ಪರಿಚಯ​

ಯೋಜನೆ, ಕಾರ್ಯಕ್ರಮಗಳು ಮತ್ತು ರಾಜ್ಯ ಆದ್ಯತಾ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲು ರಾಜ್ಯ ಯೋಜನಾ ಮಂಡಳಿಯನ್ನು 1993ರ ಕಾರ್ಯಾದೇಶದನ್ವಯ ರಚಿಸಲಾಗಿದೆ.  ರಾಜ್ಯ ಸರ್ಕಾರಗಳ ಬದಲಾವಣೆಯೊಂದಿಗೆ ರಾಜ್ಯ ಯೋಜನಾ ಮಂಡಳಿಯನ್ನು ಪುನರ್ ರಚಿಸಲಾಗಿದೆ.  ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚನೆಗೊಂಡಿರುವ ಈ ಮಂಡಳಿಯು ಒಬ್ಬರು ಉಪಾಧ್ಯಕ್ಷರು, ಮತ್ತು ಅಧಿಕಾರಿ ಹಾಗೂ ಅಧಿಕಾರೇತರ ಸದಸ್ಯರುಗಳನ್ನೊಳಗೊಂಡಿರುತ್ತದೆ.  ಮಂಡಳಿಯಲ್ಲಿ ಯೋಜನಾ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರು, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಲಾಖೆ,  ಸರ್ಕಾರದ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಇವರುಗಳು ಅಧಿಕಾರಿ ಸದಸ್ಯರುಗಳಿರುತ್ತಾರೆ. ಸರ್ಕಾರದ ಪ್ರಧಾನ ಕಾರ್ಯದರ್ಶಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಇವರು ರಾಜ್ಯ ಯೋಜನಾ ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.​  ಅಧಿಕಾರೇತರ ಸದಸ್ಯರು ಸಾಮಾನ್ಯವಾಗಿ ಅನುಭವಿಗಳು ಮತ್ತು ಶಿಕ್ಷಣ ತಜ್ಞರಿರುತ್ತಾರೆ.

​​