾರ್ಯದರ್ಶಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಇವರ ಅಧ್ಯಕ್ಷತೆಯಲ್ಲಿ
ನಡೆದ ಸಮಿತಿಯ ಸಭೆಯಲ್ಲಿ Breeding Policy for Sheep and Goat
in Karnataka ಇವರ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗಿರುತ್ತದೆ. ಸದರಿ
ಸಭೆಯಲ್ಲಿ ಚರ್ಚಿಸಿದ ಎಲ್ಲಾ ಅಂಶಗಳನ್ನು ಪರಿಶೀಲಿಸಿ, Commissioner
of Animal Husbandry, Government of India ಮತ್ತು
Director, CSWRI, Avikanagar, Dr. Pradip Ghasasi, Associate Director,
Animal Husbandry Division, NARI, Phaltan, Maharastra ಹಾಗೂ
ಇತರೆ ಸಮಿತಿಯ ಸದಸ್ಯರುಗಳು ನೀಡಿದ್ದ ಎಲ್ಲಾ ಸಲಹೆ ಸೂಚನೆಗಳನ್ನು ಪರಿಗಣಿಸಲಾಗಿದ್ದು ಸದರಿ Breeding
Policy ಗೆ ಅನುಮೋದನೆ ನೀಡುವಂತೆ ಕೋರಿರುತ್ತಾರೆ. ಅದರಂತೆ ಈ ಕೆಳಕಂಡ
ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 24 ಕಕುಮ 2015
ಬೆಂಗಳೂರು, ದಿನಾಂಕ: 27.08.2015
ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ
ಸರ್ಕಾರವು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ನಿರ್ವಹಿಸಲಾಗುವ ಅನುಬಂಧದಲ್ಲಿ
ವಿವರಿಸಿರುವ ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆಗಳ ಸಂವರ್ಧನಾ ನೀತಿಗೆ (Breeding
Policy for Sheep and Goat in Karnataka) ಅನುಮೋದನೆ ನೀಡಿ ಆದೇಶಿಸಿದೆ.
ಕರ್ನಾಟಕ
ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ
(ಡಿ.ಎಸ್. ಸುದರ್ಶನ್ ಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ
ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ
(ಪಶುಸಂಗೋಪನೆ)
ಗೆ,
- ಆಯುಕ್ತರು,
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು.
- ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ
ಸೇವಾ ಇಲಾಖೆ, ಬೆಂಗಳೂರು.
- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು.
- ಶಾಖಾ
ರಕ್ಷಾ ಕಡತ: ಹೆಚ್ಚುವರಿ ಪ್ರತಿಗಳು
ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆಗಳ
ಸಂವರ್ಧನಾ ನೀತಿ/Policy
I – ಪೀಠಿಕೆ:
ಕರ್ನಾಟಕ ರಾಜ್ಯದ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ
ಸಣ್ಣ ಮೆಲಕು ಹಾಕುವ ಪ್ರಾಣಿಗಳಾದ ಕುರಿ ಮತ್ತು ಮೇಕೆಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತಿವೆ.
ಹಳ್ಳಿ ಪ್ರದೇಶಗಳಲ್ಲಿನ ಬಡ ಕುಟುಂಬಗಳ ಜೀವನೋಪಾಯಕ್ಕೆ ಕುರಿ ಮತ್ತು ಮೇಕೆ ಸಾಕಾಣಿಕೆ ಆಧಾರ ಸ್ತಂಭವಾಗಿದೆ.
ಆದರೂ ಸಹಾ ಈ ಕೃಷಿ ವಲಯವು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ಕುರಿಗಳ
ಸಂಖ್ಯೆಯಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ.
