ಕಾರ್ಯಗಳು

ಸಲಹೆ, ಸೂಚನೆ ಹಾಗೂ ಸ್ವಪ್ರೇರಿತ ಆಯೋಗದ ಕಾರ್ಯಗಳು.

 • ಕರ್ನಾಟಕ ಸರ್ಕಾರದಿಂದ ಅಥವಾ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಅಥವಾ ಗುರುತಿಸಲ್ಪಟ್ಟ ಸರ್ಕಾರೇತರ ಸಂಸ್ಥೆಗಳಿಂದ ಬಂದಂತಹ ವಿಷಯಗಳನ್ನು ಆಧರಿಸಿ ವರದಿಗಳನ್ನು ನೀಡಲಾಗುತ್ತದೆ. ಸರ್ಕಾರಿ ಆದೇಶ ಸಂಖ್ಯೆ ಲಾ 42 ಹೆಚ್‍ಆರ್‍ಸಿ 2008, ಬೆಂಗಳೂರು ದಿನಾಂಕ 12.01.2009 ರಲ್ಲಿ ನಮೂದಿಸಿರುವ ವಿಷಯಗಳನ್ನು ಆಧರಿಸಿ ಆಯೋಗವು ಸ್ವಪ್ರೇರಿತವಾಗಿ ಕಾರ್ಯ ನಿರ್ವಹಿಸುತ್ತದೆ.
 • ಪ್ಯಾರ ಒಂದರ ವಿಷಯಗಳನ್ನು ಸದಸ್ಯ ಕಾರ್ಯದರ್ಶಿಗಳು, ಗೌರವಾನ್ವಿತ ಅಧ್ಯಕ್ಷರ ಮುಂದೆ ಮಂಡಿಸಿ ಸೂಕ್ತ ಆದೇಶಗಳನ್ನು ಪಡೆದುಕೊಳ್ಳತಕ್ಕದ್ದು. ಅಧ್ಯಕ್ಷರ ಸಲಹೆ/ಸೂಚನೆ ಪ್ರಕಾರ ಗೌರವಾನ್ವಿತ ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಯವರು ಪ್ರಾರಂಭಿಕ ಕ್ರಿಯೆಗಳನ್ನು ನಿರ್ವಹಿಸುವುದು.
   
 • ಗೌರವಾನ್ವಿತ ಸದಸ್ಯರು/ಸದಸ್ಯ ಕಾರ್ಯದರ್ಶಿಯವರು ತಯಾರು ಮಾಡಿದ ಟಿಪ್ಪಣಿಯನ್ನು ಗೌರವಾನ್ವಿತ ಅಧ್ಯಕ್ಷರ ಮುಂದೆ ಚರ್ಚೆಗಾಗಿ ಹಾಗೂ ಮುಂದಿನ ಕ್ರಮಕ್ಕಾಗಿ ಮಂಡಿಸುವುದು. ಕರಡು ಸೂಚನೆಗಳನ್ನು ಆಯೋಗದ ಮುಂದೆ ಮಂಡಿಸಿ, ವಿಷಯಾಧರಿಸಿ ಆಯೋಗವು ಸಮಸ್ಯೆಗಳ ವಿಶ್ಲೇಷಣೆ ಮಾಡಲು ಅವಶ್ಯಕತೆಯುಳ್ಳ ಮಾಹಿತಿಯನ್ನು ಪರಿಶೀಲಿಸಲು ಹಾಗೂ ಸೂಕ್ತ ಕಾರ್ಯ ಕೈಗೊಳ್ಳಲು ಸಂಬಂಧಪಟ್ಟ ವ್ಯಕ್ತಿಗಳನ್ನು ಅಥವಾ ಸಂಸ್ಥೆಯನ್ನು ಸಂಪರ್ಕಿಸಿ ಅವರ ಜೊತೆ ಚರ್ಚಿಸಲಾಗುವುದು.
   
 • ಆಯೋಗವು ಸಂಶೋಧನ ತಜ್ಞರಿಗೆ ವಿಷಯವನ್ನು ಕಳುಹಿಸಿ ಆ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಸಂಗ್ರಹಿಸಲು ಹಾಗೂ ಕ್ರೂಢೀಕರಿಸಲು ಕಳುಹಿಸಬಹುದು.
   
 • ಸಂಪೂರ್ಣ ಮಾಹಿತಿ ಹಾಗೂ ತತ್ರಾಂಶಗಳನ್ನು ಪಡೆದುಕೊಂಡ ನಂತರ ಆಯೋಗವು ಆ ವಿಷಯದಲ್ಲಿ ಮುಂದೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕೂಲಂಕಷವಾಗಿ ಚರ್ಚಿಸಬೇಕು. ಆಯೋಗವು ವಿಷಯಾಧರಿಸಿ ವರದಿ ತಯಾರು ಮಾಡಿದ ನಂತರ ಪೂರ್ಣ ಆಯೋಗದ ಮುಂದೆ ಪರಿಶೀಲನೆ ಹಾಗೂ ಸೂಕ್ತ ಕಾರ್ಯಕ್ಕೆ ಮಂಡಿಸತಕ್ಕದ್ದು. ಪೂರ್ಣ ಆಯೋಗದ ಮುಂದೆ ವರದಿಯನ್ನು ಚರ್ಚೆಗೆ ಒಳಪಡಿಸಿ, ಅವಶ್ಯಕತೆಯಿದಲ್ಲಿ ವರದಿಗೆ ತಿದ್ದುಪಡಿಯನ್ನು ತಂದು ಸರ್ಕಾರದ ಸೂಕ್ತ ಕ್ರಮಕ್ಕಾಗಿ ಅಂತಿಮ ವರದಿಯನ್ನು ಸಿದ್ಧಪಡಿಸುವುದು.
   
 • ಆಯೋಗವು ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಸಂಘಗಳಿಂದ ಸಲಹೆ ಸೂಚನೆಗಳನ್ನು ಪರಿಶೀಲನೆಗೆ ಸ್ವಾಗತಿಸುತ್ತದೆ. ಅಂತಹ ಸಲಹೆ ಸೂಚನೆಗಳನ್ನು ಸದಸ್ಯ ಕಾರ್ಯದರ್ಶಿ, ಕರ್ನಾಟಕ ಕಾನೂನು ಆಯೋಗ, ರೂಂ.ನಂ.302 ಹಾಗೂ 308, 3ನೇ ಮಹಡಿ, ವಿಧಾನಸೌಧ, ಬೆಂಗಳೂರು-560 001 ಗೆ ಕಳುಹಿಸಬಹುದು.