ಷರತ್ತುಗಳು ಹಾಗೂ ನಿಬಂಧನೆಗಳು
ಈ ವೆಬ್ ಸೈಟ್
ಅನ್ನು ಇ-ಆಡಳಿತ ಕೇಂದ್ರವು ವಿನ್ಯಾಸಗೊಳಿಸಿ, ಅಭಿವೃದ್ಧಿ ಪಡಿಸಿ ನಿರ್ವಹಿಸುತ್ತಿದೆ ಹಾಗೂ
ವಿಷಯವಸ್ತುವನ್ನು ಕರ್ನಾಟಕ ಸರ್ಕಾರದ ಸಿಆಸುಇ (ಇ-ಆಡಳಿತ)ವು ಒದಗಿಸುತ್ತದೆ.
ಈ ವೆಬ್
ಸೈಟಿನಲ್ಲಿನ ವಿಷಯವಸ್ತುವಿನ ನಿಖರತೆ ಹಾಗೂ ಚಾಲ್ತಿಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ
ಪ್ರಯತ್ನಗಳನ್ನೂ ಮಾಡಲಾಗಿದೆ, ಅದಾಗ್ಯೂ ಇದನ್ನು ಕಾನೂನು ವ್ಯಾಖ್ಯೆ ಎಂದಾಗಲೀ, ಯಾವುದೇ
ವ್ಯಾಜ್ಯದ ಉದ್ದೇಶಗಳಿಗಾಗಲಿ ಇರುವುದೆಂದು ಪರಿಗಣಿಸಬಾರದು.
ಈ ವೆಬ್ ಸೈಟಿನ
ಬಳಕೆಗೆ ಸಂಬಂಧಿಸಿದಂತೆ ಅಥವಾ ಇದರ ಬಳಕೆಯಿಂದಾಗಿ, ದತ್ತಾಂಶದ ಕಾರಣದಿಂದಾಗಿ ಸಂಭವಿಸುವ ಯಾವುದೇ
ಹಾನಿ, ಲುಕ್ಸಾನು, ವೆಚ್ಚ ಅಥವಾ ನಷ್ಟ, ಇತಿಮಿತಿಯಿಲ್ಲದ ಪರೋಕ್ಷ ಅಥವಾ ತತ್ಕಾರಣವಾಗಿ ಆಗುವ
ನಷ್ಟ, ಹಾನಿಗಳಿಗೆ ಇಲಾಖೆಗೆ ಯಾವ ಸಂದರ್ಭದಲ್ಲೂ, ಯಾವ ಕಾರಣಕ್ಕೂ ಬಾಧ್ಯತೆ ಇರುವುದಿಲ್ಲ.
ಈ ಷರತ್ತು ಹಾಗೂ
ನಿಬಂಧನೆಗಳು ಭಾರತೀಯ ಕಾನೂನುಗಳ ಅನುಸಾರವಾಗಿ ಆಡಳಿತಕ್ಕೊಳಪಡುತ್ತದೆ ಹಾಗೂ ಅರ್ಥೈಸಲ್ಪಡುತ್ತದೆ.
ಈ ಷರತ್ತು ಹಾಗೂ ನಿಬಂಧನೆಗಳ ಅಡಿಯಲ್ಲಿ ಹುಟ್ಟುವ ಯಾವುದೇ ವ್ಯಾಜ್ಯವು ಭಾರತದ ನ್ಯಾಯಾಲಯದ
ವ್ಯಾಪ್ತಿಗೆ ಒಳಪಡತಕ್ಕದ್ದಾಗಿರುತ್ತದೆ.
ಈ ವೆಬ್ ಸೈಟಿನಲ್ಲಿ ಹಾಕಲಾಗುವ
ಮಾಹಿತಿಯು ಸರ್ಕಾರೇತರ/ ಖಾಸಗಿ ಸಂಸ್ಥೆಗಳಿಂದ ಸೃಷ್ಟಿಸಿದ ಹಾಗೂ ನಿರ್ವಹಿಸುತ್ತಿರುವ
ಮಾಹಿತಿಗಳಿಗೆ ಹೈಪರ್ ಟೆಕ್ಸ್ಟ್ ಲಿಂಕುಗಳು ಅಥವಾ ಪಾಯಿಂಟರ್ ಗಳಿರಬಹುದು. ಹಕ್ಕುಸ್ವಾಮ್ಯ
ಕಛೇರಿಯು ಈ ಲಿಂಕುಗಳನ್ನು ಹಾಗೂ ಪಾಯಿಂಟರ್ ಗಳನ್ನು ನಿಮ್ಮ ಮಾಹಿತಿಗಾಗಿಯೇ ಹಾಗೂ
ಅನುಕೂಲಕ್ಕಾಗಿಯೇ ಒದಗಿಸುತ್ತಿದೆ. ನೀವು ವೆಬ್ ಸೈಟಿನ ಹೊರಗಡೆಯ ಲಿಂಕೊಂದನ್ನು ಆಯ್ಕೆ ಮಾಡಿದಾಗ,
ಹಕ್ಕುಸ್ವಾಮ್ಯ ಕಛೇರಿಯ ವೆಬ್ ಸೈಟಿನಿಂದ ನಿರ್ಗಮಿಸಿರುತ್ತೀರಿ, ಹಾಗಾಗಿ ಅಂತಹ ಹೊರ ವೆಬ್ ಸೈಟಿನ
ಮಾಲೀಕರುಗಳು/ ಪ್ರಾಯೋಜಕರುಗಳ ಖಾಸಗಿ ನೀತಿ ಮತ್ತು ಸುರಕ್ಷಾ ನೀತಿಗಳಿಗೆ ಒಳಪಟ್ಟಿರುತ್ತೀರಿ.
ಹಕ್ಕುಸ್ವಾಮ್ಯ ಕಛೇರಿಯು ಇಂತಹ ಲಿಂಕು ಪುಟಗಳು ಸದಾಕಾಲ ಲಭ್ಯವಾಗುವವೆಂದು
ಖಚಿತಪಡಿಸಲಾಗುವುದಿಲ್ಲ. ಇಂತಹ ಲಿಂಕು ಸಂಪರ್ಕಿತ ವೆಬ್ ಸೈಟುಗಳಲ್ಲಿರುವ ಹಕ್ಕುಸ್ವಾಮ್ಯವುಳ್ಳ
ವಿಷಯವಸ್ತುಗಳ ಬಳಕೆಗೆ ಹಕ್ಕುಸ್ವಾಮ್ಯ ಕಛೇರಿಯು ಅಧಿಕೃತತೆಯನ್ನು ನೀಡಲಾಗುವುದಿಲ್ಲ. ಬಳಕೆದಾರರು
ಇಂತಹ ಅಧಿಕೃತತೆಗಾಗಿ ಅಂತಹ ಲಿಂಕಿತ ವೆಬ್ ಸೈಟಿನ ಮಾಲೀಕರಿಗೆ ಕೋರಿಕೆಯನ್ನು ಸಲ್ಲಿಸಲು ಸಲಹೆ
ನೀಡಲಾಗಿದೆ. ಅಂತಹ ಲಿಂಕಿತ ವೆಬ್ ಸೈಟುಗಳು ಭಾರತೀಯ ಸರ್ಕಾರದ ವೆಬ್ ಮಾರ್ಗಸೂಚಿಗಳಿಗೆ
ಬದ್ಧವಾಗಿವೆ ಎಂದು ಖಚಿತ ಮಾಡುವುದಿಲ್ಲ.