ಇಸವಿ 2012 ರ ಗಣತಿಯ ಪ್ರಕಾರ, ಕರ್ನಾಟಕ ರಾಜ್ಯವು
ದೇಶದಲ್ಲಿ ಕುರಿ ಮತ್ತು ಮೇಕೆಗಳ ಜಾನುವಾರು ಸಂಖ್ಯೆಯಲ್ಲಿ 3ನೇ ಸ್ಥಾನವನ್ನು ಪಡೆದಿದೆ. ವಾರ್ಷಿಕವಾಗಿ
ಅಂದಾಜು ಉತ್ಪಾದನೆಯಾಗುವ 29907 ಟನ್ ನಷ್ಟು ಕುರಿ ಮಾಂಸ ಮತ್ತು 20375 ಟನ್ ನಷ್ಟು ಮೇಕೆ ಮಾಂಸದ
ಮೌಲ್ಯ ಕ್ರಮೇಣ ರೂ. 107665 ಮತ್ತು ರೂ. 73350 ಲಕ್ಷದಷ್ಟು ಎಂದು ಅಂದಾಜಿಸಲಾಗಿದೆ. ಕುರಿ ಸಾಕಾಣಿಕೆಯು
ಮುಖ್ಯವಾಗಿ ಬಡ ಭೂರಹಿತ, ಸಣ್ಣ ಮತ್ತು ಅತಿ ಸಣ್ಣ ರೈತರ ಕಸುಬಾಗಿದೆ. ಇವರು ತಮ್ಮ ಕುರಿಗಳನ್ನು ರಸ್ತೆಬದಿಯ
ಮರಗಳ ಎಲೆಗಳಿಂದ ಇಲ್ಲವೇ ಕೃಷಿಯ ಉಪ ಉತ್ಪನ್ನಗಳಿಂದ ಇಲ್ಲವೆ ನೈಸರ್ಗಿಕ ಹುಲ್ಲು ಪ್ರದೇಶಗಳಲ್ಲಿ ಮೇಯಿಸುತ್ತಾರೆ.
ಮೊದಲು ಜಾನುವಾರುಗಳಿಗೆ ಮೇಯಲು ಬಳಸುತ್ತಿದ್ದ ಬಯಲು ಪ್ರದೇಶಗಳಲ್ಲಿ ಈಗ ಏಕದಳ ಧಾನ್ಯಗಳನ್ನು ಬೆಳೆಯಲಾಗುತ್ತಿದೆ.
ಇದರ ಪರಿಣಾಮ, ಪ್ರತಿ ಮೂಲ ವಿಸ್ತೀರ್ಣದಲ್ಲಿ ಮೇಯಲ್ಪಡುವ ಜಾನುವಾರುಗಳ ಸಾಂದ್ರತೆ ಈಗ ಗಣನೀಯವಾಗಿ
ಹೆಚ್ಚಾಗಿದೆ. ಮೇಯುವ ಪ್ರದೇಶಗಳ ಕೊರತೆಯಿಂದ ಕುರಿಗಾರರು ಇಂದು ವಲಸೆ ಪದ್ದತಿಯಲ್ಲಿ ಕುರಿ ಮತ್ತು
ಮೇಕೆಗಳನ್ನು ಸಾಕುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕರ್ನಾಟಕದಲ್ಲಿನ ಕುರಿ ಮತ್ತು ಮೇಕೆಗಳ ಅಭಿವೃದ್ಧಿ
ಮತ್ತು ಸಂರಕ್ಷಣೆಗೆ ದೀರ್ಘಕಾಲದ ಸಂವರ್ಧನಾ ನೀತಿ ಮತ್ತು ನಿಲುವುಗಳನ್ನು ರೂಪಿಸುವುದು ಅತ್ಯವಶ್ಯಕ.
ಘನ ಕರ್ನಾಟಕ ಸರ್ಕಾರವು ಪಶುಸಂಗೋಪನೆ ಮತ್ತು ಮೀನುಗಾರಿಕೆ
ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ
ನಿಗಮವು ಬೆಂಗಳೂರಿನ ಪಶುವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಣಿ ತಳಿಶಾಸ್ತ್ರ ಮತ್ತು ಸಂವರ್ಧನಾ ವಿಭಾಗದ
ಸಲಹೆಯ ಮೇರೆಗೆ ಕರಡು ನೀತಿ ಮತ್ತು ನಿಲುವುಗಳನ್ನು ರಚಿಸಿದೆ. ಈ ಪ್ರತಿಗಳನ್ನು ಅಗತ್ಯ ಅವಗಾಹನೆ ಮತ್ತು
ಸಲಹೆಗಾಗಿ ಭಾರತ ಸರ್ಕಾರದ ಪಶುಸಂಗೋಪನಾ ಆಯುಕ್ತರಾದ ಡಾ. ಸುರೇಶ್ ಹೊನ್ನಪ್ಪಗೋಳ್ ಅವರಿಗೂ ಮತ್ತು
ಕೇಂದ್ರೀಯ ಕುರಿ ಮತ್ತು ಉಣ್ಣೆ ಸಂಶೋಧನಾ ಸಂಸ್ಥೆ, ಅವಿಕಾನಗರ, ರಾಜಸ್ಥಾನ ನಿರ್ದೇಶಕರಿಗೂ ಕಳುಹಿಸಲಾಗಿದೆ.
