​​​​​

ಕರ್ನಾಟಕ  ವಿಶ್ವ ಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ಸ್ಥಾಪನೆಯ  ಮುಖ್ಯ ಉದ್ದೇಶಗಳು​


  • ಶಿಲ್ಪಕಲೆ ,ಲೋಹ  ಮತ್ತು ಮರಗೆಲಸಗಳಲ್ಲಿ ತೊಡಗಿರುವ  ವಿಶ್ವಕರ್ಮಸಮುದಾಯದ  ಕುಶಲಕರ್ಮಿಗಳಿಗೆ ಹಣಕಾಸಿನ  ಸಹಾಯ ಒದಗಿಸುವ  ಯೋಜನೆಗಳನ್ನು ರೂಪಿಸಿ  ಅನುಷ್ಟಾನಗೊಳಿಸುವುದು .
  • ವಿಶ್ವಕರ್ಮ  ಸಮುದಾಯದವರಿಗೆ ವ್ಯಾಪಾರ ,ಸೇವಾಕೆಂದ್ರ ,ಕೈಗಾರಿಕೆ ಕೃಷಿ ಅವಲಂಬಿತ ಚಟುವಟಿಕೆಗಳಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಮತ್ತು ಅವರ ವೃತ್ತಿಯನ್ನು  ಅಭಿವೃದ್ದಿ  ಪಡಿಸಿಕೊಳ್ಳಲು  ಅರ್ಥಿಕ ಸಹಾಯ ಒದಗಿಸುವುದು ​​.
  • ವಿಶ್ವಕರ್ಮ ಸಮುದಾಯದವರು ಕೈಗೊಳ್ಳುವ  ವೃತ್ತಿಗಳಾದ ಕೆತ್ತನೆ ಕೆಲಸ ,ಚಿನ್ನ  ಬೆಳ್ಳಿ ಕೆಲಸ  ,ಶಿಲ್ಪಿ ಕಲೆ  ,ಲೋಹ  ಮತ್ತು ಮರಗೆಲಸ  ಮೊದಲಾದವುಗಳಲ್ಲಿ  ತಯಾರಿಸಲ್ಪಟ್ಟ  ಉತ್ಪನ್ನಗಳಿಗೆ   ಮಾರುಕಟ್ಟೆ  ಸೌಲಭ್ಯ ಒದಗಿಸುವುದು ಹಾಗು ಹೊರದೇಶಗಳಿಗೆ  ರಪ್ತು ಮಾಡಲು  ಉತ್ತೇಜನ  ಹಾಗು  ಹಣಕಾಸಿನ  ಸೌಲಭ್ಯ ಒದಗಿಸುವುದು ​.
  • ವೃತ್ತಿಪರ  ಕೋರ್ಸ್ ಗಳಲ್ಲಿ   ವ್ಯಾಸಂಗ  ಮಾಡುತ್ತಿರುವ  ವಿಶ್ವಕರ್ಮ ಸಮುದಾಯಗಳ  ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ  ಮುಂದುವರೆಸಲು  ಕಡಿಮೆ ಬಡ್ಡಿದರದಲ್ಲಿ   ಶೈಕ್ಷಣಿಕಸಾಲ ಸೌಲಭ್ಯ ಒದಗಿಸುವುದು ​.

  • ವಿಶ್ವಕರ್ಮ  ಸಮುದಾಯಕ್ಕೆ ಸೇರಿದ ಕುಶಲ ಕರ್ಮಿಗಳಿಗೆ  ವೃತ್ತಿ  ನೈಪುಣ್ಯತೆಯನ್ನು  ಹೆಚ್ಚಿಸಿಕೊಳ್ಳಲು ಅಗತ್ಯ ತರಬೇತಿ ನೀಡುವುದು ಹಾಗು ಸುಧಾರಿತ  ಉಪಕರಣಗಳನ್ನು  ಪಡೆಯಲು ಸಹ್ಯ ಧನ ಒದಗಿಸುವುದು ​.
  •  ವಿಶ್ವ ಕರ್ಮ ಸಮುದಾಯಕ್ಕೆ  ಸೇರಿದ     ಡಾಕ್ಟರ್ ,ಇಂಜಿನಿಯರಿಂಗ್ ​ ​ ,ವಕೀಲರು,ಆರ್ಕಿಟೆಕ್ಟ್ಸ್​  ಮೊದಲಾದವರು  ತಮ್ಮ ವೃತ್ತಿಯನ್ನು  ಕೈಗೊಳ್ಳಲು ಅರ್ಥಿಕ ನೆರವು ಒದಗಿಸುವುದು .