ರಾಜ್ಯ ಯೋಜನಾ ಮಂಡಳಿ

ಕರ್ನಾಟಕ ಸರ್ಕಾರ

H.D. Kumaraswamy
GOK > SPB Home > Kannada > ಕಾರ್ಯಗಳು
Last modified at 31/12/2018 15:01 by System Account

​​​ಕಾರ್ಯಗಳು

  • ಪಂಚವಾರ್ಷಿಕ ಹಾಗೂ ವಾರ್ಷಿಕ ಯೋಜನೆಗಳ ತಯಾರಿಕೆ ಹಾಗೂ ಅವುಗಳ ಅನುಷ್ಟಾನದಲ್ಲಿ ಒಟ್ಟಾರೆ ಮಾರ್ಗದರ್ಶನ ನೀಡುವುದು.

  •  ಸ್ವಾಭಾವಿಕ ಮತ್ತು ಮಾನವ ಸಂಪನ್ಮೂಲಗಳ ಗರಿಷ್ಠ ಬಳಕೆಗಾಗಿ ನೀತಿಗಳನ್ನು ರೂಪಿಸಿ ಸಲಹೆ ನೀಡುವುದು.

  • ರಾಜ್ಯದಲ್ಲಿ ಪ್ರಾದೇಶಿಕ ಅಸಮೋತೋಲನವನ್ನು ತಗ್ಗಿಸುವಲ್ಲಿ ಸೂಕ್ತವಾದ ನೀತಿ ಹಾಗೂ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಲಹೆ ನೀಡುವುದು.

  • ಆರ್ಥಿಕ ಸುಧಾರಣಾ ಕಾರ್ಯಕ್ರಮಗಳಿಗೆ ಅನುಸಾರವಾಗಿ ರಾಜ್ಯದ ಆರ್ಥಿಕ ವ್ಯವಸ್ಥೆಯಲ್ಲಿ ಬಂಡವಾಳ ಹೂಡಿಕೆ ಸ್ಥಿತಿ ಸುಧಾರಣೆಗೆ ಸಲಹೆ ನೀಡುವುದು.

  • ಯೋಜನೆಯಡಿ ಅಗತ್ಯವಿರುವ ಬಂಡವಾಳ ಮಟ್ಟ ಹಾಗೂ ಅದಕ್ಕೆ ಬೇಕಾದ ಸಂಪನ್ಮೂಲಗಳ ಹರಿವು ಕುರಿತು ಸಲಹೆ ನೀಡುವುದು.

  • ರಾಷ್ಟ್ರೀಯ ಯೋಜನೆಯ ಚೌಕಟ್ಟಿನೊಳಗೆ ರಾಜ್ಯ ಯೋಜನೆಗೆ ಸೂಕ್ತವಾದ ಕಾರ್ಯತಂತ್ರಗಳ ಬಗ್ಗೆ ಸಲಹೆ ನೀಡುವುದು.

  • ಯೋಜನಾ ಕಾರ್ಯಕ್ರಮಗಳು: ಯೋಜನೆಗಳ ಅನುಷ್ಠಾನದ ಬಗ್ಗೆ ಪರಿಶೀಲನೆ ಹಾಗು ಅವುಗಳ ಕಾರ್ಯಗತಕ್ಕಾಗಿ ಸೂಕ್ತ ಉಪಾಯಗಳನ್ನು ಶಿಫಾರಸ್ಸು ಮಾಡುವುದು.

  • ವಿಕೇಂದ್ರೀಕೃತ ಯೋಜನೆಯನ್ನು ಅಭಿವೃದ್ಧಿಪಡಿಸಲು ಕ್ರಮಗಳನ್ನು ಸೂಚಿಸುವುದು ಮತ್ತು ವಿಶೇಷವಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅನುಷ್ಟಾನ ಹಾಗೂ ಈ ಯೋಜನೆಗಳನ್ನು ರಾಜ್ಯ ವಲಯಗಳಲ್ಲಿ ವಿಲೀನಗೊಳಿಸುವ ಬಗ್ಗೆ ಸೂಕ್ತ ಶಿಫಾರಸ್ಸು ಮಾಡುವುದು.

  • ಸರ್ಕಾರವು ಮಂಡಳಿಗೆ ಕಾಲಕಾಲಕ್ಕೆ ವಹಿಸುವ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ಸಲಹೆ ನೀಡುವುದು

  • ರಾಜ್ಯ ಯೋಜನಾ ಮಂಡಳಿಯ ಕೆಲಸಗಳಿಗೆ ಅಗತ್ಯವಾದ ಸಂಶೋಧನಾ ಅಧ್ಯಯನ ಮತ್ತು ವಿಚಾರ ಸಂಕಿರಣಗಳನ್ನು ಪ್ರಾಯೋಜಿಸುವುದು.​


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ರಾಜ್ಯ ಯೋಜನಾ ಮಂಡಳಿ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top