ಕರಡು ಪ್ರತಿಯನ್ನು ಸಮಿತಿಯ ಎಲ್ಲಾ ಸದಸ್ಯರುಗಳಿಗೂ ಕಳುಹಿಸಲಾಗಿದ್ದು ಅವರ ಅಮೂಲ್ಯ ಸಲಹೆ ಸೂಚನೆಗಳನ್ನು
ಸೂಕ್ತವಾಗಿ ಅಳವಡಿಸಿಕೊಳ್ಳಲಾಗಿದ್ದು ಅಂತಿಮ ಕರಡು ಪ್ರತಿಯನ್ನು ರಚಿಸಲಾಗಿದೆ ಮತ್ತು ಅನುಮೋದನೆಗಾಗಿ
ಸದಸ್ಯರುಗಳಿಗೆ ಕಳುಹಿಸಲಾಗಿದೆ. ಸಮಿತಿಯ ಸಭೆಯನ್ನು ದಿನಾಂಕ: 05.05.2015 ರಂದು ಪಶುಸಂಗೋಪನೆ ಮತ್ತು
ಮೀನುಗಾರಿಕೆ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕರೆದಿದ್ದು ಸಮಿತಿಯ ಸಭೆ ನಡೆದಿರುತ್ತದೆ. ಈ ಸಭೆಯಲ್ಲಿ
ಅಂತಿಮ ಕರಡು ಪ್ರತಿಯನ್ನು ಪರಾಮರ್ಶಿಸಿ ಅನುಮೋದಿಸಲಾಗಿದೆ.
II. ಜಿಲ್ಲಾವಾರು ಕುರಿ ತಳಿಗಳು ಮತ್ತು
ಸಂವರ್ಧನೆಗೆ ಶಿಫಾರಸ್ಸು ಮಾಡಲ್ಪಟ್ಟ ನೀತಿ/Policy
ಕ್ರ. ಸ
|
ಜಿಲ್ಲೆ
|
ಇರುವ ಸ್ಥಳ
|
ಶಿಫರಾಸ್ಸು ಮಾಡಲ್ಪಟ್ಟ ನೀತಿ/ಪಾಲಿಸಿ
|
1
|
ಬೀದರ್, ಗುಲ್ಬರ್ಗಾ ಮತ್ತು ಯಾದಗಿರಿ
|
ಡೆಕ್ಕನಿ/ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳು (ವ.ಸ್ಥ.ಕು)
|
ಡೆಕ್ಕನಿ ತಳಿಯ ಸಂರಕ್ಷಣೆ (conservation) ಮತ್ತು ಸಂವರ್ಧನೆ,
ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಡೆಕ್ಕನಿ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು
(upgradation).
|
2
|
ಬಿಜಾಪುರ, ಬೆಳಗಾಂ
|
ಡೆಕ್ಕನಿ/ವ.ಸ್ಥ.ಕು
|
ಡೆಕ್ಕನಿ ತಳಿಯ ಸಂರಕ್ಷಣೆ (conservation) ಮತ್ತು ಸಂವರ್ಧನೆ,
ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಡೆಕ್ಕನಿ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು
(upgradation).
|
3
|
ಬಾಗಲಕೋಟೆ, ಕೊಪ್ಪಳ ಮತ್ತು ರಾಯಚೂರು
|
ಕೆಂಗುರಿ/ಡೆಕ್ಕನಿ/ವ.ಸ್ಥ.ಕು
|
ಕೆಂಗುರಿ/ ಡೆಕ್ಕನಿ ತಳಿಯ ಸಂರಕ್ಷಣೆ (conservation) ಮತ್ತು ಸಂವರ್ಧನೆ,
ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಕೆಂಗುರಿ/ಡೆಕ್ಕನಿ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು.
|
4
|
ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ
|
ವ.ಸ್ಥ,ಕು
|
ವ.ಸ್ಥ.ಕು ಗಳನ್ನು ಬಂಡೂರು/ಹಾಸನ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು
(upgradation).
|
5
|
ಧಾರವಾಡ, ಗದಗ ಮತ್ತು ಹಾವೇರಿ
|
ಡೆಕ್ಕನಿ/ವ.ಸ್ಥ.ಕು
|
ವ.ಸ್ಥ.ಕು ಗಳನ್ನು ಡೆಕ್ಕನಿ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು
(upgradation).
