ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ

ಕರ್ನಾಟಕ ಸರ್ಕಾರದ ಉದ್ಯಮ

H.D Kumaraswamy
GOK > KVCDCL > Schemes

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ (ನಿ), (ಕೆ.ವಿ.ಸಿ.ಡಿ.ಸಿ).

 

ವಿಶ್ವಕರ್ಮ ಸಮುದಾಯದ ಜನರ ಆರ್ಥಿಕ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಒದಗಿಸಿದ ಅನುದಾನದಿಂದ ಹಾಗೂ ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದಿಂದ ಪಡೆದ ಆರ್ಥಿಕ ನೆರವಿನಿಂದ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮವು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ನಿಗಮವು ಅನುಷ್ಠಾನಗೊಳಿಸುತ್ತಿರುವ ಪ್ರಮುಖ ಯೋಜನೆಗಳ ಸಂಕ್ಷಿಪ್ತ ಮಾಹಿತಿ ಹಾಗೂ ಕಳೆದ ಮೂರು ವರ್ಷಗಳ ಪ್ರಗತಿ ವಿವರಗಳನ್ನು ಈ ಕೆಳಕಂಡಂತೆ ವಿವರಿಸಿದೆ.

1. ಪಂಚವೃತ್ತಿ ಅಭಿವೃದ್ದಿಗಾಗಿ ಆರ್ಥಿಕ ನೆರವು:-

ವಿಶ್ವಕರ್ಮ ಸಮುದಾಯಗಳ ಸಾಂಪ್ರದಾಯಿಕ ವೃತ್ತಿದಾರರು ಅಥವಾ ವೃತ್ತಿ ಕಸುಬುದಾರರು ತಮ್ಮ ವೃತ್ತಿಯ ಅಭಿವೃದ್ದಿಗಾಗಿ, ಆಧುನಿಕ ಉಪಕರಣಗಳನ್ನು ಖರೀದಿಸಲು, ತಾಂತ್ರಿಕತೆಯನ್ನು ಮೇಲ್ದರ್ಜೆಗೇರಿಸಲು, ವಾರ್ಷಿಕ ಶೇ.4% ಬಡ್ಡಿದರದಲ್ಲಿ ಗರಿಷ್ಠ ರೂ.40,000/-ಗಳವರೆಗೆ ಸಾಲ ಹಾಗೂ ಗರಿಷ್ಠ ರೂ.10,000/-ಗಳ ಸಹಾಯಧನ ಮಂಜೂರು ಮಾಡಲಾಗುವುದು. (ಪಂಚವೃತ್ತಿಗಳೆಂದರೆ, 1) ಚಿನ್ನ ಬೆಳ್ಳಿ ಕೆಲಸ 2) ಶಿಲ್ಪಕಲೆ 3) ಲೋಹದ ಕೆಲಸ 4)ಮರಗೆಲಸ ಮತ್ತು 5) ಎರಕ ಕೆಲಸ ಎಂದು ಪರಿಭಾವಿಸಲಾಗಿದೆ).

 

2017-18ನೇ ಸಾಲಿನಿಂದ ಈ ಯೋಜನೆಯಲ್ಲಿ ಘಟಕ ವೆಚ್ಚವನ್ನು ರೂ.50,000/-ಗಳಿಂದ 1.00 ಲಕ್ಷದವರೆಗೆ ಹೆಚ್ಚಿಸಿ ಆದೇಶಿಸಲಾಗಿದೆ. ಪ್ರಸ್ತುತ ಸಾಲಿನಿಂದ ರೂ.1.00 ಲಕ್ಷದ ಘಟಕ ವೆಚ್ಚಕ್ಕೆ ಗರಿಷ್ಠ ರೂ.80,000/-ಗಳ ವರೆಗೆ ಸಾಲ ಹಾಗೂ ಗರಿಷ್ಠ ರೂ. 20,000/-ಗಳ ಸಹಾಯಧನವನ್ನು ಮಂಜೂರು ಮಾಡಲಾಗುವುದು. ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿ ಮರುಪಾವತಿಸಬೇಕು. 2 ತಿಂಗಳ ವಿರಾಮಾವಧಿ ಇರುತ್ತದೆ.

 

2. ಸ್ವಯಂ ಉದ್ಯೋಗ ನೇರಸಾಲ ಯೋಜನೆ:-

            ವಿಶ್ವಕರ್ಮ ಸಮುದಾಯಗಳಿಗೆ ಸೇರಿದವರು ಸ್ವಯಂ ಉದ್ಯೋಗಕ್ಕೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ರೂ.40,000/- ಸಾಲ ಮತ್ತು ಶೇ.30ರಷ್ಟು ಅಥವಾ ಗರಿಷ್ಠ ರೂ.10,000/-ಗಳ ಸಹಾಯಧನ (ಸಬ್ಸಿಡಿ) ಮಂಜೂರು ಮಾಡಲಾಗುವುದು. ಈ ಯೋಜನೆಯಲ್ಲಿ ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿ ಮರುಪಾವತಿಸಬೇಕು. 2 ತಿಂಗಳು ವಿರಾಮಾವಧಿ ಇರುತ್ತದೆ.


3. ಬ್ಯಾಂಕ್‍ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ:-

ವಿಶ್ವಕರ್ಮ ಸಮುದಾಯಗಳಿಗೆ ಸೇರಿದವರು ಕೈಗೊಳ್ಳುವ ವ್ಯಾಪಾರ, ಕೈಗಾರಿಕೆ, ಸೇವಾ ಉದ್ದಿಮೆ ಹಾಗೂ ಕೃಷಿ ಅವಲಂಭಿತ ಚಟುವಟಿಕೆಗಳಿಗೆ ಬ್ಯಾಂಕ್‍ಗಳ ಮೂಲಕ ಗರಿಷ್ಠ ರೂ.5.00ಲಕ್ಷಗಳ ಸಾಲವನ್ನು ಒದಗಿಸಲಾಗುವುದು. ಘಟಕ ವೆಚ್ಚ ರೂ.1.00ಲಕ್ಷಗಳ ವರೆಗೆ ಶೇ.30ರಷ್ಟು ಗರಿಷ್ಠ ರೂ.10,000/-ಗಳ ಸಹಾಯಧನ ಹಾಗೂ ಶೇ.20ರಷ್ಟು ಮಾರ್ಜಿನ್ ಹಣವನ್ನು ಮತ್ತು ಘಟಕ ವೆಚ್ಚ ರೂ.1.00ಲಕ್ಷಗಳಿಂದ ರೂ.5.00ಲಕ್ಷಗಳವರೆಗೆ ನಿಗಮದಿಂದ ಶೇ.20ರಷ್ಟು ಗರಿಷ್ಠ ರೂ.1.00ಲಕ್ಷಗಳ ಮಾರ್ಜಿನ್ ಹಣವನ್ನು ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.

4. ಅರಿವು-ಶೈಕ್ಷಣಿಕ ಸಾಲ ಯೋಜನೆ:-

            ಈ ಯೋಜನೆಯಡಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಇತ್ಯಾದಿ ವೃತ್ತಿಪರ ಉನ್ನತ ಕೋರ್ಸ್‍ಗಳಲ್ಲಿ ಸಿ.ಇ.ಟಿ ಮೂಲಕ ಆಯ್ಕೆಯಾಗಿ ವ್ಯಾಸಂಗ ಮಾಡುವ ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2ರ ಬಡ್ಡಿದರಲ್ಲಿ ವಾರ್ಷಿಕ ಗರಿಷ್ಠ ರೂ.1,00,000/-ಗಳ ಶೈಕ್ಷಣಿಕ ಸಾಲವನ್ನು ಮಂಜೂರು ಮಾಡಲಾಗುವುದು. ಅಭ್ಯರ್ಥಿ ಮತ್ತು ಅವರ ಕುಟುಂಬದವರ ವಾರ್ಷಿಕ ವರಮಾನವು ರೂ.3.50ಲಕ್ಷಗಳ ಮಿತಿಯಲ್ಲಿರಬೇಕು. ಈ ಯೋಜನೆಯಲ್ಲಿ ಪಡೆದ ಸಾಲವು ವಿದ್ಯಾರ್ಥಿಯ ವ್ಯಾಸಂಗ ಪೂರ್ಣಗೊಂಡ 4ನೇ ತಿಂಗಳಿನಿಂದ ಮರುಪಾವತಿ ಪ್ರಾರಂಭವಾಗುವುದು. ಮರುಪಾವತಿ ಅವಧಿ 3 ವರ್ಷಗಳು, ಮಾಸಿಕ 36 ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿ ಮರುಪಾವತಿಸಬೇಕು.

5. ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆ:-

ಈ ಯೋಜನೆಯಲ್ಲಿ ವಿಶ್ವಕರ್ಮ ಸಮುದಾಯಗಳ ಸಣ್ಣ ಮತ್ತು ಅತೀಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಘಟಕವೆಚ್ಚವು 2.00ಲಕ್ಷರೂ.ಗಳಾಗಿರುತ್ತದೆ. ಇದರಲ್ಲಿ ರೂ.1.50 ಲಕ್ಷಗಳ ಸಹಾಯಧನ ಹಾಗೂ ಸಾಲದ ಮೊತ್ತ ರೂ.50,000/-ಗಳು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ನೀಡಲಾಗಿರುತ್ತದೆ. ಸಾಲದ ಮರುಪಾವತಿ ಅವಧಿಯು 3 ವರ್ಷಗಳು. ಪ್ರತಿ ಕೊಳವೆ ಬಾವಿಗೆ ಸರಾಸರಿಯಾಗಿ ರೂ.50,000/-ಗಳನ್ನು ನಿಗಮದಿಂದ ವಿದ್ಯುದ್ದೀಕರಣ ವೆಚ್ಚಗಳಿಗೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಲಾಗುವುದು.