|
6
|
ಬಳ್ಳಾರಿ, ದಾವಣಗೆರೆ ಮತ್ತು ಚಿತ್ರದುರ್ಗ
|
ಬಳ್ಳಾರಿ/ವ.ಸ್ಥ.ಕು
|
ಬಳ್ಳಾರಿ ತಳಿಯ ಸಂರಕ್ಷಣೆ (conservation) ಮತ್ತು ಸಂವರ್ಧನೆ,
ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಬಳ್ಳಾರಿ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು
(upgradation).
|
7
|
ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ
|
ಹಾಸನ/ವ.ಸ್ಥ.ಕು
|
ಹಾಸನ ತಳಿಯ ಸಂರಕ್ಷಣೆ (conservation) ಮತ್ತು ಸಂವರ್ಧನೆ,
ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಹಾಸನ/ಡೆಕ್ಕನಿ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು
(upgradation).
|
8
|
ಮಂಡ್ಯ
|
ಬಂಡೂರು/ವ.ಸ್ಥ.ಕು
|
ಬಂಡೂರು ತಳಿಯ ಸಂರಕ್ಷಣೆ (conservation) ಮತ್ತು ಸಂವರ್ಧನೆ,
ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಬಂಡೂರು ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು
(upgradation).
|
9
|
ಮೈಸೂರು, ಬೆಂಗಳೂರು (ಗ್ರಾ. ಮತ್ತು ನ.), ರಾಮನಗರ, ಕೋಲಾರ,
ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ತುಮಕೂರು
|
ಬಂಡೂರು/ವ.ಸ್ಥ.ಕು, ವಿದೇಶಿ ತಳಿಗಳಿಂದ ಸಂವರ್ಧನೆಗೊಂಡ
ಮಿಶ್ರ ತಳಿಗಳು
|
ಬಂಡೂರು ತಳಿಯ ಸಂರಕ್ಷಣೆ (conservation) ಮತ್ತು ಸಂವರ್ಧನೆ,
ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು) ಬಂಡೂರು ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು
(upgradation).
|
10
|
ಕೊಡಗು
|
ವ್ಯ.ಸ್ಥ.ಕು
|
ವರ್ಗೀಕರಣಗೊಳ್ಳದ ಸ್ಥಳೀಯ ಕುರಿಗಳನ್ನು (ವ.ಸ್ಥ.ಕು)
ಹಾಸನ ತಳಿಗಳಿಂದ ಮೌಲ್ಯವರ್ಧನೆಗೊಳಿಸುವುದು (upgradation).
|
- ಕುರಿಗಾರರು
ಸ್ವ ಇಚ್ಚೆಯಿಂದ ವಿದೇಶಿ ತಳಿಗಳಾದ ರಾಂಬುಲೇಟ್, ಮೆರಿನೋ, ಢಾರ್ಪರ್ ಮತ್ತು ಸ್ಥಳೀಯ ತಳಿ ಗುಣಗಳುಳ್ಳ
ಯಲಗಗಳನ್ನು ಸ್ಥಳೀಯ ಕುರಿಗಳ ಮೌಲ್ಯವರ್ಧನೆಗೆ ಬಳಸಬಹುದಾಗಿದೆ.
- ಯಲಗ
ಕುರಿಗಳಿಗೆ ಇನ್ನೂ ಸಹಾ ತಳಿಯ ಸ್ಥಾನಮಾನ ದೊರೆತಿರುವುದಿಲ್ಲ. ಆದರೂ ಸಹಾ ಅದರ ಮಾಂಸದಲ್ಲಿ ವಿಶೇಷ
ಗುಣಲಕ್ಷಣಗಳು ಇರುವುದರಿಂದ ಬಿಜಾಪುರ, ಬೆಳಗಾಂ, ಬಾಗಲಕೋಟೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ
ಸ್ಥಳೀಯ ಕುರಿಗಳ ಮೌಲ್ಯವರ್ಧನೆಗೆ ಬಳಸಬಹುದಾಗಿದೆ.
- ಬಹು
ಫಲಪ್ರದ ನಾರಿಸುವರ್ಣ ತಳಿಯನ್ನು ಕುರಿಗಳ ಮೌಲ್ಯವರ್ಧನೆಗೆ ಮತ್ತು ಹೆಚ್ಚು ಅವಳಿ ಮತ್ತು ತ್ರಿವಳಿಗಳನ್ನು
ಪಡೆಯಲು ಬಳಸಬಹುದಾಗಿದೆ.