2017-18ನೇ ಸಾಲಿನಿಂದ ಜಾರಿಗೊಳಿಸಿದ ಹೊಸ ಯೋಜನೆಗಳು:


6. ಮಹಿಳೆಯರಿಗೆ ಮೈಕ್ರೋ ಕ್ರೆಡಿಟ್ ಸಾಲ ಯೋಜನೆ:-

     ಈ ಯೋಜನೆಯಲ್ಲಿ ಮಹಿಳೆಯರು ನಗರ, ಪಟ್ಟಣ ಮತ್ತು ಹೋಬಳಿ ಹಂತಗಳಲ್ಲಿ ಸಣ್ಣ ಪ್ರಮಾಣದ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು            ಸ್ವ-ಸಹಾಯ ಗುಂಪುಗಳ ಮೂಲಕ ಸಾಲ ಸೌಲಭ್ಯ ನೀಡುವುದು. ಈ ಯೋಜನೆಯಡಿಯಲ್ಲಿ ಸಣ್ಣ ವ್ಯಾಪಾರ ಚಟುವಟಿಕೆಗಳಾದ ಹಣ್ಣು, ತರಕಾರಿ ವ್ಯಾಪಾರ, ಹಾಲು ವ್ಯಾಪಾರ, ಹೂ ವ್ಯಾಪಾರ, ಮೀನು ವ್ಯಾಪಾರ, ಟೀ/ಕಾಫಿ ಸ್ಟಾಲ್, ಸಣ್ಣ ವ್ಯಾಪಾರ ಇತ್ಯಾದಿ ವ್ಯಾಪಾರದ ಚಟುವಟಿಕೆಗಳಿಗೆ ಗರಿಷ್ಟ ರೂ.15,000/-ಗಳಿಗೆ ರೂ.10,000/-ಗಳು ಸಾಲ ಶೇ.4ರ ಬಡ್ಡಿದರದಲ್ಲಿ ಹಾಗೂ ಗರಿಷ್ಠ ರೂ.5,000/-ಗಳ ಸಹಾಯಧನ ನೀಡಲಾಗುವುದು. ಈ ಯೋಜನೆಯಲ್ಲಿ ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿ ಮರುಪಾವತಿಸಬೇಕು. 2 ತಿಂಗಳು ವಿರಾಮಾವಧಿ ಇರುತ್ತದೆ.

7. ಕಮ್ಮಾರಿಕೆ, ಅಕ್ಕಸಾಲಿ ಮತ್ತು ಬಡಗಿ ಉದ್ಯಮಿಗಳಿಗೆ ತರಬೇತಿ ಮತ್ತು ಸಾಲ ಯೋಜನೆ:-

ಈ ಯೋಜನೆ ಅಡಿಯಲ್ಲಿ ಸಾಂಪ್ರದಾಯಿಕ ವೃತ್ತಿಗಳಾದ ಕಮ್ಮಾರಿಕೆ, ಅಕ್ಕಸಾಲಿ ಹಾಗೂ ಬಡಗಿ ವೃತ್ತಿಗಳಲ್ಲಿ ತೊಡಗಿರುವ ಕುಶಲಕರ್ಮಿಗಳಿಗೆ 2017-18ನೇ ಸಾಲಿನಲ್ಲಿ ರಾಜ್ಯಾದ್ಯಂತ ಒಟ್ಟು 100 ಫಲಾಪೇಕ್ಷಿಗಳಿಗೆ ರೂ.1,50,000/-ಗಳಂತೆ ಘಟಕ ವೆಚ್ಚ ಮಂಜೂರು ಮಾಡಲಾಗುವುದು. ಇದರಲ್ಲಿ ಶೇ.20 ರಷ್ಟು ಗರಿಷ್ಟ ರೂ.25,000/-ಗಳ ಸಹಾಯಧನ ಮಂಜೂರು ಮಾಡಲಾಗುವುದು. ಈ ಯೋಜನೆ ಅಡಿಯಲ್ಲಿ ಶೇ.80 ರಷ್ಟು ಸಾಲದ ಮೊತ್ತಕ್ಕೆ ಶೇ.4 ಬಡ್ಡಿದರ ವಿಧಿಸಿಲಾಗುವುದು. ಈ ಯೋಜನೆಯಲ್ಲಿ ಪಡೆದ ಸಾಲವನ್ನು 3 ವರ್ಷಗಳ ಅವಧಿಯಲ್ಲಿ 34 ಮಾಸಿಕ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಸೇರಿ ಮರುಪಾವತಿಸಬೇಕು. 2 ತಿಂಗಳು ವಿರಾಮಾವಧಿ ಇರುತ್ತದೆ.


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಸರ್ಕಾರದ ಉದ್ಯಮ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top